ವರ್ಚುವಲ್ ವಿಚಾರಣೆಯಿಂದ ದೀನ- ದಲಿತರಿಗೆ ಸಹಾಯ: ಅವರ ಹಣ, ಸಮಯದ ಉಳಿತಾಯ ಎಂದ ಕೇಂದ್ರ ಕಾನೂನು ಸಚಿವಾಲಯ

ಕೋವಿಡ್ ವೇಳೆ ದೇಶದ ನ್ಯಾಯಾಲಯಗಳಲ್ಲಿ ನಡೆದ ವರ್ಚುವಲ್ ವಿಚಾರಣೆಯಿಂದಾದ ಪ್ರಯೋಜನ ಮತ್ತು ಸೌಲಭ್ಯಗಳನ್ನು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ರಾಜ್ಯಸಭೆಯಲ್ಲಿ ವಿವರಿಸಿದರು.
virtual hearings
virtual hearings

ದೀನದಲಿತರು ಸೇರಿದಂತೆ ಯಾವುದೇ ಸ್ಥಳದಿಂದ ದಾವೆದಾರರು ನ್ಯಾಯಾಲಯಕ್ಕೆ ಹಾಜರಾಗಲು ವರ್ಚುವಲ್ ವಿಚಾರಣೆಗಳು ಹೇಗೆ ಅನುಕೂಲ ಮಾಡಿಕೊಟ್ಟವು ಎಂಬುದನ್ನು ಗುರುವಾರ ರಾಜ್ಯಸಭೆಗೆ ವಿವರಿಸಿದ ಕೇಂದ್ರ ಕಾನೂನು ಸಚಿವಾಲಯ ಇದರಿಂದ ಅವರ ಸಮಯ ಮತ್ತು ಹಣ ಉಳಿತಾಯವಾಗಿದೆ ಎಂದಿತು.

ಕೋವಿಡ್‌ ವೇಳೆ ದೇಶದ ನ್ಯಾಯಾಲಯಗಳಲ್ಲಿ ನಡೆದ ವರ್ಚುವಲ್‌ ವಿಚಾರಣೆಯಿಂದಾದ ಪ್ರಯೋಜನ ಮತ್ತು ಸೌಲಭ್ಯಗಳನ್ನು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ರಾಜ್ಯಸಭೆಗೆ ವಿವರಿಸಿದರು. ಬಿಜೆಪಿ ಸಂಸದ ಡಾ ಅಶೋಕ್ ಬಾಜಪೇಯಿ ಅವರ ಪ್ರಶ್ನೆಗೆ ರಿಜಿಜು ಉತ್ತರಿಸಿದರು.

Also Read
[ವರ್ಚುವಲ್‌ ವಿಚಾರಣೆ] ಕೆಲವರಿಗೆ ನ್ಯಾಯಾಲಯ ತೆರೆಯಬೇಕು, ಕೆಲವರಿಗೆ ಬೇಡ: ಸುಪ್ರೀಂ ಕೋರ್ಟ್

ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳಿಂದಾಗಿ ನ್ಯಾಯಾಲಯದ ವಿಚಾರಣೆ ನಡೆಸಲು ಸಾಧ್ಯವಾಗದಿದ್ದಾಗ ವಿಶೇಷವಾಗಿ ನ್ಯಾಯ ವಿತರಣಾ ವ್ಯವಸ್ಥೆಯ ಮೊರೆ ಹೋಗಲು ದುರ್ಬಲ ವರ್ಗಗಳ ದಾವೆದಾರರಿಗೆ ಈ ವ್ಯವಸ್ಥೆ ಸಹಾಯ ಮಾಡಿದೆ ಎಂದು ಅವರು ತಿಳಿಸಿದರು.

ವರ್ಚುವಲ್‌ ವಿಚಾರಣೆ ಮುಂದುವರೆಸುವುದನ್ನು ಬೆಂಬಲಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಅಂತಹ ನಿರ್ಧಾರ ನ್ಯಾಯಾಂಗ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅವರು ಉತ್ತರಿಸಿದರು.

ವೀಡಿಯೊ ಕಾನ್ಫರೆನ್ಸ್‌ ಮೂಲಕ ಕೋವಿಡ್ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ, ಜಿಲ್ಲಾ ನ್ಯಾಯಾಲಯಗಳು 1,11,40,223 ಪ್ರಕರಣಗಳನ್ನು ಆಲಿಸಿದರೆ, ಹೈಕೋರ್ಟ್‌ಗಳು 31.01.2022 ರವರೆಗೆ 60,21,688 ಪ್ರಕರಣಗಳ (ಒಟ್ಟು 1.71 ಕೋಟಿ ಪ್ರಕರಣ) ವಿಚಾರಣೆ ನಡೆಸಿತು. ಸುಪ್ರೀಂ ಕೋರ್ಟ್ 2,18,891 ಪ್ರಕರಣಗಳನ್ನು ವರ್ಚುವಲ್‌ ವಿಧಾನದ ಮೂಲಕ ವಿಚಾರಣೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದರು.

Related Stories

No stories found.
Kannada Bar & Bench
kannada.barandbench.com