ಮೊಬೈಲ್ ಫೋನ್ ಮೂಲಕ ವರ್ಚುವಲ್ ವಿಚಾರಣೆಗೆ ಹಾಜರಾಗುವ ವಕೀಲರನ್ನು ನಿಷೇಧಿಸಬೇಕಾಗಬಹುದು: ಸಿಜೆಐ ಎಚ್ಚರಿಕೆ

ತಮ್ಮ ಮೊಬೈಲ್ ಫೋನ್ ಮೂಲಕ ವರ್ಚುವಲ್ ಕಲಾಪದಲ್ಲಿ ಭಾಗಿಯಾಗುವ ವಕೀಲರ ವಾಕ್‌ ಅಥವಾ ದೃಶ್ಯ ಸರಿಯಾಗಿ ಸಂವಹನವಾಗದ ಕಾರಣ ಈ ದಿವಸವೊಂದರಲ್ಲೇ ಹೇಗೆ ಹತ್ತು ಪ್ರಕರಣಗಳನ್ನು ಮುಂದೂಡಲಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಮೊಬೈಲ್ ಫೋನ್ ಮೂಲಕ ವರ್ಚುವಲ್ ವಿಚಾರಣೆಗೆ ಹಾಜರಾಗುವ ವಕೀಲರನ್ನು ನಿಷೇಧಿಸಬೇಕಾಗಬಹುದು: ಸಿಜೆಐ ಎಚ್ಚರಿಕೆ

CJI NV Ramana

ಮೊಬೈಲ್‌ ಫೋನ್‌ ಮೂಲಕ ನ್ಯಾಯಾಲಯದ ವರ್ಚುವಲ್‌ ಕಲಾಪಗಳಿಗೆ ಹಾಜರಾಗುವ ವಕೀಲರ ಬಗ್ಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ನೇತೃತ್ವದ ಪೀಠ ಬೇಸರ ವ್ಯಕ್ತಪಡಿಸಿದೆ.

ತಮ್ಮ ಮೊಬೈಲ್ ಫೋನ್ ಮೂಲಕ ವರ್ಚುವಲ್ ಕಲಾಪದಲ್ಲಿ ಭಾಗಿಯಾಗುವ ವಕೀಲರ ವಾಕ್‌ ಅಥವಾ ದೃಶ್ಯ ಸೂಕ್ತವಾಗಿ ಸಂವಹನವಾಗದ ಕಾರಣ ಈ ದಿನವೊಂದರಲ್ಲೇ ಹತ್ತು ಪ್ರಕರಣಗಳನ್ನು ಮುಂದೂಡಲಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ರೀತಿಯಲ್ಲಿ ಪ್ರಕರಣಗಳನ್ನು ಆಲಿಸುವ ಶಕ್ತಿ ನ್ಯಾಯಾಧೀಶರಿಗಿಲ್ಲ ಎಂದು ನ್ಯಾ. ಹಿಮಾ ಕೊಹ್ಲಿ ಹೇಳಿದರು.

Also Read
[ವರ್ಚುವಲ್‌ ವಿಚಾರಣೆ] ಕೆಲವರಿಗೆ ನ್ಯಾಯಾಲಯ ತೆರೆಯಬೇಕು, ಕೆಲವರಿಗೆ ಬೇಡ: ಸುಪ್ರೀಂ ಕೋರ್ಟ್

“ಮೊಬೈಲ್‌ ಮೂಲಕ ಹಾಜರಾಗುತ್ತಿರುವ ವಕೀಲರು ಗೋಚರಿಸುತ್ತಿಲ್ಲ. ನಾವು ಈ ಮೊಬೈಲ್ ವ್ಯವಹಾರವನ್ನು ನಿಷೇಧಿಸಬೇಕಾಗಬಹುದು... ಮಿಸ್ಟರ್ ವಕೀಲರೇ, ನೀವು ಈಗ ಸುಪ್ರೀಂಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದು ನಿಯಮಿತವಾಗಿ ಹಾಜರಾಗುತ್ತೀರಿ. ವಾದ ಮಾಡುವಾಗ ಡೆಸ್ಕ್‌ಟಾಪ್‌ ಬಳಸಲು ನಿಮಗೆ ಆಗುವುದಿಲ್ಲವೇ?” ಎಂದು ಪೀಠವು ಮೊಬೈಲ್‌ ಮೂಲಕ ವರ್ಚುವಲ್‌ ವಿಚಾರಣೆಗೆ ಹಾಜರಾಗಿದ್ದ ವಕೀಲರೊಬ್ಬರಿಗೆ ಖಾರವಾಗಿ ಪ್ರಶ್ನಿಸಿತು.

ಮತ್ತೊಂದು ಪ್ರಕರಣದಲ್ಲಿ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರನ್ನು ಮೊಬೈಲ್ ಫೋನ್ ಬಳಸಿ ವಾದ ಮಾಡುತ್ತಿದ್ದೀರಾ ಎಂದು ಸಿಜೆಐ ಪ್ರಶ್ನಿಸಿದರು. ತಮ್ಮ ಮುಂದೆ ಮೂರು ಪರದೆಗಳು ಆನ್‌ ಆಗಿರುವುದಾಗಿ ಹೆಗ್ಡೆ ಅವರು ತಿಳಿಸಿದಾಗ ನ್ಯಾಯಮೂರ್ತಿಗಳು “ಮಿಸ್ಟರ್ ಹೆಗ್ಡೆ, ದಯವಿಟ್ಟು ಇದನ್ನು ಗಮನಿಸಿ. ಈ ರೀತಿಯ ಪ್ರಕರಣಗಳನ್ನು ಕೇಳಲು ನಮಗೆ ಶಕ್ತಿಯಿಲ್ಲ. ದಯವಿಟ್ಟು ನಾವು ನಿಮ್ಮ ಮಾತುಗಳನ್ನು ಆಲಿಸಲು ಸಾಧ್ಯವಾಗುವಂತಹ ಸಿಸ್ಟಂ ಬಳಸಿ. ಇಂದು ಇದೇ ಪ್ರಕರಣಗಳು ಇದೇ ರೀತಿ ಅಂತ್ಯ ಕಂಡಿದ್ದು ನಾವು ಬೆಳಗಿನಿಂದ ಕೂಗಿಕೊಳ್ಳುತ್ತಿದ್ದೇವೆ” ಎಂದು ಅತೃಪ್ತಿ ವ್ಯಕ್ತಪಡಿಸಿದರು. ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ನಡೆಸಲು ಜನವರಿ 3ರಂದು ಸುಪ್ರೀಂಕೋರ್ಟ್‌ ನಿರ್ಧರಿಸಿತ್ತು.

Related Stories

No stories found.