ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನೂತನ ಅಧ್ಯಕ್ಷರಾಗಿ ವಿಶಾಲ್‌ ರಘು, ಉಪಾಧ್ಯಕ್ಷರಾಗಿ ವಿನಯ್‌ ಮಂಗಳೇಕರ್‌ ಆಯ್ಕೆ

ವಕೀಲ ವಿಶಾಲ್‌ರಘು ಅವರು ಮಂಡ್ಯದವರಾಗಿದ್ದು, ವಕೀಲ ವಿನಯ್‌ ಮಂಗಳೇಕರ್‌ ಅವರು ಬೆಳಗಾವಿಯವರಾಗಿದ್ದಾರೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನಿಯಮ 8ರ ಅಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
Vishal Raghu H L, Chairman and Vinay Mangalekar, Vice Chairman
Vishal Raghu H L, Chairman and Vinay Mangalekar, Vice Chairman

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ನೂತನ ಅಧ್ಯಕ್ಷರಾಗಿ ವಕೀಲರಾದ ಎಚ್‌ ಎಲ್‌ ವಿಶಾಲ್‌ ರಘು ಮತ್ತು ಉಪಾಧ್ಯಕ್ಷರಾಗಿ ವಿನಯ್‌ ಮಂಗಳೇಕರ್‌ ಬಾಳಾಸಾಹೇಬ್‌ ಅವರು ಆಯ್ಕೆಯಾಗಿದ್ದಾರೆ.

ವಕೀಲ ವಿಶಾಲ್‌ ರಘು ಅವರು ಮಂಡ್ಯದವರಾಗಿದ್ದು, ವಕೀಲ ವಿನಯ್‌ ಮಂಗಳೇಕರ್‌ ಅವರು ಬೆಳಗಾವಿಯವರಾಗಿದ್ದಾರೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ನಿಯಮ 8ರ ಅಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ಶುಕ್ರವಾರ 25 ಕೌನ್ಸಿಲ್ ಸದಸ್ಯರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮತದಾತನದ ಮೂಲಕ ಆಯ್ಕೆ ಮಾಡಲಾಗಿದೆ. ಇವರ ಅಧಿಕಾರವಧಿಯು ಒಂದು ವರ್ಷ ಇರಲಿದೆ. ಅಡ್ವೊಕೇಟ್‌ ಜನರಲ್‌ ಅವರು ಪದನಿಮಿತ್ತ ಸದಸ್ಯರಾಗಿದ್ದು, ಅವರು ಮತದಾನದಲ್ಲಿ ಭಾಗಿಯಾಗಿರಲಿಲ್ಲ.

ಈ ಹಿಂದೆ ವಕೀಲರಾದ ಎಂ ಕಾಶೀನಾಥ್‌ ಅವರು ಅಧ್ಯಕ್ಷ ಮತ್ತು ಬಿ ಆರ್‌ ಚಂದ್ರಮೌಳಿ ಅವರು ಉಪಾಧ್ಯಕ್ಷರಾಗಿದ್ದರು.

Kannada Bar & Bench
kannada.barandbench.com