ಶಿಸ್ತು ಅಳವಡಿಸಿಕೊಂಡರೆ ಸಾಂಕ್ರಾಮಿಕ ರೋಗ ತಡೆ ಸಾಧ್ಯ: ಸಿಜೆಐ ಎನ್ ವಿ ರಮಣ

ನಾವೀಗ ಸಂಕಷ್ಟದ ಕಾಲವನ್ನು ಎದುರಿಸುತ್ತಿದ್ದೇವೆ. ವೈರಸ್ ಭೇದಭಾವ ಮಾಡುವುದಿಲ್ಲ. ಇಂತಹ ಸಂದಿಗ್ಧ ಸಮಯದಲ್ಲಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು ಎಂದು ನ್ಯಾ. ರಮಣ ಅಭಿಪ್ರಾಯಪಟ್ಟರು.
Justice NV Ramana
Justice NV Ramana

ಕೋವಿಡ್‌ ಸಾಂಕ್ರಾಮಿಕ ಎದುರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು. ಆದರೆ ಶಿಸ್ತಿನ ಜೀವನದ ಮೂಲಕ ಅದನ್ನು ಸೋಲಿಸಬಹುದು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ತಿಳಿಸಿದರು.

ಇಂದು (ಶನಿವಾರ) ಸುಪ್ರೀಂಕೋರ್ಟ್‌ನ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಮಣ ನ್ಯಾಯಾಲಯದ ಸಿಬ್ಬಂದಿ, ನ್ಯಾಯಾಧೀಶರು ಹಾಗೂ ವಕೀಲರು ಸಾಂಕ್ರಾಮಿಕ ರೋಗದ ಕಪಿಮುಷ್ಠಿಯಲ್ಲಿ ಹೇಗೆ ಸಿಲುಕಿದ್ದಾರೆ ಎಂಬುದನ್ನು ಎತ್ತಿ ತೋರಿಸುವ ಮೂಲಕ ಸಮಾಜ ಕಷ್ಟದ ದಿನಗಳನ್ನು ಹೇಗೆ ಎದುರಿಸುತ್ತಿದೆ ಎಂಬುದನ್ನು ನಿವೃತ್ತ ಸಿಜೆಐ ಎಸ್‌ ಎ ಬೊಬ್ಡೆ ಅವರ ವಿದಾಯ ಸಮಾರಂಭದ ಭಾಷಣದಲ್ಲಿ ಶುಕ್ರವಾರ ವಿವರಿಸಿದ್ದರು.

Also Read
ಅಮರಾವತಿ ಭೂ ಹಗರಣ: ಆಂತರಿಕ ತನಿಖೆ ಬಳಿಕ ನ್ಯಾ. ಎನ್‌ ವಿ ರಮಣ ವಿರುದ್ಧದ ಸಿಎಂ ಜಗನ್‌ ದೂರು ವಜಾ ಮಾಡಿದ ಸುಪ್ರೀಂ

ಸುಪ್ರೀಂಕೋರ್ಟ್‌ ವಕೀಲರ ಸಂಘ ಶುಕ್ರವಾರ 'ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ಬೀಳ್ಕೊಡುಗೆ ಸಮಾರಂಭ' ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರಮಣ ಅವರು, ನಾವು ಕಷ್ಟದ ಸಮಯ ಎದುರಿಸುತ್ತಿದ್ದೇವೆ. ವೈರಾಣುವಿಗೆ ಭೇದಭಾವ ಇಲ್ಲ. ಈ ಕಷ್ಟದ ಸಮಯದಲ್ಲಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು. ನಾವು ಮುಖಗವಸು ಧರಿಸಬೇಕು, ಕೈ ತೊಳೆಯಬೇಕು ಮತ್ತು ಅಗತ್ಯ ಇಲ್ಲದಿದ್ದರೆ ಹೊರಗೆ ಬರಬಾರದು. ಸಾಂಕ್ರಾಮಿಕವನ್ನು ನಾವು ಶಿಸ್ತಿನಿಂದ ಸೋಲಿಸಬಹುದು" ಎಂದು ಹೇಳಿದರು.

Related Stories

No stories found.
Kannada Bar & Bench
kannada.barandbench.com