ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಸೆಕ್ಷನ್ 498ಎ ದುರುಪಯೋಗ ತಡೆಯಬೇಕಿದೆ: ನ್ಯಾ. ನೀಲಾ ಗೋಖಲೆ

ಇಂಟರಾಕ್ಟೀವ್‌ ಲಾಯರ್ಸ್‌ ಅಸೋಸಿಯೇಷನ್‌ ಫಾರ್‌ ವುಮೆನ್‌ (ಐಲಾ) ಸಂಸ್ಥೆ ಬಾಂಬೆ ಹೈಕೋರ್ಟ್‌ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 'ಸೆಕ್ಷನ್ 498ಎ: ಬಳಕೆ ಮತ್ತು ದುರುಪಯೋಗ' ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
Justice Neela Gokhale
Justice Neela Gokhale
Published on

ಪತ್ನಿಯ ವಿರುದ್ಧದ ಕ್ರೌರ್ಯವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ತಪ್ಪಾಗಿ ಗ್ರಹಿಸಲಾದ ಕೆಲವು ದೂರುಗಳು ಇಡೀ ಮಹಿಳೆಯರ ಸ್ಥಿತಿಗತಿಯನ್ನು ಒಂದೇ ತಕ್ಕಡಿಯಲ್ಲಿ ತೂಗಲು ಬಳಕೆಯಾಗಬಾರದು ಎಂದು ಬಾಂಬೆ ಹೈಕೋರ್ಟ್‌  ನ್ಯಯಮೂರ್ತಿ ನೀಲಾ ಗೋಖಲೆ ಶುಕ್ರವಾರ ಹೇಳಿದ್ದಾರೆ.

ಇಂಟರಾಕ್ಟೀವ್‌ ಲಾಯರ್ಸ್‌ ಅಸೋಸಿಯೇಷನ್‌ ಫಾರ್‌ ವುಮೆನ್‌ (ಐಲಾ) ಸಂಸ್ಥೆ ಬಾಂಬೆ ಹೈಕೋರ್ಟ್‌ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 'ಸೆಕ್ಷನ್ 498ಎ: ಬಳಕೆ ಮತ್ತು ದುರುಪಯೋಗ' ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಐಪಿಸಿ ಸೆಕ್ಷನ್ 498 ಎಯನ್ನು ಕೆಲ ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ  ದೃಷ್ಟಿಕೋನ ಕಾನೂನು ರಕ್ಷಣೆ ದೊರೆಯಬೇಕಾದ ನಿಜವಾದ ಸಂತ್ರಸ್ತೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಉಪನ್ಯಾಸದ ಪ್ರಮುಖಾಂಶಗಳು

  • ಅಂತಹ ದೂರುಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ನೈಜ ಪ್ರಕರಣಗಳ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಲಿದೆ.

  • ಅತಿಯಾದ ಪರಿಣಾಮದಿಂದಾಗಿ ನೈಜ ಪ್ರಕರಣಗಳನ್ನು ನ್ಯಾಯಾಧೀಶರು ನೋಡುವ ವಿಧಾನವೂ ಬದಲಾಗಿದೆ. ಇದು ದುರದೃಷ್ಟಕರ.

  •  ಸುಶೀಲ್ ಕುಮಾರ್ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸೆಕ್ಷನ್ 498ಎಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದ್ದರೂ ಅದರ ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡಿದೆ.

  • ಈ ಸೆಕ್ಷನ್‌ ಅನ್ನು ವರದಕ್ಷಿಣೆ ಕಿರುಕುಳದ ವಿರುದ್ಧ ಗುರಾಣಿಯಾಗಿ ಬಳಸಲು ಉದ್ದೇಶಿಸಲಾಗಿತ್ತೇ ವಿನಾ ಮಹಿಳೆ ತನಗೆ ಪಡೆಯಲು ಸಾಧ್ಯವಾಗದ್ದನ್ನು ಪಡೆಯುವ ಅಸ್ತ್ರವಾಗಿ ಅಲ್ಲ.

  • ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆ  ಒದಗದಂತೆ ಈ ಸೆಕ್ಷನ್‌ನ ದುರುಪಯೋಗವನ್ನು ಹೇಗೆ ತಡೆಯುವುದು ಎಂಬುದು  ನ್ಯಾಯಾಧೀಶರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

  • ಅಂತಹ ಸಂದರ್ಭಗಳಲ್ಲಿ ಕಕ್ಷಿದಾರರಿಗೆ ಕಾನೂನು ಸಮುದಾಯ ವಾಸ್ತವಿಕವಾಗಿ ಮಾರ್ಗದರ್ಶನ ಮಾಡಬೇಕು. ಅವರು ಹಲವು ಪ್ರಕರಣಗಳಲ್ಲಿ ಸಿಲುಕುವುದನ್ನು ತಪ್ಪಿಸಬೇಕು.

  •  ಒಬ್ಬ ಮಹಿಳೆ ಮಾಡಿದ ಸಾಂದರ್ಭಿಕ ತಪ್ಪಿಗೆ ಅವಳನ್ನು ನಿಂದಿಸುವುದು ಕ್ರೌರ್ಯವಲ್ಲ, ಆದರೆ ಅವಳನ್ನು ನಿರಂತರವಾಗಿ ಕೆಣಕುವುದು. ಕ್ಷುಲ್ಲಕ ಮತ್ತು ಸುಳ್ಳು ಆಧಾರದ ಮೇಲೆ ಅವಳನ್ನು ಅವಮಾನಿಸುವುದು ಖಂಡಿತವಾಗಿಯೂ ಕ್ರೌರ್ಯ.

  • ಆದ್ದರಿಂದ ಕ್ರೌರ್ಯ ಮತ್ತು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವಿನ ವ್ಯತ್ಯಾಸವನ್ನು  ಅರ್ಥಮಾಡಿಕೊಳ್ಳಬೇಕು.

  • ಐಪಿಸಿ ಸೆಕ್ಷನ್‌ 498ಎ ಅಡಿ ಕ್ರೌರ್ಯ ಅಪರಾಧವಾಗಲಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. 

Kannada Bar & Bench
kannada.barandbench.com