ಸಾಮಾಜಿಕ ಕಾರ್ಯಕರ್ತ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ಬಾಂಬೆ ಹೈಕೋರ್ಟ್ ಗುರುವಾರ ಒಲವು ವ್ಯಕ್ತಪಡಿಸಿದೆ.
ಪ್ರಧಾನ ಆರೋಪಿ ವೀರೇಂದ್ರ ಸಿನ್ಹ ತಾವಡೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾ. ರೇವತಿ ಮೋಹಿತೆ ಡೇರೆ ಅವರಿದ್ದ ಏಕಸದಸ್ಯ ಪೀಠ ಈ ವಿಷಯ ತಿಳಿಸಿತು. ಆರೋಪಿ ಪರ ವಕೀಲರು ಹಾಗೂ ಸಿಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ “ನಾವು ವಿಚಾರಣೆ ತ್ವರಿತಗೊಳಿಸಬೇಕಿದೆ. ನಾವು ಆರೋಪಪಟ್ಟಿ ಅನುಸಾರ ವಿಚಾರಣೆ ನಡೆಸಬೇಕೆ ಹೊರತು ಸಾಕ್ಷಿಯ ಅನುಸಾರವಲ್ಲ. ಅರ್ಜಿ ಆಲಿಸಲು ನಮಗೆ ಒಲವಿಲ್ಲ. ಅದನ್ನು ನಾವು ಬಾಕಿ ಇಡುತ್ತೇವೆ. ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನಾವು ಹೇಗೆ ತಾನೆ ಸಾಕ್ಷಿ ವಿಚಾರಣೆ ನಡೆಸಲು ಸಾಧ್ಯ? ”ಎಂದು ಪ್ರಶ್ನಿಸಿತು.
ಹೆಚ್ಚಿನ ಮಾಹಿತಿಗಾಗಿ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ಜಾಲತಾಣದ ಲಿಂಕ್ ಗಮನಿಸಿ.