ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಸ್ಥಾನಕ್ಕೆ ಎಸ್ ಎನ್ ಮುಖರ್ಜಿ ರಾಜೀನಾಮೆ

ಮುಖರ್ಜಿ ಅವರನ್ನು ಸೆಪ್ಟೆಂಬರ್ 15, 2021ರಂದು ಎಜಿ ಆಗಿ ನೇಮಿಸಲಾಗಿತ್ತು. ಅಂದಿನಿಂದ ಹೈಕೋರ್ಟ್‌ನಲ್ಲಿ ಅವರು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ.
SN Mookherjee
SN Mookherjee

ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಎಸ್‌ ಎನ್ ಮುಖರ್ಜಿ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ವಿಚಾರವನ್ನು ಬಾರ್‌ ಅಂಡ್‌ ಬೆಂಚ್‌ಗೆ ದೃಢೀಕರಿಸಿದ ಅವರು “ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆ ಪತ್ರದಲ್ಲಿ ಈ ನಿರ್ಧಾರಕ್ಕೆ ಕಾರಣ ಸೂಚಿಸಿಲ್ಲ” ಎಂದು ತಿಳಿಸಿದರು.

Also Read
ಸರಾಫ್- ಲೂತ್ರಾ ಮಧ್ಯಸ್ಥಿಕೆ ವ್ಯಾಜ್ಯ: ಎಲ್ಲಾ ಮೂವರು ಮಧ್ಯಸ್ಥಿಕೆದಾರರ ರಾಜೀನಾಮೆ

ಮುಖರ್ಜಿ ಅವರನ್ನು ಸೆಪ್ಟೆಂಬರ್ 15, 2021ರಂದು ಎಜಿ ಆಗಿ ನೇಮಿಸಲಾಗಿತ್ತು. ಅಂದಿನಿಂದ ಹೈಕೋರ್ಟ್‌ನಲ್ಲಿ ಅವರು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದರು.

ಒಡಿಶಾದ ಕಟಕ್‌ನಲ್ಲಿ ಜನಿಸಿದ ಮುಖರ್ಜಿ ಅವರು ಲಂಡನ್‌ನಲ್ಲೂ ತಮ್ಮ ವಕೀಲಿಕೆಯ ಪ್ರೌಢಿಮೆ ಮೆರೆದಿದ್ದಾರೆ. ತಮ್ಮ42ನೇ ವಯಸ್ಸಿಗೆ ಹಿರಿಯ ವಕೀಲರಾಗಿ ನೇಮಕವಾದ ಅವರು ಸಾಗರ ಕಾನೂನುಗಳು, ಕಂಪನಿ ಕಾನೂನು, ಬೌದ್ಧಿಕ ಆಸ್ತಿ ಕಾನೂನು, ಕಾರ್ಪೊರೇಟ್ ದಿವಾಳಿತನ ಕಾನೂನು ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಪಡೆದವರಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com