ಬಂಧಿತರು ಮತ್ತು ಅಪರಾಧಿಗಳ ಜೈವಿಕ ಮಾದರಿಗಳನ್ನು ಸಂಗ್ರಹಿಸಲು ಮತ್ತು ಶೇಖರಿಸಿಡಲು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ ಅನುಮತಿಸುವ ಅಪರಾಧ ಪ್ರಕ್ರಿಯಾ (ಪತ್ತೆ ಹಚ್ಚುವಿಕೆ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರಂತಹ ಹಿರಿಯ ಸಂಪುಟ ದರ್ಜೆ ಸಚಿವರ ಅನುಪಸ್ಥಿತಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಸದನದಲ್ಲಿ ಮಸೂದೆ ಮಂಡಿಸಿದರು.
ಅಪರಾಧಿಗಳ ದೈಹಿಕ ಅಳತೆ ಸಂಗ್ರಹಿಸಲು ಈ ಮಸೂದೆ ಕಾನೂನಾತ್ಮಕ ಸಮ್ಮತಿ ನೀಡುತ್ತದೆ. ಮಸೂದೆಯಲ್ಲಿ ತಿಳಿಸಿರುವಂತೆ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ಇದು ತನಿಖೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತಗೊಳಿಸಲು ಸಹಾಯ ಮಾಡುತ್ತದೆ. 1920ರ ಕೈದಿಗಳ ಗುರುತಿಸುವಿಕೆ ಕಾಯಿದೆಯನ್ನು ಇದು ರದ್ದುಗೊಳಿಸುತ್ತದೆ.
ಮಸೂದೆಯಿಂದಾಗಿ ಮುಂದುವರಿದ ದೇಶಗಳಲ್ಲಿ ಬಳಸಲಾಗುವ ಮಾಪನ ತಂತ್ರಗಳನ್ನು ಬಳಸಿ ನಂಬಲರ್ಹ ಮತ್ತು ವಿಶ್ವಾಸಾರ್ಹ ಫಲಿತಾಂಶ ನೀಡಲು ಸಹಾಯಕವಾಗುತ್ತದೆ. ತನಿಖಾ ಸಂಸ್ಥೆಗಳು ಸಾಕಷ್ಟು ಕಾನೂನುಬದ್ಧವಾಗಿ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಯಾವುದೇ ಆರೋಪಿಗಳು ಮಾಡಿದ ಅಪರಾಧಗಳನ್ನು ಸಾಬೀತುಪಡಿಸಲು ನೆರವು ದೊರೆಯುತ್ತದೆ.
ಮಸೂದೆಗೆ ವಿಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿದವು. ಮಸೂದೆ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಭಾರತದಲ್ಲಿ ಇನ್ನೂ ಮಾಹಿತಿ ಗೌಪ್ಯತೆ ಕಾನೂನು ಜಾರಿಯಾಗಿಲ್ಲ ಎಂದು ವಿರೋಧಿಸಿದವು. ಸದನದ 120 ಸದಸ್ಯರು ವಿಧೇಯಕವನ್ನು ಮಂಡಿಸುವುದರ ಪರವಾಗಿ ಮತ ಚಲಾಯಿಸಿದರೆ, 58 ಸದಸ್ಯರು ಅದರ ವಿರುದ್ಧ ಮತ ಹಾಕಿದರು.
[2022ರ ಅಪರಾಧ ಪ್ರಕ್ರಿಯೆ (ಪತ್ತೆಹಚ್ಚುವಿಕೆ) ಮಸೂದೆಯ ಪ್ರತಿಯನ್ನು ಇಲ್ಲಿ ಓದಿ: