ವಾಟ್ಸಾಪ್ ಗೋಪ್ಯತಾ ನೀತಿ: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ

ಅರ್ಜಿದಾರರ ವಿರೋಧದ ನಡುವೆಯೂ ಹೊಸ ಮಸೂದೆಯನ್ನು ಶಾಸಕಾಂಗ ಪರಿಗಣಿಸುವವರೆಗೆ ವಿಚಾರಣೆಯನ್ನು ಸ್ಥಗಿತಗೊಳಿಸಲು ಪೀಠ ಒಪ್ಪಿಕೊಂಡಿತು.
WhatsApp Privacy, Supreme Court
WhatsApp Privacy, Supreme Court

ಜುಲೈನಲ್ಲಿ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಬಳಿಕ ವಾಟ್ಸಾಪ್‌ ಗೋಪ್ಯತಾ ನೀತಿಗೆ ಸಂಬಂಧಿಸಿ ಪ್ರಕರಣವನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ಕರ್ಮಣ್ಯ ಸಿಂಗ್ ಸರೀನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ದತ್ತಾಂಶ ಸಂರಕ್ಷಣಾ ಮಸೂದೆ- 2022 ಅನ್ನು ಸಂಸತ್ತಿನ ಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ನೀಡಿದ ಮಾಹಿತಿ ಆಧರಿಸಿ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಮುಂದೂಡಿತು.

Also Read
ವಾಟ್ಸಾಪ್‌ ಗೋಪ್ಯತಾ ನೀತಿಯ ಕುರಿತಾದ ಸಿಸಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

ಅರ್ಜಿದಾರರ ವಿರೋಧದ ನಡುವೆಯೂ ಹೊಸ ಮಸೂದೆಯನ್ನು ಶಾಸಕಾಂಗ ಪರಿಗಣಿಸುವವರೆಗೆ ವಿಚಾರಣೆಯನ್ನು ಸ್ಥಗಿತಗೊಳಿಸಲು ಪೀಠ ಒಪ್ಪಿಕೊಂಡಿತು.

“ಜುಲೈ 23 ರಂದು ಮುಂಗಾರು ಅಧಿವೇಶನದಲ್ಲಿ ಎಲ್ಲಾ ಕಳವಳಗಳನ್ನು ಪರಿಹರಿಸುವ ವಿಧೇಯಕ ಮಂಡಿಸಲಾಗುವುದು ಎಂಬ ಎಜಿ ಅವರ ಹೇಳಿಕೆಯನ್ನು ನಾವು ಪರಿಗಣಿಸಿದ್ದೇವೆ. ಪ್ರಕರಣವನ್ನು ಆಗಸ್ಟ್‌ ಮೊದಲ ವಾರದಲ್ಲಿ ಪೀಠ ರಚಿಸುವ ಸಲುವಾಗಿ ಸಿಜೆಐ ಅವರ ಮುಂದೆ ಇರಿಸಲಾಗುವುದು" ಎಂದು ನ್ಯಾಯಾಲಯ ನುಡಿಯಿತು.

ಜನವರಿ 2021 ರಲ್ಲಿ ಜಾರಿಗೆ ತಂದ ವಾಟ್ಸಾಪ್‌ನ ಗೋಪ್ಯತಾ ನೀತಿ, ಸಂವಿಧಾನದ  21 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬುದು ಪೀಠದ ಎದುರಿರುವ ಕಾನೂನಾತ್ಮಕ ಪ್ರಶ್ನೆಯಾಗಿದೆ.

Related Stories

No stories found.
Kannada Bar & Bench
kannada.barandbench.com