ವೈಯಕ್ತಿಕ ಕಾನೂನು ಹಾಗೂ ಅಪ್ರಾಪ್ತರ ನಡುವಿನ ಸಂಘರ್ಷದಲ್ಲಿ ಅಪ್ರಾಪ್ತರ ಒಳಿತೇ ಗೆಲ್ಲಬೇಕು: ಛತ್ತೀಸ್‌ಗಢ ಹೈಕೋರ್ಟ್

ಮಕ್ಕಳ ಪಾಲನೆಗೆ ಸಂಬಂಧಿಸಿದ ಸಂಘರ್ಷದ ಕುರಿತು ತೀರ್ಪು ನೀಡುವಾಗ ಶಾಸನಬದ್ಧ ಕಟ್ಟುಪಾಡುಗಳಾಚೆಗೆ ಮಾನವೀಯ ಸ್ಪರ್ಶಕ್ಕೆ ಪ್ರಾಮುಖ್ಯ ನೀಡಬೇಕು ಎಂದು ಪೀಠ ಒತ್ತಿ ಹೇಳಿತು.
Chhattisgarh High Court

Chhattisgarh High Court

ಅಪ್ರಾಪ್ತ ವಯಸ್ಕರನ್ನು ಒಳಗೊಳ್ಳುವ ವೈಯಕ್ತಿಕ ಕಾನೂನು ಮತ್ತು ಅಪ್ರಾಪ್ತರ ಕಲ್ಯಾಣದ ನಡುವೆ ಸಂಘರ್ಷ ಉಂಟಾದ ಸಂದರ್ಭದಲ್ಲಿ , ಅಪ್ರಾಪ್ತರ ಕಲ್ಯಾಣವೇ ಮೇಲುಗೈ ಸಾಧಿಸಬೇಕು ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ಇರ್ಫಾನ್ ಉರ್ ರಹೀಮ್ ಖಾನ್ ವಿರುದ್ಧ ಫರ್ಹಾ ಖಾನ್].

ಮಕ್ಕಳ ಪಾಲನೆಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಮಕ್ಕಳ ಆಯ್ಕೆಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ರಜನಿ ದುಬೆ ಅವರಿದ್ದ ಪೀಠ “ತಂದೆ ಮತ್ತು ತಾಯಿಯ ನಡುವಿನ ಯುದ್ಧದಲ್ಲಿ ಮಕ್ಕಳನ್ನು ಸರಕು ಎಂಬುದಾಗಿ ಭಾವಿಸಬಾರದು” ಎಂದಿತು.

" ಅಪ್ರಾಪ್ತ ವಯಸ್ಕರನ್ನು ಒಳಗೊಳ್ಳುವ ವೈಯಕ್ತಿಕ ಕಾನೂನು ಮತ್ತು ಅಪ್ರಾಪ್ತ ವಯಸ್ಕರ ಕಲ್ಯಾಣದ ನಡುವೆ ಸಂಘರ್ಷವಿದ್ದರೆ, ಎರಡನೆಯದು ಮೇಲುಗೈ ಸಾಧಿಸಬೇಕು. ಹಾಗೆಯೇ ಕಾನೂನಿನ ನಿಬಂಧನೆಗಳು ಮತ್ತು ಪೋಷಕರ ಕಾಯಿದೆಯ ನಿಯಮಾವಳಿಗಳ ನಡುವಿನ ಸಂಘರ್ಷದಲ್ಲಿ ಎರಡನೆಯದು ಮೇಲುಗೈ ಸಾಧಿಸುತ್ತದೆ ”ಎಂದು ನ್ಯಾಯಾಲಯ ಹೇಳಿದೆ.

ತನ್ನ ಇಬ್ಬರು ಮಕ್ಕಳನ್ನು ತಾಯಿಯ ವಶಕ್ಕೆ ಒಪ್ಪಿಸುವಂತೆ ಕೌಟುಂಬಿಕ ನ್ಯಾಯಾಲಯವೊಂದು ನೀಡಿದ್ದ ಆದೇಶದ ವಿರುದ್ಧದ ಮೇಲ್ಮನವಿಯ ವಿಚಾರಣೆ ಪೀಠದಲ್ಲಿ ನಡೆಯಿತು.

Also Read
ಮದುವೆಗೆ ಬೆದರಿ ಮನೆ ತೊರೆದ ಬಾಲಕಿ; ಶಿಕ್ಷಣ ಮುಂದುವರಿಸಲು ಬಾಲ ಮಂದಿರಕ್ಕೆ ಕಳುಹಿಸಿದ ನ್ಯಾಯಾಲಯ

ಮಕ್ಕಳ ಪಾಲನೆಗೆ ಸಂಬಂಧಿಸಿದ ವ್ಯಾಜ್ಯದ ಕುರಿತು ತೀರ್ಪು ನೀಡುವಾಗ ಶಾಸನಬದ್ಧ ಕಟ್ಟುಪಾಡುಗಳಾಚೆಗೆ ಮಾನವೀಯ ಸ್ಪರ್ಶಕ್ಕೆ ಪ್ರಾಮುಖ್ಯ ನೀಡಬೇಕು ಎಂದು ಅದು ಈ ಸಂದರ್ಭದಲ್ಲಿ ನ್ಯಾಯಾಲಯವು ಒತ್ತಿ ಹೇಳಿತು.

ವಿಚಾರಣೆ ವೇಳೆ ಇಸ್ಲಾಂ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸಿದ ಪೀಠ ಕೌಟುಂಬಿಕ ನ್ಯಾಯಾಲಯದ ಆದೇಶಕ್ಕೆ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ. ಮಕ್ಕಳ ಪಾಲನೆಯನ್ನು ತಾಯಿಯೇ ಮುಂದುವರೆಸಬೇಕು ಎಂದು ಹೇಳಿತು. ಆದರೂ ಮಕ್ಕಳನ್ನು ತಂದೆ ಭೇಟಿ ಮಾಡುವ ಹಕ್ಕಿಗೆ ಒತ್ತು ಕೊಟ್ಟ ನ್ಯಾಯಾಲಯ ಅದಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ನೀಡಿತು.

Related Stories

No stories found.
Kannada Bar & Bench
kannada.barandbench.com