ಕೋವಿಡ್ ಅಲೆ ಇಳಿದರೂ ಹಾಜರಾಗದ ವಿದ್ಯಾರ್ಥಿಗಳು: ದೆಹಲಿ ಹೈಕೋರ್ಟ್ ಗರಂ [ಚುಟುಕು]

Delhi High Court, Delhi University

Delhi High Court, Delhi University

Published on

ಕೋವಿಡ್‌ ಮೂರನೇ ಅಲೆ ಇಳಿಮುಖವಾಗಿದ್ದರೂ ವಿದ್ಯಾರ್ಥಿಗಳು ಕಾಲೇಜಿಗೆ ಏಕೆ ಬರುತ್ತಿಲ್ಲ ಎಂದು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ. ಮೇ ತಿಂಗಳಿನಿಂದ ಭೌತಿಕವಾಗಿ ಎಲ್ಲ ಪರೀಕ್ಷೆಗಳನ್ನು ನಡೆಸುವ ಕುರಿತು ದೆಹಲಿ ವಿಶ್ವವಿದ್ಯಾಲಯ ಕೈಗೊಂಡಿದ್ದ ನಿರ್ಧಾರವನ್ನು ರದ್ದುಗೊಳಿಸಲು ನ್ಯಾಯಮೂರ್ತಿ ರೇಖಾ ಪಲ್ಲಿ ಅವರಿದ್ದ ಪೀಠ ನಿರಾಕರಿಸಿತು. ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಇನ್ನು 21 ದಿನ ಮಾತ್ರವೇ ಬಾಕಿ ಉಳಿದಿದ್ದು ಈ ಅವಧಿಗೆ ಹೊರಗಿನಿಂದ ಬಡ ವಿದ್ಯಾರ್ಥಿಗಳು ಬರುವುದು ಕಷ್ಟಸಾಧ್ಯ ಎನ್ನುವುದು ವಿದ್ಯಾರ್ಥಿಗಳ ಪರ ವಕೀಲರ ವಾದವಾಗಿತ್ತು. ಆದರೆ, ಇದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. ವಿದ್ಯಾರ್ಥಿಗಳು ಹಾಜರಾಗಬೇಕು ಎಂದಿತು.

ಇದೇ ವೇಳೆ ತರಗತಿಗಳನ್ನು ನಡೆಸುವ ವಿಚಾರವಾಗಿ ವಿದ್ಯಾರ್ಥಿಗಳ ಕೋರಿಕೆಗೆ ಸಂಬಂಧಿಸಿದಂತೆ ಸ್ಪಂದಿಸಿದ ನ್ಯಾಯಮೂರ್ತಿಗಳು ಹೈಬ್ರಿಡ್‌ ವಿಧಾನದಲ್ಲಿ ತರಗತಿಗಳನ್ನು ನಡೆಸಲು ಸಾಧ್ಯವೇ ಎಂಬ ಬಗ್ಗೆ ವಿವಿಯಿಂದ ಸೂಚನೆಗಳನ್ನು ಪಡೆಯುವಂತೆ ವಿವಿ ಪರ ವಕೀಲರಿಗೆ ಸೂಚಿಸಿತು. ಮುಂದಿನ ವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com