![ಪತಿಯ ಆಕ್ಷೇಪ ಧಿಕ್ಕರಿಸಿ ಪರ ಪುರುಷನಿಗೆ ಪತ್ನಿ ಫೋನ್ ಮಾಡುವುದು ವೈವಾಹಿಕ ಕ್ರೌರ್ಯ: ಕೇರಳ ಹೈಕೋರ್ಟ್ [ಚುಟುಕು]](http://media.assettype.com/barandbench-kannada%2F2022-02%2Fe424bf11-95a3-4f9c-84c3-c4cf82e124e5%2Fbarandbench_2022_02_2428ec98_8bbc_4ad3_aa9f_5aeea6ad1f3b_01.jpg?w=480&auto=format%2Ccompress&fit=max)
ಗಂಡನ ಎಚ್ಚರಿಕೆ ನಿರ್ಲಕ್ಷಿಸಿ ಅಪರಾತ್ರಿಯಲ್ಲಿ ಬೇರೊಬ್ಬ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ದೂರವಾಣಿ ಕರೆ ಮಾಡುವುದು ವೈವಾಹಿಕ ಕ್ರೌರ್ಯಕ್ಕೆ ಸಮ ಎಂದು ಕೇರಳ ಹೈಕೋರ್ಟ್ ದಂಪತಿಗೆ ವಿಚ್ಛೇದನ ನೀಡುವ ವೇಳೆ ತಿಳಿಸಿದೆ. ಕ್ರೌರ್ಯವನ್ನು ರೂಪಿಸಲು ದೈಹಿಕ ಹಿಂಸಾಚಾರ ಸಂಪೂರ್ಣ ಅನಿವಾರ್ಯವಲ್ಲ ಎಂದು ಕೂಡ ನ್ಯಾಯಮೂರ್ತಿಗಳಾದ ಎ ಮುಹಮದ್ ಮುಸ್ತಾಕ್ ಮತ್ತುಕೌಸರ್ ಎಡಪ್ಪಗತ್ ಅವರಿದ್ದ ಪೀಠ ಇದೇ ವೇಳೆ ಹೇಳಿದೆ. ವ್ಯಭಿಚಾರ ಮತ್ತು ಕ್ರೌರ್ಯವನ್ನು ಆಧರಿಸಿ ತಮ್ಮ ವಿವಾಹವನ್ನು ವಿಸರ್ಜಿಸಬೇಕು ಎಂದು ಪತಿಯೊಬ್ಬರು ತೋಡುಪುಳದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.