ಸಂಜಯ್ ರಾವುತ್ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ₹ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಸೋಮೈಯ ಪತ್ನಿ [ಚುಟುಕು]

Kirit Somaiya and Sanjay Raut
Kirit Somaiya and Sanjay Raut Twitter

ತಮ್ಮ ವಿರುದ್ಧ ಮರಾಠಿ ಪತ್ರಿಕೆ ಹಾಗೂ ಶಿವಸೇನಾ ಮುಖವಾಣಿ ʼಸಾಮ್ನಾʼದಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಿದ್ದಕ್ಕಾಗಿ ಬಿಜೆಪಿ ನಾಯಕ ಕಿರೀಟ್‌ ಸೋಮೈಯ ಪತ್ನಿ ಮೇಧಾ ಸೋಮೈಯ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಶಿವಸೇನಾ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್ ವಿರುದ್ಧ ₹ 100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಶೌಚಾಲಯ ಹಗರಣದಲ್ಲಿ ತಾವು ಭಾಗಿಯಾಗಿರುವುದಾಗಿ ಸಾಮ್ನಾದಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿದೆ ಎಂದು ಮೇಧಾ ಆರೋಪಿಸಿದ್ದಾರೆ. ಪರಿಸರ ಇಲಾಖೆಯಿಂದ ಅನುಮತಿ ಪಡೆಯದೆ ಮ್ಯಾಂಗ್ರೋವ್‌ ಜೌಗು ಪ್ರದೇಶದ ಕಾಡು ಕಡಿದು ಅನಧಿಕೃತ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಶಿವಸೇನೆಯ ಮುಖವಾಣಿಯಾದ ʼಸಾಮ್ನಾʼದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಅದರ ಪ್ರಧಾನ ಸಂಪಾದಕರಾದ ಸಂಜಯ್‌ ರಾವುತ್‌ ವಿರುದ್ಧ ಮೊಕದ್ದಮೆಯನ್ನು ಮೇಧಾ ಹೂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com