ಮಹಿಳೆಯರು ವಕೀಲಿ ವೃತ್ತಿಯಲ್ಲಿ ತಮ್ಮನ್ನು ತಾವು ನಿರೂಪಿಸಲು ಸಂಪೂರ್ಣ ತೊಡಗಿಸಿಕೊಳ್ಳಬೇಕು: ನ್ಯಾ. ಪ್ರತಿಭಾ ಸಿಂಗ್

ವಕೀಲೆಯರ ದಿನದ ಅಂಗವಾಗಿ ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (SILF) ಮಹಿಳಾ ಸಮೂಹ ದೆಹಲಿ ಹೈಕೋರ್ಟ್ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಸಿಂಗ್ ಉದ್ಘಾಟನಾ ಭಾಷಣ ಮಾಡಿದರು.
Justice Prathiba Singh
Justice Prathiba Singh

ಮಹಿಳೆಯರು ತಮ್ಮನ್ನು ತಾವು ನಿರೂಪಿಸಲು ಇನ್ನಷ್ಟು ಎತ್ತರಕ್ಕೆ ಏರಬೇಕಿದೆ ಎಂಬುದು ವಕೀಲಿ ವೃತ್ತಿಯಲ್ಲಿನ ಈಗಿನ ವಾತಾವರಣ ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಶನಿವಾರ ಹೇಳಿದ್ದಾರೆ.

ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (SILF) ಮಹಿಳಾ ಸಮೂಹ ವಕೀಲೆಯರ ದಿನದ ಅಂಗವಾಗಿ ದೆಹಲಿ ಹೈಕೋರ್ಟ್‌ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ನ್ಯಾ.  ಸಿಂಗ್ ಈ ವಿಚಾರ ತಿಳಿಸಿದರು ತಿಳಿಸಿದರು.

ವಕೀಲ ವೃತ್ತಿಯಲ್ಲಿನ ಪರಿಸರದಲ್ಲಿ ಮಹಿಳೆಯರು ತಮ್ಮನ್ನು ತಾವು ನಿರೂಪಿಸಲು ಶೇ 120ರಷ್ಟು ತೊಡಗಿಸಿಕೊಳ್ಳಬೇಕು. ಶೇ 100ರಷ್ಟು ತೊಡಗುವಿಕೆ ಸಾಕಾಗುವುದಿಲ್ಲ… ಮಹಿಳೆಯರ ಧ್ವನಿಯನ್ನು ಸಂಧಾನದ ಸಮಯದಲ್ಲಿ ಸುಲಭವಾಗಿ ಹತ್ತಿಕ್ಕಲಾಗುತ್ತದೆ. ಕಾರ್ಪೊರೇಟ್‌ ಸಂಸ್ಥೆಗಳು ಇದನ್ನು ಸರಿಪಡಿಸಬಹುದು ಎಂದು ನನಗೆ ಖಾತ್ರಿಯಿದೆ. ನ್ಯಾಯಾಧೀಶರು ಹಾಗೂ ಎದುರಾಳಿ ವಕೀಲರ ಜೊತೆ ನೀವು ಮೂರು ರೀತಿಯ ಉಪಚಾರಗಳನ್ನು ಪಡೆಯಬಹುದು. ಒಂದು ತುಂಬಾ ಪ್ರೋತ್ಸಾಹದಾಯಕ ಉಪಚಾರ, ಇನ್ನೊಂದು ಅನುಗ್ರಹ ತೋರುವಂತಹ ಉಪಚಾರ, ಮತ್ತೊಂದು ಲಿಂಗಾಧಾರಿತ ಕೀಳರಿಮೆಯನ್ನು ತೋರಿಸುವ ಉಪಚಾರ. ಆದರೆ ಇವೆಲ್ಲವನ್ನೂ ನಾವು ನಗುಮುಖದಿಂದ ಎದುರಿಸಬೇಕಿದೆ ಎಂದು ನ್ಯಾ. ಸಿಂಗ್‌ ಹೇಳಿದರು.

ಮಹಿಳೆಯರನ್ನು ಪೂರ್ವಗ್ರಹಕ್ಕೆ ಒಳಪಡಿಸುವುದು ಸುಲಭಗಾಗಿದೆ, ಅಲ್ಲದೆ ಕೆಲವೊಮ್ಮೆ ಮಹಿಳೆಯರೇ ತಮ್ಮ ಸ್ವಂತ ಬೆಳವಣಿಗೆಗೆ ಅಡ್ಡಿಯಾಗುತ್ತಾರೆ, ಆದರೆ ಯಾವುದೇ ಮಹಿಳೆ ತನ್ನ ಸಾಮರ್ಥ್ಯ ಮತ್ತು ಸಮಗ್ರತೆ ತೋರಿದರೆ ವೃತ್ತಿ ಜೀವನದಲ್ಲಿ ಅವರು ಯಶಸ್ವಿಯಾಗಬಹುದು ಎಂದರು.

ಸಾಮರ್ಥ್ಯ ಎಲ್ಲವನ್ನೂ ಮಣಿಸುತ್ತದೆ. ನೀವು ಸಮರ್ಥರಾಗಿದ್ದರೆ ಮತ್ತು ಪ್ರಾಮಾಣಿಕರಾಗಿದ್ದರೆ ನಿಮ್ಮನ್ನು ಯಾರೂ ತಡೆಯಲಾಗದು ಎಂದು ನ್ಯಾಯಮೂರ್ತಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಫಾಲಿ ನಾರಿಮನ್ ಕೂಡ ವಿಶೇಷ ಭಾಷಣ ಪ್ರಸ್ತುತಪಡಿಸಿದರು. ಎಜಡ್‌ಬಿಯಲ್ಲಿನ ವ್ಯವಸ್ಥಾಪಕ ಪಾಲುದಾರ ಮತ್ತು ಎಸ್‌ಐಎಲ್‌ಎಫ್‌ ಮಹಿಳಾ ಸಮೂಹದ ಅಧ್ಯಕ್ಷೆ ಜಿಯಾ ಮೋಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com