ತಲೆಮರೆಸಿಕೊಂಡಿರುವ ದೆಹಲಿಯ ಸ್ವಘೋಷಿತ ದೇವಮಾನವ ವೀರೇಂದ್ರ ದೇವ್ ದೀಕ್ಷಿತ್ ಆಶ್ರಮದಲ್ಲಿ ನೆಲೆಸಿರುವ ಮಹಿಳೆಯರು ಪಶುಸದೃಶ ಸ್ಥಿತಿಯಲ್ಲಿ ಅಮಾನವೀಯವಾಗಿ ಬದುಕುತ್ತಿದ್ದರೂ ಅದನ್ನು ಸಹಿಸಿಕೊಳ್ಳುವಂತೆ ಅವರಿಗೆ ದುರ್ಬೋಧೆ ಮಾಡಲಾಗಿದೆ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ. ಅಲ್ಲದೆ ತನ್ನನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದು ಕೂಡ ಪೀಠ ಇದೇ ವೇಳೆ ಎಚ್ಚರಿಸಿದೆ.
ಆಶ್ರಮವಾಸಿಗಳು ಸ್ವಇಚ್ಛೆಯಿಂದ ಅಲ್ಲಿದ್ದಾರೆ ಎಂದು ಹೇಳುತ್ತಿದ್ದರೂ ಕೂಡ ವಾಸ್ತವದ ಬಗ್ಗೆ ನ್ಯಾಯಾಲಯ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ನೇತೃತ್ವದ ಪೀಠ ಹೇಳಿತು. ಮುಂದುವರೆದು, ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆಶ್ರಮವನ್ನು ವಶಕ್ಕೆ ಪಡೆಯಲು ಸಿದ್ಧವಿದೆಯೇ ಎನ್ನುವುದನ್ನು ತಿಳಿದುಕೊಂಡು ನ್ಯಾಯಾಲಯಕ್ಕೆ ಹೇಳಲು ಸ್ಥಾಯಿ ವಕೀಲರಿಗೆ ನಿರ್ದೇಶಿಸಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.