ಯೆಸ್ ಬ್ಯಾಂಕ್ ವಂಚನೆ: ರಾಣಾ ಕಪೂರ್ ಮನವಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ [ಚುಟುಕು]

ಯೆಸ್ ಬ್ಯಾಂಕ್ ವಂಚನೆ: ರಾಣಾ ಕಪೂರ್ ಮನವಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ [ಚುಟುಕು]

Yes Bank and Rana Kapoor

ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 19 ರ ಅಡಿಯಲ್ಲಿ ಸೂಕ್ತ ಅನುಮತಿ ಇಲ್ಲದ ಕಾರಣ ಆವಂತ ರಿಯಾಲ್ಟಿ ಪ್ರಕರಣದಲ್ಲಿ ಸಿಬಿಐ ತಮ್ಮ ವಿರುದ್ಧದ ತನಿಖೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಘೋಷಿಸುವಂತೆ ಯೆಸ್ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಣಾ ಕಪೂರ್ ಮಾಡಿದ್ದ ಮನವಿಯನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಸೂಕ್ತ ಅನುಮತಿ ಇದ್ದು ಸೂಕ್ತವಲ್ಲದ ಅಧಿಕಾರಿಗಳಿಂದ (ಯೆಸ್‌ ಬ್ಯಾಂಕ್‌ ಲಿ., ನಿರ್ದೇಶಕ ಮಂಡಳಿ) ನಿರ್ಬಂಧ ವಿಧಿಸಲಾಗಿದೆ ಎಂಬ ವಾದವನ್ನು ವಿಚಾರಣೆಯ ಹಂತದಲ್ಲಿ ಮಾತ್ರ ಪರಿಶೀಲಿಸಬಹುದು ಎಂದು ವಿಶೇಷ ನ್ಯಾಯಾಧೀಶ ಎಂ ಆರ್‌ ಪುರವರ್‌ ಅಭಿಪ್ರಾಯಪಟ್ಟರು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌‌ ಗಮನಿಸಿ.

Related Stories

No stories found.