ಝೀ ಲರ್ನ್ ವಿರುದ್ಧ ದಿವಾಳಿ ಪ್ರಕ್ರಿಯೆ ಕೋರಿ ಮುಂಬೈ ಎನ್‌ಸಿಎಲ್‌ಟಿ ಮೊರೆ ಹೋದ ಯೆಸ್ ಬ್ಯಾಂಕ್

ದಿವಾಳಿತನ ಮತ್ತು ದಿವಾಳಿ ಸಂಹಿತೆಯ ಸೆಕ್ಷನ್ 7ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಝೀ ಲರ್ನ್‌ಗೆ ಪೀಠ ನೋಟಿಸ್ ನೀಡಿದೆ.
ಝೀ ಲರ್ನ್ ವಿರುದ್ಧ ದಿವಾಳಿ ಪ್ರಕ್ರಿಯೆ ಕೋರಿ ಮುಂಬೈ ಎನ್‌ಸಿಎಲ್‌ಟಿ ಮೊರೆ ಹೋದ ಯೆಸ್ ಬ್ಯಾಂಕ್
A1

ಝೀ ಲರ್ನ್‌ ವಿರುದ್ಧ ಖಾಸಗಿ ಸಾಲದಾತ ಯೆಸ್‌ ಬ್ಯಾಂಕ್‌ ಲಿಮಿಟೆಡ್‌ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೊರೆ ಹೋಗಿದೆ.

ದಿವಾಳಿತನ ಮತ್ತು ದಿವಾಳಿ ಸಂಹಿತೆಯ ಸೆಕ್ಷನ್ 7ರ ಅಡಿಯಲ್ಲಿ ಬ್ಯಾಂಕ್‌ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಝೀ ಲರ್ನ್‌ಗೆ ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಪಿ ಎನ್ ದೇಶಮುಖ್ ಮತ್ತು ತಾಂತ್ರಿಕ ಸದಸ್ಯ ಕೆ ಕೆ ವೋಹ್ರಾ ಅವರಿದ್ದ ಪೀಠ ನೋಟಿಸ್‌ ನೀಡಿದೆ.

ಝೀ ಲರ್ನ್‌ ಸುಮಾರು ₹ 468 ಕೋಟಿ ಸಾಲ ತೀರಿಸಲು ವಿಫಲವಾಗಿದೆ ಎಂದು ಬ್ಯಾಂಕ್‌ ಪರವಾಗಿ ವಕೀಲ ಧರ್ಮೇಶ್‌ ಜೈನ್‌ ವಾದ ಮಂಡಿಸಿದರು. ಪ್ರಕರಣವನ್ನು ಜೂನ್ 8, 2022ಕ್ಕೆ ಮುಂದೂಡಲಾಗಿದೆ.

Also Read
ಯೆಸ್ ಬ್ಯಾಂಕ್‌ ಕ್ಷೇಮಕ್ಕಾಗಿ ಪ್ರಿಯಾಂಕಾ ಗಾಂಧಿ ಅವರಿಂದ ಕಲಾಕೃತಿ ಖರೀದಿ: ರಾಣಾ ಕಪೂರ್

ತಾನು (ಝೀ ಲರ್ನ್) ಸಾಲ ತೀರಿಸಬೇಕಾದ ಒಟ್ಟು ಮೊತ್ತ ₹468 ಕೋಟಿ ಎಂದು ಯೆಸ್‌ ಬ್ಯಾಂಕ್‌ ಹೇಳಿದೆ. ಆದರೆ ಯೆಸ್‌ ಬ್ಯಾಂಕ್‌ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಲು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ನಿಯಮಾನುಸಾರ ಸೆಬಿಗೆ ಸಲ್ಲಿಸಬೇಕಾದ ಪತ್ರದಲ್ಲಿ ಝೀ ಲರ್ನ್‌ ಹೇಳಿದೆ.

ವೇಗವಾಗಿ ಬೆಳೆಯುತ್ತಿರುವ ಕೆ 12 ಹಾಗೂ ಮೌಂಟ್ ಲಿಟೆರಾ ಝೀ ಸ್ಕೂಲ್‌ ಶಾಲಾ ಸಮೂಹದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪೆನಿ ಎಂದು ಝೀ ಲರ್ನ್‌ ತನ್ನ ಅಧಿಕೃತ ಜಾಲತಾಣದದಲ್ಲಿ ಹೇಳಿಕೊಂಡಿದೆ. ಭಾರತ ಮತ್ತು ನೆರೆಹೊರೆಯ ದೇಶಗಳ 750 ನಗರಗಳಲ್ಲಿ ಹೆಚ್ಚು ಪ್ರಚಾರ ಪಡೆದಿರುವ ಕಿಡ್‌ಝೀಯ 1,900 ಶಾಲೆಗಳನ್ನು ಸಂಸ್ಥೆಯು ಹೊಂದಿದೆ.

Related Stories

No stories found.
Kannada Bar & Bench
kannada.barandbench.com