ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಾರಾಟ ಮಾಡುವ ಸಗಟು ಡೀಸೆಲ್ ಬೆಲೆ ಹೆಚ್ಚಳ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು (ಕೆಎಸ್‌ಆರ್‌ಟಿಸಿ) ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.
ಸಚಿವರ ಸಹಾಯಕ್ಕಾಗಿ ನೇಮಕವಾಗುವ ಸಿಬ್ಬಂದಿ ಕೇವಲ ಎರಡು ವರ್ಷ ಸೇವೆ ಸಲ್ಲಿಸಿದ್ದರೂ ಅವರಿಗೆ ರಾಜ್ಯ ಸರ್ಕಾರ ಹೇಗೆ ಆಜೀವ ಪಿಂಚಣಿ ಒದಗಿಸುತ್ತಿದೆ ಎಂಬ ಬಗ್ಗೆ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಬೆರಳು ಮಾಡಿತು.
“2 ವರ್ಷಕ್ಕೆ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ಆಜೀವ ಪಿಂಚಣಿ ನೀಡುವ ಏಕೈಕ ರಾಜ್ಯ ನಿಮ್ಮದು. ಸರ್ಕಾರ ಬಳಿ ಸಾಕಷ್ಟು ಹಣ ಇದೆ. ಇದನ್ನು ಅಧಿಕಾರಿಗಳಿಗೆ ತಿಳಿಸಿ” ಎಂದು ಕೇರಳ ಸರ್ಕಾರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ವಿ ಗಿರಿ ಅವರಿಗೆ ಪೀಠ ತಿಳಿಸಿತು. ಅಂತಿಮವಾಗಿ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಾಲಯ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ ಎಂದಿತು.
ರಾಜ್ಯದ ಮಂತ್ರಿಗಳಿಗೆ ವೈಯಕ್ತಿಕ ಸಿಬ್ಬಂದಿಯನ್ನು ನೇಮಿಸುವ ವಿಧಾನ ಮತ್ತು ಅವರು ಕೇವಲ ಎರಡು ವರ್ಷ ಸೇವೆ ಸಲ್ಲಿಸಿದರೂ ದೊರೆಯುವ ಪಿಂಚಣಿ ಸೌಲಭ್ಯ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.
ರಾಜ್ಯದ ಮಂತ್ರಿಗಳಿಗೆ ವೈಯಕ್ತಿಕ ಸಿಬ್ಬಂದಿಯನ್ನು ನೇಮಿಸುವ ವಿಧಾನ ಮತ್ತು ಅವರು ಕೇವಲ ಎರಡು ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದರೆ ಅವರಿಗೆ ಒದಗಿಸುವ ಪಿಂಚಣಿ ಪ್ರಯೋಜನಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಕೇರಳ ಹೈಕೋರ್ಟ್ ಪರಿಗಣಿಸಿದೆ. ಈ ಪ್ರಕರಣದಲ್ಲಿ ಕೇರಳ ಸರ್ಕಾರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಮುಖ್ಯ ಸಚೇತಕ ಎಂ ಜಯರಾಜ್ ಅವರ ಖಾಸಗಿ ಕಾರ್ಯದರ್ಶಿಗಳಿಗೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.