ಜೀ಼ ಮತ್ತು ಸೋನಿ ವಿಲೀನ ವಿವಾದ: ನಗದುರಹಿತ ಇತ್ಯರ್ಥಕ್ಕೆ ಮುಂದಾದ ಸಂಸ್ಥೆಗಳು, ಅಹವಾಲು ಹಿಂಪಡೆಯಲು ನಿರ್ಧಾರ

ಪರಸ್ಪರರ ವಿರುದ್ಧ ಎನ್‌ಸಿಎಲ್‌ಟಿಯಲ್ಲಿ ಹೂಡಲಾಗಿದ್ದ ಎಲ್ಲಾ ಪ್ರಕರಣಗಳನ್ನು ಮತ್ತು ಕಾನೂನು ಪ್ರಕ್ರಿಯೆಗಳನ್ನು ಹಿಂಪಡೆಯಲು ಕಂಪೆನಿಗಳು ಎಸ್ಐಎಸಿಯ ಮಧ್ಯಸ್ಥಿಕೆ ವೇಳೆ ಒಪ್ಪಿಕೊಂಡಿವೆ.
Sony Pictures Networks and Zee Entertainment
Sony Pictures Networks and Zee Entertainment
Published on

ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್‌ಪಿಎನ್‌ಐ) ಆಗಿ ಕಾರ್ಯನಿರ್ವಹಿಸುತ್ತಿರುವ ಝೀ ಎಂಟರ್‌ಟೈನ್‌ಮೆಂಟ್‌ ಎಂಟರ್ಪ್ರೈಸಸ್ ಮತ್ತು ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್‌ (ಸಿಎಂಇಪಿಎಲ್),ಜೊತೆಗೆ ಅದರ ಸಮೂಹ ಕಂಪನಿ ಬಾಂಗ್ಲಾ ಎಂಟರ್‌ಟೈನ್‌ಮೆಂಟ್ (ಬಿಇಪಿಎಲ್‌) ವಿಲೀನ ಸಂಬಂಧ ಪರಸ್ಪರ ಇತ್ಯರ್ಥಕ್ಕೆ ಬಂದಿವೆ.

ವಿಲೀನ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಕಂಪನಿಗಳು ನಗದುರಹಿತ ಇತ್ಯರ್ಥಕ್ಕೆ ಬಂದಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Also Read
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಜೊತೆ ಏರ್ ಏಷ್ಯಾ ವಿಲೀನ: ಎನ್‌ಸಿಎಲ್‌ಟಿ ಅಸ್ತು

ಒಪ್ಪಂದದ ಭಾಗವಾಗಿ ಸಿಂಗಪೋರ್‌ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿ (ಎಸ್‌ಐಎಸಿ) ನಡೆಯುತ್ತಿರುವ ಮಧ್ಯಸ್ಥಿಕೆ ವೇಳೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಹಾಗೂ ಎಸ್‌ಐಎಸಿ ಸೇರಿದಂತೆ ಬೇರೆ ನ್ಯಾಯಾಲಯಗಳಲ್ಲಿ ಹೂಡಲಾಗಿರುವ ಎಲ್ಲಾ ಪ್ರಕರಣಗಳನ್ನು ಮತ್ತು ಕಾನೂನು ಪ್ರಕ್ರಿಯೆಗಳನ್ನು ಹಿಂಪಡೆಯಲು ಈ ಕಂಪೆನಿಗಳು ಒಪ್ಪಿಕೊಂಡಿವೆ.

ಕಂಪನಿಗಳು ಎನ್‌ಸಿಎಲ್‌ಟಿಯಿಂದ ಸಂಬಂಧಿತ ಸಂಯೋಜಿತ ಯೋಜನೆಗಳನ್ನು ಹಿಂತೆಗೆದುಕೊಂಡು ಆಯಾ ನಿಯಂತ್ರಣ ಪ್ರಾಧಿಕಾರಗಳಿಗೆ ತಿಳಿಸಲಿವೆ.

Also Read
ಏರ್ ಇಂಡಿಯಾದೊಂದಿಗೆ ವಿಸ್ತಾರ ಏರ್‌ಲೈನ್ಸ್‌ ವಿಲೀನ: ಎನ್‌ಸಿಎಲ್‌ಟಿ ಅಸ್ತು

ಇತ್ಯರ್ಥ ನಿಯಮಗಳ ಅಡಿಯಲ್ಲಿ,ಯಾವುದೇ ಪಕ್ಷಕಾರರು ಉಳಿದವರಿಗೆ ಯಾವುದೇ ಬಾಕಿ ಅಥವಾ ಮುಂದುವರಿದ ಬಾಧ್ಯತೆ ಅಥವಾ ಹೊಣೆಗಾರಿಕೆ ಹೊಂದಿರುವುದಿಲ್ಲ.

ಸೋನಿ ಮತ್ತು ಝೀ ನಡುವಿನ ವಿಲೀನವನ್ನು ಡಿಸೆಂಬರ್ 22, 2021 ರಂದು ಘೋಷಿಸಲಾಯಿತು. ಆದಾಗ್ಯೂ, ನಂತರ ಅದನ್ನು ಸೋನಿ ಪಿಕ್ಚರ್ಸ್ ರದ್ದುಗೊಳಿಸಿತ್ತು. ಈ ಮಧ್ಯೆ ಎಸ್‌ಐಎಎಸ್‌ ಸಂಪರ್ಕಿಸಿದ್ದ ಸೋನಿ ಎನ್‌ಸಿಎಲ್‌ಟಿ ಸೇರಿದಂತೆ ಉಳಿದ ನ್ಯಾಯಾಲಯಗಳಿಂದ ಝೀ ಕಾನೂನು ಪರಿಹಾರ ಪಡೆಯುವುದನ್ನು ತಡೆಯಲು ನಿರ್ದೇಶನ ನೀಡುವಂತೆ ಕೋರಿತ್ತು.

Kannada Bar & Bench
kannada.barandbench.com