ಬಳಕೆಯ ನಿಬಂಧನೆಗಳು

ಈ ಕೆಳಗೆ ನೀಡಲಾಗಿರುವ ಬಳಕೆಯ ನಿಬಂಧನೆಗಳು (ನಿಬಂಧನೆಗಳು) www.barandbench.com ನ ಪ್ರವೇಶ ಮತ್ತು ಬಳಕೆಗೆ ಸಂಬಂಧಪಟ್ಟದ್ದಾಗಿದ್ದು, ಈ ಅಂತರ್ಜಾಲ ತಾಣಕ್ಕೆ ಪ್ರವೇಶವು ವರ್ಲ್ಡ್ ವೈಡ್‌ ವೆಬ್‌, ಪಿಡಿಎ, ಮೊಬೈಲ್‌ ಫೋನ್‌, ಡಿಜಿಟಲ್‌ ಟೆಲಿವಿಷನ್‌ ಮತ್ತು ಆರ್‌ ಎಸ್‌ ಎಸ್‌ ಫೀಡ್‌ ಗಳ ಮೂಲಕ ಸಾಧ್ಯವಿದ್ದು, ಕೇವಲ ಅಷ್ಟಕ್ಕೆ ಮಾತ್ರವೇ ನಿರ್ಬಂಧಿತವಾಗಿರುವುದಿಲ್ಲ. ಈ ನಿಬಂಧನೆಗಳು ಮತ್ತು ಷರತ್ತುಗಳು ನೀವು ಯಾವುದೇ ಉಪಕರಣಗಳಿಂದ ಈ ಅಂತರ್ಜಾಲ ತಾಣವನ್ನು ಪ್ರವೇಶಿಸಿದಾಗ ಅನ್ವಯವಾಗುತ್ತವೆ. ಈ ಒಪ್ಪಂದವು ಅನಿರ್ದಿಷ್ಟ ಕಾಲಾವಧಿಯದಾಗಿದ್ದು, ಈ ತಾಣವನ್ನು ನೀವು ಎಲ್ಲಿಯವರೆಗೆ ಬಳಕೆ ಮಾಡುತ್ತೀರೋ ಅಲ್ಲಿಯವರೆಗೂ ನೀವು ಈ ಬಗೆಯ ನಿಯಮಾವಳಿಗಳಿಗೆ ಒಳಪಟ್ಟಿರುತ್ತೀರಿ ಎನ್ನುವ ಬಗ್ಗೆ ನಿಮಗೆ ಸಂಪೂರ್ಣ ಅರಿವು ಮತ್ತು ಸಹಮತವಿರುತ್ತದೆ.

 

ಬದ್ಧತಾ ಒಪ್ಪಂದ (Binding Agreement‌)

ಈ ತಾಣವನ್ನು ಬಳಸುವ ಮೂಲಕ ನೀವು ಕಾನೂನು ಬದ್ಧವಾಗಿ ಈ ನಿಬಂಧನೆಗಳಿಗೆ ಒಳಪಡುತ್ತೀರಿ. ನೀವು ಮೊದಲಬಾರಿಗೆ ಈ ತಾಣವನ್ನು ಬಳಸಿದ ಕೂಡಲೇ ಈ ನಿಬಂಧನೆಗಳಿಗೆ ಒಳಪಡುತ್ತೀರಿ. ನೀವು ಈ ಕಾನೂನಾತ್ಮಕ ನಿಬಂಧನೆಗಳಿಗೆ ಬದ್ಧರಾಗಿರಲು ಸಹಮತ ಹೊಂದಿಲ್ಲದೆ ಹೋದರೆ ಈ ತಾಣವನ್ನು ಪ್ರವೇಶಿಸಬೇಡಿ/ಅಥವಾ ಬಳಸಬೇಡಿ. ಈ ತಾಣವನ್ನು ಓದುಗರಾಗಿ ಅಥವಾ ನೊಂದಾಯಿತ ಬಳಕೆದಾರರಾಗಿ ನೀವು ಬಳಸಿದಲ್ಲಿ ನೀವು ಈ ನಿಬಂಧನೆಗಳಿಗೆ ಒಳಪಟ್ಟಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಗೋಪ್ಯತಾ ನೀತಿಯನ್ನೂ ಸಹ ಕೂಲಂಕಷವಾಗಿ ಓದುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ.

 

ನೋಂದಾವಣೆ

ನೀವು ಇಲ್ಲಿ ನೋಂದಾಯಿಸಿಕೊಂಡಾಗ, ಈ ತಾಣದ ವೈಯಕ್ತಿಕ ಬಳಕೆದಾರರಾಗಿ  ನೋಂದಾಯಿಸಿಕೊಂಡಿರುತ್ತೀರಿ. ನೋಂದಾವಣಾ ಪ್ರದೇಶಗಳಿಗೆ ಪ್ರವೇಶವು ನಿಮ್ಮ ಇಮೇಲ್‌ ವಿಳಾಸ ಮತ್ತು ಪಾಸ್‌ ವರ್ಡ್‌ ಮೂಲಕ ಲಭ್ಯವಾಗುತ್ತದೆ. ತಾಣದಲ್ಲಿನ ನೋಂದಾಯಿತ ಪ್ರದೇಶಕ್ಕೆ ಪ್ರವೇಶವನ್ನು ನಿಮಗೆ ಈ ಕೆಳಗಿನ ಕಾರಣಗಳಿಂದಾಗಿ ನೀಡಲಾಗುತ್ತದೆ:

* ನಿಮ್ಮ ಇಮೇಲ್ ವಿಳಾಸ‌, ಪಾಸ್‌ ವರ್ಡ್‌ ನಿಮ್ಮ ವೈಯಕ್ತಿಕವಾಗಿದ್ದು, ಅದನ್ನು ಮತ್ತಾರೂ ಈ ತಾಣಕ್ಕೆ ಪ್ರವೇಶ ಪಡೆಯಲು ಬಳಸಬಾರದು;

* ತಾಣದ ಯಾವುದೇ ನೋಂದಾಯಿತ ಪ್ರದೇಶಕ್ಕೆ ನೋಂದಾವಣೆ ರಹಿತ ಬಳಕೆದಾರರು ಪ್ರವೇಶಿಸಲು ನೀವು ಯಾವುದೇ ರೀತಿಯ ಸಹಾಯವನ್ನಾಗಲಿ, ಪೂರಕ ಕೆಲಸವನ್ನಾಗಲಿ ಮಾಡುವುದಿಲ್ಲ; ಮತ್ತು

* ಇಲ್ಲಿ ನೀಡಲಾಗಿರುವ ನಿಬಂಧನೆಗಳಿಗೆ ನೀವು ಬದ್ಧರಾಗಿರುತ್ತೀರಿ. 

 

ಒಂದು ವೇಳೆ, ಯಾವುದೇ ಕಾರಣದಿಂದ, ನೀವು ಈ ಮೇಲಿನ ಅವಶ್ಯಕ ಅಂಶಗಳಿಗೆ ಬದ್ಧರಾಗಿಲ್ಲವೆಂದು ನಮಗೆ ಮನವರಿಕೆಯಾದರೆ, ನಮ್ಮ ವಿವೇಚನೆಯ ಅನುಸಾರ, ನಾವು ನೋಂದಾಯಿತ ಪ್ರದೇಶಗಳಿಗೆ ನಿಮ್ಮ ಪ್ರವೇಶವನ್ನು ಯಾವುದೇ ಮುನ್ಸೂಚನೆ ನೀಡದೆ  ರದ್ದುಗೊಳಿಸಬಹುದಾಗಿರುತ್ತದೆ. 

 

 

ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ ಮಾರ್ಕ್ ಗಳು

ಏನನ್ನೂ ಹೇಳಿರದ ಪಕ್ಷದಲ್ಲಿ, ಈ ತಾಣದಲ್ಲಿ ಪ್ರದರ್ಶಿಸಲಾಗಿರುವ ಯಾವುದೇ ವಿಷಯಗಳು (ಬರಹ, ಶ್ರವ್ಯ, ದೃಶ್ಯ ಮತ್ತು ಗ್ರಾಫಿಕಲ್‌ ಇಮೇಜ್‌ ಗಳೂ ಸೇರಿದಂತೆ, ಆದರೆ ಅಷ್ಟಕ್ಕೇ ಸೀಮಿತಗೊಳ್ಳದೆ), ಟ್ರೇಡ್‌ ಮಾರ್ಕ್ ಗಳು ಮತ್ತು ಲೋಗೋಗಳು  SAB Media Software Services Private Limited (ಸಬ್‌ ಮೀಡಿಯಾ) ಮಾತೃ ಸಂಸ್ಥೆಯ, ಸಂಯೋಜಿತ ಮತ್ತು ಸಹವರ್ತಿ ಸಂಸ್ಥೆಯ ಸ್ವತ್ತುಗಳಾಗಿರುತ್ತವೆ ಹಾಗೂ ಅನ್ವಯಿಸಲ್ಪಡುವ ಭಾರತೀಯ ಕಾನೂನಿನಡಿ  ರಕ್ಷಿತವಾಗಿರುತ್ತವೆ. ಇದರ ಉಲ್ಲಂಘನೆಯ ವಿರುದ್ಧ ತೀಕ್ಷ್ಣವಾಗಿ ಹೋರಾಡಲಾಗುವುದು ಹಾಗೂ ಕಾನೂನುರೀತ್ಯಾ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಕ್ರಮಕ್ಕೆ ಮುಂದಾಗಲಾಗುವುದು.

 

 

ಪ್ರವೇಶ ಮತ್ತು ಬಳಕೆ

ತಾಣದ ಪ್ರವೇಶ ಮತ್ತು ಬಳಕೆಯು SAB Media Software Services Private Limited (ಸಬ್‌ ಮೀಡಿಯಾ) ಅನುಸಾರ ದೊರೆಯಲಿದ್ದು, ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ:

 

* ಈ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಸಬ್‌ ಮೀಡಿಯಾವು ಆನ್‌ ಲೈನ್‌‌ ನಲ್ಲಿ ಪೋಸ್ಟ್‌ ಮಾಡುವ ಮೂಲಕ ಬದಲಿಸಬಹುದಾಗಿದೆ. ದಯವಿಟ್ಟು ಈ ನಿಬಂಧನೆಗಳನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ಸಬ್‌ ಮೀಡಿಯಾವು ಮಾಡಿರಬಹುದಾದ ಬದಲಾವಣೆಗಳ ಬಗ್ಗೆ ಅರಿಯಿರಿ. ಈ ನೀತಿಗಳಲ್ಲಿನ ಬದಲಾವಣೆಗಳ ನಂತರವೂ ನೀವು ನಿರಂತರವಾಗಿ ಈ ತಾಣವನ್ನು ಬಳಸುತ್ತಿದ್ದೀರಿ ಎಂದರೆ ನೀವು ಬದಲಾಯಿಸಿದ ಮತ್ತು/ಅಥವಾ ಮಾರ್ಪಡಿಸಿದ ಈ ನಿಬಂಧನೆಗಳಿಗೆ ಕಾನೂನಾತ್ಮಕವಾಗಿ ಬದ್ಧವಾಗಿದ್ದೀರಿ ಎಂದು.

 

* ಈ ತಾಣದಲ್ಲಿನ ವಸ್ತುವಿಷಯವನ್ನು ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗೆ ಹೊರತುಪಡಿಸಿದಂತೆ ನಕಲು ಮಾಡುವುದು, ಪುನರ್ ಸೃಷ್ಟಿಸುವುದು, ಪುನರ್ ಪ್ರಕಟಿಸುವುದು, ಡೌನ್‌ಲೋಡ್‌ ಮಾಡುವುದು, ಪ್ರಕಟಣೆ‌ ಮಾಡುವುದು, ಪ್ರಸರಣ ಮಾಡುವುದು, ಪ್ರಸಾರ ಮಾಡುವುದು, ಸಾರ್ವಜನಿಕವಾಗಿ ಲಭ್ಯಮಾಡುವುದು ಇದಾವುದನ್ನೂ ನೀವು ಮಾಡಲಾಗದು. ನಿಮ್ಮ ವೈಯಕ್ತಿಕ ಹಾಗೂ ವಾಣಿಜ್ಯೇತರ ಉದ್ದೇಶಕ್ಕೆ ಹೊರತಾಗಿ ಇಲ್ಲಿನ ವಸ್ತುವಿಷಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು, ಬದಲಾಯಿಸುವುದು ಅಥವಾ ಇಲ್ಲಿನ ವಿಷಯವನ್ನು ಬಳಸಿ ವ್ಯುತ್ಪನ್ನ ಮಾಡುವುದಕ್ಕೆ ನೀವು ಮುಂದಾಗುವುದಿಲ್ಲವೆನ್ನುವುದಕ್ಕೆ ಸಹಮತ ವ್ಯಕ್ತಪಡಿಸುತ್ತೀರಿ. ಈ ತಾಣದ ವಸ್ತುವಿಷಯವನ್ನು ಬೇರೆ ಯಾವುದೇ ರೀತಿಯಲ್ಲಿ ಬಳಸಲು ಸಬ್‌ ಮೀಡಿಯಾದಿಂದ ಪೂರ್ವಾನುಮತಿಯ ಅಗತ್ಯವಿರುತ್ತದೆ.

  

* ಕೇವಲ ಕಾನುನುಬದ್ಧ ಉದ್ದೇಶಗಳಿಗೆ ಮಾತ್ರವೇ ಈ ತಾಣವನ್ನು ನೀವು ಬಳಸುತ್ತೀರಿ, ಮತ್ತು ಯಾವುದೇ ರೀತಿಯಲ್ಲೂ ಮತ್ತೊಬ್ಬರು ತಾಣವನ್ನು ಬಳಸಲು, ಆನಂದಿಸಲು ಇರುವ ಹಕ್ಕುಗಳನ್ನು ಉಲ್ಲಂಘಿಸುವುದಾಗಲಿ, ನಿರ್ಬಂಧಿಸುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡುವುದಿಲ್ಲ ಎನ್ನುವುದಕ್ಕೆ ನಿಮ್ಮ ಒಪ್ಪಿಗೆ ಇರುತ್ತದೆ. ಈ ತಾಣದೊಳಗೆ ಯಾವುದೇ ವ್ಯಕ್ತಿಗೆ ಉಪಟಳ ನೀಡುವುದು, ಮಾನಸಿಕವಾಗಿ ಕುಗ್ಗಿಸುವುದು, ಅಶ್ಲೀಲ ಅಥವಾ ನಿಂದನಕಾರಿ ವಿಷಯವನ್ನು ಪಸರಿಸುವುದು ಅಥವಾ ಸಹಜ ಮಾತುಕತೆಯ ಓಘಕ್ಕೆ ಅಡ್ಡಿಪಡಿಸುವುದನ್ನು ನಿಷೇಧಿತ ವರ್ತನೆ ಎಂದು ಪರಿಗಣಿಸಲಾಗುತ್ತದೆ.

 

ಇಮೇಲ್‌ ಸೇವೆಗಳು

ಸೇವೆಯನ್ನು ನೀವು ಈ ಕೆಳಗಿನಂತೆ ಬಳಕೆ ಮಾಡುವುದಿಲ್ಲ:

 

* ಕಾನೂನಿಗೆ ವಿರುದ್ಧವಾದ, ಅಪಾಯಕಾರಿಯಾದ, ಬೆದರಿಕೆಯ, ನಿಂದನಕಾರಿಯಾದ, ಪೀಡನೆಯ, ಉಪಟಳದ, ಮಾನನಷ್ಟದ, ಕೀಳು ಅಭಿರುಚಿಯ, ಅಶ್ಲೀಲವಾದ, ಮಾನಹಾನಿ ಬರಹದ, ಮತ್ತೊಬ್ಬರ ಖಾಸಗಿತನವನ್ನು ಉಲ್ಲಂಘಿಸುವ, ದ್ವೇಷಕಾರಿಯಾದ, ಅಥವಾ ಜನಾಂಗೀಯ ಹಾಗೂ ಬುಡಕಟ್ಟುಗಳನ್ನು ನಿಂದಿಸುವಂತಹ ಬರಹ, ವಿಚಾರಗಳನ್ನು ಅಪ್ ‌ಲೋಡ್‌ ಮಾಡುವುದು, ಪ್ರಕಟಿಸುವುದು, ಇಮೇಲ್‌ ಮಾಡುವುದು, ಪಸರಿಸುವುದು, ಲಭ್ಯಮಾಡುವುದು.

 

* ಅಪ್ರಾಪ್ತರಿಗೆ ಯಾವುದೇ ರೀತಿಯ ತೊಂದರೆ ನೀಡುವುದು.

 

* ಸಬ್‌ ಮೀಡಿಯಾವನ್ನು ಒಳಗೊಳ್ಳುವ, ಆದರೆ ಅಷ್ಟಕ್ಕೇ ಸೀಮಿತವಾಗದ ಯಾವುದೇ ಅಧಿಕಾರಿ, ಒಕ್ಕೂಟದ ನಾಯಕ, ಮಾರ್ಗದರ್ಶಕ ಅಥವಾ ನಿರೂಪಕ ಅಥವಾ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆಯಂತೆ ನಟಿಸುವುದು ಅಥವಾ ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಸಹಯೋಗವನ್ನು ಅನುಚಿತವಾಗಿ ಬಳಸುವುದು, ದುರ್ಬಳಕೆ ಮಾಡುವುದು.

 

* ಈ ಸೇವೆಯಿಂದ ಪ್ರಸರಣಗೊಂಡ ವಸ್ತುವಿಷಯದ ಮೂಲವನ್ನು ಮುಚ್ಚಿಡುವ ಉದ್ದೇಶದಿಂದ ಹೆಡರ್ ಅನ್ನು ನಕಲು ಮಾಡುವುದು‌ ಅಥವಾ ಇತರೆ ಗುರುತುಗಳನ್ನು ತಿರುಚುವುದು.

 

* ಕಾನೂನು ರೀತ್ಯಾ ಅಥವಾ ಒಪ್ಪಂದದ ಅನುಸಾರ ಅಥವಾ ನಂಬಿಕಸ್ಥ ಸಂಬಂಧದ ಕಾರಣದಿಂದ ಲಭ್ಯತೆ ಮಾಡಲು ನಿಮಗೆ ಹಕ್ಕಿಲ್ಲದೆ ಇರುವಂತಹ ಯಾವುದೇ ವಸ್ತುವಿಷಯವನ್ನು (ಉದ್ಯೋಗದ ಸಂಬಂಧದಿಂದಾಗಿ ತಿಳಿಯಲ್ಪಟ್ಟಿರುವ ಅಥವಾ ಅರಿವಿಗೆ ಬಂದಿರುವ ಒಳಗಿನ ಮಾಹಿತಿ, ಮಾಲೀಕತ್ವ ಮತ್ತು ಗೋಪ್ಯತೆಗೆ ಸಂಬಂಧಿಸಿದ ಮಾಹಿತಿ ಅಥವಾ ಬಹಿರಂಗಪಡಿಸಬಾರದೆನ್ನುವ ಒಪ್ಪಂದದಡಿ ತಿಳಿಸಲ್ಪಟ್ಟಿರುವ ಮಾಹಿತಿ) ಅಪ್‌ಲೋಡ್‌ ಮಾಡುವುದು, ಪ್ರಕಟಿಸುವುದು, ಇಮೇಲ್‌ ಮಾಡುವುದು, ಪಸರಿಸುವುದು ಅಥವಾ ಲಭ್ಯವಾಗಿಸುವುದು.

 

* ಯಾವುದೇ ಪೇಟೆಂಟ್‌, ಟ್ರೇಡ್ ‌ಮಾರ್ಕ್, ವ್ಯಾವಹಾರಿಕ ಗೋಪ್ಯತೆ, ಹಕ್ಕುಸ್ವಾಮ್ಯ ಅಥವಾ ಇತರೆ ಮಾಲೀಕತ್ವದ ಹಕ್ಕುಗಳನ್ನು (“ಹಕ್ಕುಗಳು”) ಉಲ್ಲಂಘಿಸುವ ವಸ್ತುವಿಷಯವನ್ನು ಅಪ್‌ಲೋಡ್‌ ಮಾಡುವುದು, ಪ್ರಕಟಿಸುವುದು, ಇಮೇಲ್‌ ಮಾಡುವುದು, ಪಸರಿಸುವುದು ಅಥವಾ ಇನ್ನಾವುದೇ ಬಗೆಯಲ್ಲಿ ಲಭ್ಯವಾಗಿಸುವುದು.

 

* ಅನಪೇಕ್ಷಿತ ಅಥವಾ ಅಯಾಚಿತ ಜಾಹೀರಾತು, ಪ್ರಚಾರದ ಸಾಮಗ್ರಿಗಳು, “ಜಂಕ್‌ ಮೇಲ್‌,” “ಸ್ಪ್ಯಾಮ್,‌” “ಚೈನ್‌ ಲೆಟರ್ಸ್‌,” “ಪಿರಮಿಡ್‌ ಯೋಜನೆಗಳು,” ಅಥವಾ ಬೇರಾವುದೇ ಕೋರಿಕೆಗಳನ್ನು ಅಪ್‌ ಲೋಡ್‌ ಮಾಡುವುದು, ಪ್ರಕಟಿಸುವುದು, ಇಮೇಲ್‌ ಮಾಡುವುದು, ಪ್ರಸರಣ ಮಾಡುವುದು ಅಥವಾ ಇನ್ನಾವುದೇ ರೀತಿಯಲ್ಲಿ ಲಭ್ಯ ಮಾಡುವುದು.

 

ಹಕ್ಕುಬಾಧ್ಯತೆಯ ನಿರಾಕರಣೆ

ಇಲ್ಲಿನ ಯಾವುದೇ ವಿಷಯ ಸಾಮಗ್ರಿಗಳಲ್ಲಿನ ಯಾವುದೇ ಹೇಳಿಕೆಗೆ ಸಬ್‌ ಮೀಡಿಯಾ ಜವಾಬ್ದಾರಿಯಾಗಿರುವುದಿಲ್ಲ. ಈ ತಾಣದಲ್ಲಿ ಪ್ರಕಟವಾಗಿರುವ ಯಾವುದೇ ಹೇಳಿಕೆಗಳ ಬಗ್ಗೆ ತಜ್ಞ ವೃತ್ತಿಪರ ಮಾರ್ಗದರ್ಶನವನ್ನು ಪಡೆಯದೆ ನೀವು ಅವಲಂಬಿಸಬಾರದು. ಇಲ್ಲಿನ ಯಾವುದೇ ವಿಷಯ ಸಾಮಗ್ರಿಗಳು ಯಾವುದೇ ನಿರ್ದಿಷ್ಟ ಉದ್ದೇಶ ಅಥವಾ ಯಾವುದೇ ನಿಶ್ಚಿತ ವ್ಯಕ್ತಿಯ ಕೋರಿಕೆಯನ್ನು ಒಳಗೊಂಡಿರುವುದಿಲ್ಲ.

 

ನಾವು ಯಾವುದೇ ಬಗೆಯ ಖಾತರಿಯನ್ನಾಗಲಿ, ಅಥವಾ ಕೋರಿಕೆಯನ್ನಾಗಲಿ ಈ ತಾಣದ ಮಾಹಿತಿ-ಸಾಮಗ್ರಿ, ಹೆಸರು, ಇಮೇಜ್ ‌ಗಳು, ಚಿತ್ರಗಳು, ಲೋಗೋಗಳು ಮತ್ತು ಐಕಾನ್ ‌ಗಳ ಮೇಲೆ ನೀಡುವುದಿಲ್ಲ. ನಮ್ಮ ತಾಣದಲ್ಲಿ ನೀಡಲಾದ ಲಿಂಕ್ ಗಳ ಮೂಲಕ ನೀವು ಇತರೆ ತಾಣಗಳನ್ನು ಪ್ರವೇಶಿಸಬಹುದಾಗಿದೆ. ಆದರೆ, ಈ ತಾಣಗಳು ನಮ್ಮ ನಿಯಂತ್ರಣದಲ್ಲಿಲ್ಲದೆ ಇರುವುದರಿಂದ, ಅಲ್ಲಿನ ಯಾವುದೇ ವಿಷಯಗಳಿಗೆ ನಾವು ಜವಾಬ್ದಾರರಲ್ಲ. 

 

ಸಬ್‌ ಮೀಡಿಯಾವು ಈ ಕೆಳಗಿನ ಯಾವುದೇ ನಷ್ಟ ಅಥವಾ ಹಾನಿಗಳಿಗೆ ಹೊಣೆಯಾಗಿರುವುದಿಲ್ಲ (ಆ ಬಗೆಯ ನಷ್ಟಗಳು ಮುಂಗಂಡಿರುವುದಾಗಲಿ, ಮುಂಗಾಣುವುದಾಗಲಿ, ತಿಳಿದಿರುವುದಾಗಲಿ ಅಥವಾ ಇನ್ನಾವುದೇ ರೀತಿಯದ್ದಾಗಿರಲಿ)

 

* ದತ್ತಾಂಶದ ನಷ್ಟ

* ಆದಾಯದ ನಷ್ಟ ಅಥವಾ ಊಹಿಸಿದ ಲಾಭದ ನಷ್ಟ

* ವ್ಯಾಪಾರದ ನಷ್ಟ

* ಅವಕಾಶದ ನಷ್ಟ

* ವಿಶ್ವಾಸಕ್ಕೆ ಧಕ್ಕೆಯಾಗುವುದು, ಮರ್ಯಾದೆಗೆ ಪೆಟ್ಟು ಬೀಳುವುದು

* ಮೂರನೇ ವ್ಯಕ್ತಿ/ಸಂಸ್ಥೆಗೆ ಉಂಟಾಗುವ ನಷ್ಟ; ಅಥವಾ

* ಕ್ರಿಯಾಭೇದವಿಲ್ಲದೆ barandbench.com/ ಬಳಕೆಯಿಂದಾಗಿ ಉದ್ಭವಿಸಬಹುದಾದ ಯಾವುದೇ‌ ಪರೋಕ್ಷ, ತತ್ಪರಿಣಾಮದ, ವಿಶೇಷ ಅಥವಾ ಪರಿಹಾರ ಸಂಬಂಧೀ ಹಾನಿಗಳು.

 

ಈ ನಿಟ್ಟಿನಲ್ಲಿ ನಿಮ್ಮ ಸುರಕ್ಷತೆಯನ್ನು ನೀವೇ ತೆಗೆದುಕೊಳ್ಳಬೇಕು. ಏಕೆಂದರೆ ನಾವು ಯಾವುದೇ ರೀತಿಯಲ್ಲಿಯೂ ವೈರಸ್‌ ನಿಂದ ಉಂಟಾಗುವ ಸಮಸ್ಯೆ, ಅಥವಾ ಇನ್ನಾವುದೇ ದೋಷಗಳಿಗೆ ಅಥವಾ ಆಸ್ತಿ ಹಾನಿಗೆ ಜವಾಬ್ದಾರರಾಗಿರುವುದಿಲ್ಲ.

 

ಅಪ್ರಾಪ್ತರ ಕುರಿತು

ತಾಣದಲ್ಲಿನ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ನಿಮ್ಮ ಪೋಷಕರು ಅಥವಾ ರಕ್ಷಕರಿಂದ ಸಮ್ಮತಿ ಪಡೆಯಿರಿ.

ನಿಮ್ಮ ಅಥವಾ ಇನ್ನಾರದೇ ವೈಯಕ್ತಿಕ ಮಾಹಿತಿಯ ಕುರಿತಾದ ಯಾವುದೇ ವಿಷಯವನ್ನು ಬಹಿರಂಗಗೊಳಿಸಬೇಡಿ (ಉದಾಹರಣೆಗೆ: ದೂರವಾಣಿ ಸಂಖ್ಯೆ, ಮನೆಯ ವಿಳಾಸ ಅಥವಾ ಇಮೇಲ್‌ ವಿಳಾಸ).

 

ವಸ್ತುವಿಷಯದ ಕುರಿತು

ತಾಣದಲ್ಲಿರುವ ಯಾವುದೇ ವಸ್ತುವಿಷಯವು ಸಾಮಾನ್ಯ ಮಾಹಿತಿ ಹಾಗೂ ಬಳಕೆಗೆ ಮಾತ್ರವೇ ಸೀಮಿತ. ಅವುಗಳು ಸಲಹೆಗಳಾಗಿರುವುದಿಲ್ಲ ಹಾಗೂ ನಿರ್ಧಾರಗಳನ್ನು ಕೈಗೊಳ್ಳಲು (ಅಥವಾ ಕೈಗೊಳ್ಳದೆ ಇರಲು) ಅವುಗಳನ್ನು ಅಲವಂಬಿಸುವಂತಿಲ್ಲ. ತಾಣದಲ್ಲಿ ಯಾವುದೇ ವಿಭಾಗದಲ್ಲಿನ ಯಾವುದೇ ನಿರ್ದಿಷ್ಟ ಸಲಹೆ ಅಥವಾ ಪ್ರತಿಕ್ರಿಯೆಯು ಅದನ್ನು ವ್ಯಕ್ತಪಡಿಸಿರುವ ತಜ್ಞರು/ಸಲಹಾಕಾರರು/ವ್ಯಕ್ತಿಗಳದ್ದಾಗಿರುತ್ತದೆಯೇ ಹೊರತು ತಾಣವಾಗಲಿ, ಸಬ್‌ ಮೀಡಿಯಾ ಆಗಲಿ ಅದನ್ನು ಅನುಮೋದಿಸಿರುವುದಿಲ್ಲ. ಈ ತಾಣದಿಂದ ನೀಡಿರುವ ಅಥವಾ ತಾಣದ ಮೂಲಕ ನೀಡುವ ಮಾಹಿತಿಯು “ಹೇಗಿದೆಯೋ ಹಾಗೆ” ನೀಡುವ ಅನುಸಾರ ಮೂಡಿರುತ್ತದೆ. ಹಾಗಾಗಿ ಯಾವುದೇ ವಸ್ತು, ಸೇವೆ ಅಥವಾ ವಾಹಿನಿಗೆ ಸಂಬಂಧಿಸಿದ ಯಾವುದೇ ವಿಷಯದ ವ್ಯಕ್ತ ಅಥವಾ ಇಂಗಿತ ಭರವಸೆಗಳು, ಅಷ್ಟು ಮಾತ್ರಕ್ಕೆ ಸೀಮಿತವಾಗದ, ಮಾರಲ್ಟಡುವ ವಸ್ತುಗಳ ಇಂಗಿತ ಭರವಸೆ, ನಿರ್ದಿಷ್ಟ ಕಾರ್ಯಕ್ಕೆ ಅಗತ್ಯವಿರುವ ಸದೃಢತೆ ಮತ್ತು ಗೈರು ಉಲ್ಲಂಘನೆಗಳ ಹಕ್ಕುತ್ಯಾಗವನ್ನು ಮಾಡಲಾಗಿದ್ದು, ಹೊರಗಿರಿಸಲಾಗಿದೆ. ಹಾಗಾಗಿ ಅಂತಹ ಮಾಹಿತಿಗಳಿಗೆ ತಾಣವು ಜವಾಬ್ದಾರಿ ಹೊರುವುದಿಲ್ಲ.     

 

ಒಪ್ಪಂದಗಳಿಂದ ಉದ್ಭವಿಸುವಂತಹ ಅಥವಾ ಉಲ್ಲಂಘನೆಗಳಿಂದ ಎದುರಾಗುವಂತಹ, ಅಥವಾ ತಾಣದ ಬಳಕೆಯಿಂದಾಗಿ ಅಥವಾ ಬಳಸಲು ಬಾರದ ಕಾರಣದಿಂದಾಗಿ ಉದ್ಭವಿಸುವ ಯಾವುದೇ ರೀತಿಯ ಹಾನಿಗಳಿಗೆ (ವ್ಯಾವಹಾರಿಕ ಯೋಜನೆಗಳ ನಷ್ಟ ಅಥವಾ ಲಾಭದಲ್ಲಿನ ನಷ್ಟವೂ ಸೇರಿದಂತೆ, ಆದರೆ ಅಷ್ಟಕ್ಕೇ ಸೀಮಿತವಾಗದ ಹಾನಿ) ಸಬ್‌ ಮೀಡಿಯಾವು ಹೊಣೆ ಹೊರುವುದಿಲ್ಲ. ಅದೇ ರೀತಿ, ತನ್ನ ತಾಣದ ಆಥವಾ ಯಾವುದೇ ವಸ್ತುವಿಷಯದ ಬಳಕೆ ಅಥವಾ ಬಳಸಲು ಬಾರದ ಕಾರಣದಿಂದಾಗಿ, ಅಥವಾ ತಾಣದ ಬಳಕೆ ಅಥವಾ ಬಿಟ್ಟಿರುವಿಕೆಯ ಕಾರಣದಿಂದಾಗಿ ಅಥವಾ ಯಾವುದೇ ಪ್ರದರ್ಶನದ ವೈಫಲ್ಯತೆಗೆ, ಲೋಪಕ್ಕೆ, ಬಿಟ್ಟಿರುವಿಕೆಗೆ, ಅಡ್ಡಿಪಡಿಸುವಿಕೆಗೆ, ಇಲ್ಲವಾಗುವಿಕೆಗೆ, ತೊರೆಯುವಿಕೆಗೆ, ಕಾರ್ಯ ಚಟುವಟಿಕೆಯಲ್ಲಿನ ಅಥವಾ ಪ್ರಸರಣದಲ್ಲಿನ ವಿಳಂಬಕ್ಕೆ, ಕಂಪ್ಯೂಟರ್‌ ವೈರಸ್‌, ಸಂವಹನ ವಾಹಿನಿಯ ತೊಂದರೆಯಿಂದಾಗುವ ಸಮಸ್ಯೆಗೆ ಹೊಣೆಗಾರಿಕೆ ಹೊರುವುದಿಲ್ಲ. ಸಬ್‌ ಮೀಡಿಯಾವು ತಾಣದಲ್ಲಿನ ಮಾಹಿತಿಯ ಯಾವುದೇ ಬಗೆಯ ಕಳ್ಳತನ ಅಥವಾ ಧ್ವಂಸ ಅಥವಾ ಅನಧಿಕೃತ ಪ್ರವೇಶ, ಬದಲಾವಣೆ, ಬಳಕೆಯ ಹೊಣೆಗಾರಿಕೆಯನ್ನು ಹೊರುವುದಿಲ್ಲ. ತಾಣದಲ್ಲಿನ ಮಾಹಿತಿಯ ಕುರಿತಾಗಿ ಯಾವುದೇ ಬಗೆಯ ಖಚಿತತೆ, ಅಗತ್ಯತೆ, ವಿಶ್ವಾಸಾರ್ಹತೆ, ಸಂಪೂರ್ಣತೆ, ಯುಕ್ತತೆಯನ್ನಾಗಲಿ ಹಾಗೂ ಮಾಹಿತಿಯನ್ನು ನಿರ್ದಿಷ್ಟ ಸನ್ನಿವೇಶಕ್ಕೆ ಹೊಂದಿಸುವ ಸಾಧ್ಯತೆಯ ಕುರಿತಾಗಲಿ ಯಾವುದೇ ರೀತಿಯ ಭರವಸೆ, ಖಾತರಿ, ಹೇಳಿಕೆಗಳನ್ನು ಸಬ್‌ ಮೀಡಿಯಾವು ನೀಡುವುದಿಲ್ಲ.

 

ತಾಣದಲ್ಲಿನ ಕೆಲವೊಂದು ಲಿಂಕ್‌ ಗಳು ಮೂರನೇ ವ್ಯಕ್ತಿ/ಸಂಸ್ಥೆಯಿಂದ ನಿರ್ವಹಿಸಲ್ಪಡುವ ಸರ್ವರ್‌ ಗಳ ಮೂಲಕ ಸಂಪನ್ಮೂಲ ತಾಣಗಳಿಗೆ ಪ್ರವೇಶ ಕಲ್ಪಿಸುತ್ತವೆ. ಇವುಗಳ ಮೇಲೆ ಸಬ್‌ ಮೀಡಿಯಾವು ಯಾವುದೇ ನಿಯಂತ್ರಣವನ್ನಾಗಲಿ, ಇವುಗಳೊಂದಿಗೆ ಯಾವುದೇ ಸಂಬಂಧವನ್ನಾಗಲಿ, ವ್ಯಾವಹಾರಿಕತೆಯನ್ನಾಗಲಿ ಹೊಂದಿರುವುದಿಲ್ಲ. ಹೀಗೆ ಸಬ್‌ ಮೀಡಿಯಾಗೆ ಹೊರತಾದ ಈ ಲಿಂಕ್‌ ಗಳನ್ನು ಪ್ರವೇಶಿಸುವುದೆಂದರೆ ನಮ್ಮ ತಾಣದಿಂದ ಆಚೆಗೆ ಹೋಗುವುದು ಎನ್ನುವುದನ್ನು ಒಪ್ಪುತ್ತೀರಿ, ಅರ್ಥಮಾಡಿಕೊಂಡಿರುತ್ತೀರಿ. ಸಬ್‌ ಮೀಡಿಯಾವು ಈ ತಾಣಗಳಲ್ಲಿನ ಯಾವುದೇ ಸಾಮಗ್ರಿಗಳು/ಸೇವೆಯ ಅಧಿಕೃತತೆಯ ಬಗ್ಗೆ/ಲಭ್ಯತೆಯ ಬಗ್ಗೆ ಹೊಣೆ ಹೊರುವುದಿಲ್ಲ, ಅವುಗಳನ್ನು ಅನುಮೋದಿಸುವುದಾಗಲಿ, ಅವುಗಳ ಬಗ್ಗೆ ತೀರ್ಮಾನವನ್ನಾಗಲಿ, ಭರವಸೆಯನ್ನಾಗಲಿ ನೀಡುವುದಿಲ್ಲ. ಅದೇ ರೀತಿ ಇವುಗಳ ಪ್ರವೇಶದಿಂದ ನೇರ ಅಥವಾ ತತ್ಪರಿಣಾಮವಾಗಿ ಉಂಟಾಗುವ ಯಾವುದೇ ಹಾನಿ, ನಷ್ಟ ಅಥವಾ ತೊಂದರೆ, ಸ್ಥಳೀಯ ಅಥವಾ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯ ಹೊಣೆಗಾರಿಕೆಯನ್ನು ಸಬ್ ಮೀಡಿಯಾ ಹೊರುವುದಿಲ್ಲ.   

 

ಶುಲ್ಕ

ಈ ತಾಣದ ಯಾವುದೇ ವಿಭಾಗ ಅಥವಾ ಸಂಗತಿಗೆ ಪ್ರವೇಶಿಸಲು ಚಂದಾದಾರಿಕೆ ಶುಲ್ಕ ಮತ್ತು/ಅಥವಾ ಸದಸ್ಯತ್ವ ಶುಲ್ಕವನ್ನು, ಯುಕ್ತ ಮುನ್ಸೂಚನೆಯೊಂದಿಗೆ ವಿಧಿಸುವ ಹಕ್ಕನ್ನು ಸಬ್‌ ಮೀಡಿಯಾ ಹೊಂದಿದೆ. 

 

ಮೂರನೇ ವ್ಯಕ್ತಿ/ಸಂಸ್ಥೆಯ ವಿಷಯ ಸಾಮಗ್ರಿ

ನೀವು ಮೂರನೇ ವ್ಯಕ್ತಿ/ಸಂಸ್ಥೆಗಳಿಂದ ನೀಡಲಾಗಿರುವ ಜಾಹೀರಾತು ಸಾಮಗ್ರಿಗಳನ್ನು ತಾಣದಲ್ಲಿ ನೋಡುತ್ತೀರಿ. ಈ ಜಾಹೀರಾತು ಸಾಮಗ್ರಿಗಳ ವಸ್ತುವಿಷಯಕ್ಕೆ ಜಾಹೀರಾತುದಾರರೇ ಪೂರ್ಣ ಹೊಣೆ. ಸಂಬಂಧಪಟ್ಟ ಕಾನೂನುಗಳಿಗೆ ಅನುಗುಣವಾಗಿ, ಬದ್ಧವಾಗಿ ಅವರು ಈ ಜಾಹೀರಾತು ಸಾಮಗ್ರಿಗಳನ್ನು ನಮಗೆ ಸಲ್ಲಿಸುತ್ತಾರೆ. ಈ ಜಾಹೀರಾತು ಸಾಮಗ್ರಿಗಳಲ್ಲಿನ ವಸ್ತುವಿಷಯವೂ ಸೇರಿದಂತೆ, ಅದರೆ ಅಷ್ಟಕ್ಕೇ ಸೀಮಿತವಾಗದೆ, ಯಾವುದೇ ದೋಷ, ಬಿಟ್ಟುಹೋಗಿರುವಿಕೆ ಅಥವಾ ಖಚಿತವಲ್ಲದಿರುವಿಕೆಗೆ ನಾವು ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ.

 

ತಾಣಕ್ಕೆ ಬರಹದ ಸಲ್ಲಿಕೆ

ತಾಣದ ಬಳಕೆದಾರರು ಪ್ರಕಟಣೆಗಾಗಿ ಬರಹಗಳನ್ನು ಸಲ್ಲಿಸಬಹುದಾಗಿದ್ದು, ಇದು ತಾಣದ ವಿವಿಧ ಭಾಗಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡುವುದನ್ನೂ ಒಳಗೊಂಡಿರುತ್ತದೆ. ಹೀಗೆ ಬಳಕೆದಾರರು ಸಲ್ಲಿಸಿ, ನಾವು ಪ್ರಕಟಿಸಿದ ಯಾವುದೇ ಬರಹದ ವಸ್ತುವಿಷಯ ಹಾಗೂ ಖಚಿತತೆಯ ಬಗ್ಗೆ ನಾವು ಯಾವುದೇ ಹೊಣೆ ಹೊರುವುದಿಲ್ಲ.

 

ಪ್ರಕಟಣೆಗಾಗಿ ನೀವು ನಮಗೆ ಬರಹವನ್ನು ಸಲ್ಲಿಸ ಬಯಸಿದರೆ, ಈ ಕೆಳಗಿನ ನಿಬಂಧನೆಗಳು ಮತ್ತು ಷರತ್ತುಗೊಳಪಟ್ಟು ಸಲ್ಲಿಸಬಹುದು:

 

* ನೀವು ನಮಗೆ ಸಲ್ಲಿಸುವ ಯಾವುದೇ ಬರಹವು ನಿಮ್ಮ ಸ್ವಯಂ ವಿವೇಚನೆಗೆ ಒಳಪಟ್ಟಿದ್ದಾಗಿರುತ್ತದೆ. ಅದರ ಪ್ರಕಟಣೆಗೂ ಮುನ್ನ ಆ ಬರಹ ಅಥವಾ ಗ್ರಾಫಿಕ್‌ ಗೆ ಹೆಚ್ಚುವರಿ ಅಂಶಗಳನ್ನು ಸೇರಿಸುವ ಅಥವಾ ತೆಗೆಯುವ ಹಕ್ಕು, ಪ್ರಕಟಣೆಯನ್ನು ನಿರಾಕರಿಸುವ ಹಕ್ಕು ನಮ್ಮದಾಗಿರುತ್ತದೆ;

 

* ನಮಗೆ ನೀಡಲಾದ, ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾದರಿಯೂ‌ ಒಳಗೊಂಡಂತೆ, ಆದರೆ ಅಷ್ಟಕ್ಕೇ ಸೀಮಿತವಾಗದ ಯಾವುದೇ ಸಾಮಗ್ರಿಗಳನ್ನು ಮರುಮುದ್ರಿಸಲು ಅಗತ್ಯವಾದ ವಿಶೇಷವಲ್ಲದ, ಶಾಶ್ವತ, ರಾಯಧನ ರಹಿತ, ಜಾಗತಿಕ ಪರವಾನಗಿ ನಮ್ಮದಾಗಿರುತ್ತದೆ;

 

* ನಮಗೆ ಸಲ್ಲಿಸಲಾದ ಯಾವುದೇ ಬರಹವು ನಿಮ್ಮ ಮೂಲ ಕೃತಿಯಾಗಿರುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ಮತ್ತಿತರೆ ಪೂರಕ ಹಕ್ಕುಗಳನ್ನು ನೀವು ಹೊಂದಿದ್ದೀರಿ ಎಂದು ನೀವು ಘೋಷಿಸುತ್ತೀರಿ;

 

* ನಮಗೆ ಸಲ್ಲಿಸಲಾದ ಬರಹವು ಅಶ್ಲೀಲ, ಹಾನಿಕಾರಕ, ಯಾವುದೇ ವ್ಯಕ್ತಿಗೆ ಮಾನನಷ್ಟವುಂಟು ಮಾಡುವ ಅಥವಾ ಅಕ್ರಮವಾದುದಾಗಿರುವುದಿಲ್ಲ ಎನ್ನುವ ಪ್ರಮಾಣ ನೀಡುತ್ತೀರಿ;

 

* ಇತರೆ ಬಳಕೆದಾರರನ್ನು ನೋಯಿಸುವ ರೀತಿಯಲ್ಲಿ ಸ್ಪ್ಯಾಮಿಂಗ್ ಮಾಡುವುದು ಅಥವಾ ಬರಹವನ್ನು ಪ್ರಕಟಿಸುವುದಕ್ಕೆ ನೀವು ಮುಂದಾಗುವುದಿಲ್ಲ ಎನ್ನುವುದಕ್ಕೆ ಸಮ್ಮತಿಸುತ್ತೀರಿ;

 

* ‌ಮೇಲಿನ ಯಾವುದೇ ಭರವಸೆಗಳ ಉಲ್ಲಂಘನೆಯು ನಮಗೆ ಹಾನಿ ಅಥವಾ ನಷ್ಟವುಂಟು ಮಾಡುತ್ತವೆ ಎನ್ನುವುದನ್ನು ನೀವು ಒಪ್ಪುತ್ತೀರಿ ಮತ್ತು ನೀವು ಸಲ್ಲಿಸಿದ ಬರಹವನ್ನು ಪ್ರಕಟಿಸುವುದರಿಂದ ಅಥವಾ ತತ್ಪರಿಣಾಮದಿಂದ ಯಾವುದೇ ಮೂರನೇ ವ್ಯಕ್ತಿ/ಸಂಸ್ಥೆಯ ಹೊಣೆಗಾರಿಕೆಯನ್ನು, ನಷ್ಟ, ಹಾನಿಪರಿಹಾರವನ್ನು ನಾವು ಭರಿಸಬೇಕಾದ ಸಂದರ್ಭ ಉದ್ಭವಿಸಿದರೆ ಅದರ ಸಂಪೂರ್ಣ ಮತ್ತು ಶಾಶ್ವತ ಹೊಣೆಯನ್ನು, ನಷ್ಟ ಭರ್ತಿಯನ್ನು ನೀವು ತುಂಬಿಕೊಡುತ್ತೀರಿ;

 

* ತಾಣದಲ್ಲಿ ನೀಡಲಾದ ಯಾವುದೇ ಸೇವೆಯನ್ನು ನೀವು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ ಎಂದು ನಮಗೆ ಮನವರಿಕೆಯಾದರೆ ವೈಯಕ್ತಿಕ ಸೇವೆಗಳಿಗೆ ನೀಡಲಾದ ನಿಮ್ಮ ಪ್ರವೇಶವನ್ನು ರದ್ದುಗೊಳಿಸುವ

ಅಧಿಕಾರವನ್ನು ನಾವು ಹೊಂದಿರುತ್ತೇವೆ.

 

 

 

ಗ್ರಾಫಿಕ್‌ ಸಾಮಗ್ರಿ ಸಲ್ಲಿಕೆಯ ಕುರಿತು

ನೀವು ನಮಗೆ ಸಲ್ಲಿಸಲಾದ ಯಾವುದೇ ರೀತಿಯ ಛಾಯಾಚಿತ್ರ ಅಥವಾ ಗ್ರಾಫಿಕ್‌ ಸಾಮಗ್ರಿಯು ಈ ಕೆಳಗಿನ ನಿಬಂಧನೆಗಳಿಗೆ ಒಳಪಟ್ಟಂತೆ ಇರುತ್ತದೆ. ಅರ್ಥಾತ್, ನೀವು ನಮಗೆ ಕಳುಹಿಸಿದ ಛಾಯಾಚಿತ್ರ(ಗಳು) ನೀವು ತೆಗೆದಿರುವಂತದ್ದು ಅಥವಾ ಆ ಛಾಯಾಚಿತ್ರ(ಗಳನ್ನು) ನಮಗೆ ಕಳುಹಿಸಲು  ಸಮ್ಮತಿ ಅಥವಾ ಅಧಿಕೃತ ಮಾಲೀಕರಿಂದ ಒಪ್ಪಿಗೆ ಪಡೆದಿದ್ದೀರಿ, ಮತ್ತು ವಿಶೇಷವಲ್ಲದ, ರಾಯಧನ ರಹಿತ ಪರವಾನಗಿಯನ್ನು ಛಾಯಾಚಿತ್ರ(ಗಳನ್ನು) ಯಾವುದೇ ಸಮಯದಲ್ಲಿ, ಯಾವುದೇ ರೀತಿಯಲ್ಲಿ ತಾಣದಲ್ಲಿ ಪ್ರಕಟಿಸಲು ಅಥವಾ ಬಳಸಲು ನೀವು ನಮಗೆ ಅನುಮತಿ ನೀಡುತ್ತೀರಿ. ಈ ಛಾಯಾಚಿತ್ರಗಳು ಮಾನಹಾನಿಕರವಾಗಲಿ, ಯಾವುದೇ ಕಾನೂನುಗಳ ಉಲ್ಲಂಘನೆಯನ್ನಾಗಲಿ ಮಾಡುವಂತಿರಬಾರದು.  

 

ಆಯ್ದ ಛಾಯಾಚಿತ್ರಗಳು ಮತ್ತು ಗ್ರಾಫಿಕ್ ಸಾಮಗ್ರಿಗಳನ್ನು ಮಾತ್ರವೇ ಸಂಪಾದಕರ ವಿವೇಚನೆಯ ಮೇರೆಗೆ ಬಳಸಲಾಗುವುದು ಹಾಗೂ ನಿಮ್ಮ ಛಾಯಾಚಿತ್ರ(ಗಳು) ಪ್ರಕಟಣೆಯಾದರೂ ಅದಕ್ಕೆ ನಿಮಗೆ ಯಾವುದೇ ಸಂಭಾವನೆಯನ್ನು ನೀಡಲಾಗುವುದಿಲ್ಲ. ತಾಣಕ್ಕೆ ಯಾವ ರೀತಿಯಲ್ಲಿ ಸೂಕ್ತವೋ ಹಾಗೆ ನಿಮ್ಮ ಛಾಯಾಚಿತ್ರ(ಗಳನ್ನು) ಕತ್ತರಿಸುವ, ಎಡಿಟ್‌ ಮಾಡುವ, ಕ್ರಾಪ್‌ ಮಾಡುವ ಅಥವಾ ಅಳವಡಿಸುವ ಸಾಧ್ಯತೆ ಇರುತ್ತದೆ. ಅದೇ ರೀತಿಯಲ್ಲಿ ಯಾವಾಗ ಬೇಕಾದರೂ ನಿಮ್ಮ ಛಾಯಾಚಿತ್ರ(ಗಳನ್ನು) ತೆಗೆದು ಹಾಕಬಹುದಾಗಿರುತ್ತದೆ. ನಿಮ್ಮ ಹೆಸರನ್ನು ಛಾಯಾಚಿತ್ರ(ಗಳ), ಗ್ರಾಫಿಕ್‌ ಪಕ್ಕದಲ್ಲಿ ಹಾಕಲಾಗುತ್ತದೆ. ಆದರೆ, ಛಾಯಾಚಿತ್ರ(ಗಳ) ಜೊತೆಗೆ ನೀವು ಕಳುಹಿಸಿರಬಹುದಾದ ಶೀರ್ಷಿಕೆ, ಟಿಪ್ಪಣಿಯನ್ನು ಬದಲಾಯಿಸುವ ಅಥವಾ ತೆಗೆದುಹಾಕುವ ಸಾಧ್ಯತೆಯೂ ಇರುತ್ತದೆ.

 

ಸಾಮಾನ್ಯ ಅಂಶ

ಈ ನಿಬಂಧನೆಗಳು ಕಾಲಾನುಕಾಲಕ್ಕೆ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ನಿಬಂಧನೆಗಳು ಮತ್ತು ಷರತ್ತುಗಳನ್ನು ನೀವು ನಿಯಮಿತವಾಗಿ ಪರಿಶೀಲಿಸುತ್ತೀರಿ ಮತ್ತು ಇವುಗಳಲ್ಲಿ ಮಾಡಲಾದ ಯಾವುದೇ ಬದಲಾವಣೆಗಳ ನಂತರವೂ ತಾಣದ ಬಳಕೆ ಮಾಡುತ್ತೀರಿ ಎಂದರೆ ಅವುಗಳನ್ನು ಒಪ್ಪಿದ್ದೀರಿ ಎಂದು ನಂಬಲಾಗುತ್ತದೆ. 

 

ಆಡಳಿತಾತ್ಮಕ ಕಾನೂನು ಮತ್ತು ನ್ಯಾಯವ್ಯಾಪ್ತಿ

ಈ ನಿಬಂಧನೆಗಳು ಭಾರತೀಯ ಕಾನೂನುನಿನ ಅನುಸಾರ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆ-೨೦೦೦ದ ಪ್ರಕಾರ ಶಾಸನಾತ್ಮಕವಾಗಿ ಆಡಳಿತಕ್ಕೊಳಪಡುತ್ತವೆ ಮತ್ತು ಅರ್ಥೈಸಲ್ಪಡುತ್ತವೆ. ಎಲ್ಲ ಸಂಬಂಧಪಟ್ಟ ನಿಯಮಗಳು, ನಿಯಂತ್ರಣಗಳು, ನಿರ್ದೇಶನಗಳು, ಆದೇಶಗಳು ಮತ್ತು ಅಧಿಸೂಚನೆಗಳು ಇದಕ್ಕೆ ಅನ್ವಯಿಸಲ್ಪಡುತ್ತವೆ. ಬೆಂಗಳೂರು ನ್ಯಾಯಾಲಯದ ಸಂಪೂರ್ಣ ನ್ಯಾಯವ್ಯಾಪ್ತಿಗೆ ಇದು ಒಳಪಟ್ಟಿದ್ದು ಇತರೆ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರತಾಗಿದೆ.

 

ದೈವಕೃತ (Force Majeure)

ನಾವು ತಾಣದ ಲಭ್ಯತೆಯು ನಿರಂತರವಾಗಿ, ಸ್ಥಿರವಾಗಿ ಇರುವಂತೆ ನೋಡಿಕೊಳ್ಳಲು ನಮ್ಮ ಕೈಲಾದ ಎಲ್ಲ ಪ್ರಯತ್ನವನ್ನೂ ಮಾಡುತ್ತೇವಾದರೂ, ಸಬ್‌ ಮೀಡಿಯಾವು ಇದರ ಯಾವುದೇ ಭರವಸೆಯನ್ನು ನೀಡುವುದಿಲ್ಲ, ಅಲ್ಲದೆ, ಯಾವುದೇ ರೀತಿಯ ಅಡಚಣೆಗೆ ಅಥವಾ ತಡವಾಗುವಿಕೆಗೆ ಸಬ್‌ ಮೀಡಿಯಾವು ಯಾವುದೇ ಜವಾಬ್ದಾರಿ, ಬಾಧ್ಯತೆಯನ್ನು ಹೊರುವುದಿಲ್ಲ.   ‌  

Kannada Bar & Bench
kannada.barandbench.com