Prof Sudhir Krishnaswamy 
ಸಂದರ್ಶನಗಳು

ಎನ್‌ಎಲ್‌ಎಸ್‌ಐಯು ಪ್ರತ್ಯೇಕ ಪ್ರವೇಶ ಪರೀಕ್ಷೆಯ ಹಿಂದಿನ ಕಾರಣಗಳನ್ನು ವಿವರಿಸಿದ ಉಪಕುಲಪತಿ

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಈ ಶೈಕ್ಷಣಿಕ ಸಾಲಿನ ಕೋರ್ಸ್‌ಗಳಿಗೆ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ಕಾನೂನು ಶಿಕ್ಷಣ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಮುಂದಾದ ಕ್ರಮದಿಂದಾಗಿ ರಾಷ್ಟ್ರೀಯ ಕಾನೂನು ಶಾಲೆಗಳ ಒಕ್ಕೂಟ (ಎನ್‌ಎಲ್ಎಸ್‌ಯು) ಮತ್ತು ಎನ್‌ಎಲ್‌ಎಸ್‌ಐಯು ನಡುವೆ ದೊಡ್ಡ ಕಂದರವೇ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಎನ್ಎಲ್‌ಎಸ್‌ಐಯು ಪ್ರತ್ಯೇಕ ಪರೀಕ್ಷೆ ಕೈಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ವಿವಿಯ ಉಪಕುಲಪತಿ ಪ್ರೊ. ಸುಧೀರ್‌ ಕೃಷ್ಣಸ್ವಾಮಿಯವರು ಬಾರ್‌ ಅಂಡ್‌ ಬೆಂಚ್‌ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಸಂದರ್ಶನದ ಆಯ್ದ ಭಾಗ ಇಲ್ಲಿದ

ಪ್ರತ್ಯೇಕ ಪರೀಕ್ಷೆ ನಡೆಸುವ ಹಿಂದಿನ ತಾರ್ಕಿಕ ಉದ್ದೇಶ ಏನು? ಇಂತಹ ಹಠಾತ್ ನಿರ್ಧಾರ ಏಕೆ ಕೈಗೊಳ್ಳಲಾಗಿದೆ?

ಈ ಪ್ರಕ್ರಿಯೆ ಆಗಸ್ಟ್ ತಿಂಗಳಿಡೀ ನಡೆದಿದೆ. ಆಗಸ್ಟ್ 22ರ ನಂತರ ಕೂಡ ಪರೀಕ್ಷೆ ಮುಂದೂಡಲಾಗುತ್ತದೆ ಎಂಬ ಬಗ್ಗೆ ನಾವು ಆರಂಭದಲ್ಲಿ ಕಳವಳ ವ್ಯಕ್ತಪಡಿಸಿದ್ದೇವೆ. ಒಕ್ಕೂಟ, ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ ಹಾಗೂ ಅಧ್ಯಾಪಕರ ನಡುವೆ ಈ ವಿಚಾರ ಮತ್ತೆ ಮತ್ತೆ ಪುಟಿದೇಳುತ್ತಿದೆ. ಒಂದೆಡೆ, ಆದಷ್ಟು ಬೇಗ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬೋಧಕವರ್ಗ ಮತ್ತು ಇ.ಸಿ. ಸರ್ವಾನುಮತದ ನಿರ್ಧಾರ ಕೈಗೊಂಡಿತ್ತು. ವಿಶ್ವವಿದ್ಯಾಲಯದಲ್ಲಿ ಅನೇಕ ಕೆಲಸ ಕಾರ್ಯಗಳು ನಡೆಯಬೇಕಿದೆ. ಸಿಎಲ್ಎಟಿ ಮೂಲಕ ನಡೆಯುವ ಎಲ್‌.ಎಲ್.‌ಬಿ‌ ಮತ್ತು ಎಲ್‌ಎಲ್‌ಎಂ ಕೋರ್ಸುಗಳ ಪ್ರವೇಶಾತಿ ಹೊರತುಪಡಿಸಿ ಎಲ್ಲಾ ಕಾರ್ಯಕ್ರಮಗಳನ್ನು ನಾವು ಪೂರ್ಣಗೊಳಿಸಿದ್ದೇವೆ.

ಮತ್ತೊಂದೆಡೆ, ನಮ್ಮಲ್ಲಿ ಒಕ್ಕೂಟ ಪ್ರಕ್ರಿಯೆ ಕೂಡ ಇದ್ದು ಅದು ಸ್ವಲ್ಪಮಟ್ಟಿಗೆ ಕ್ಲಿಷ್ಟಕರವಾಗಿದೆ. ಎರಡೂ ರೀತಿಯಲ್ಲಿಯೂ ಚರ್ಚೆಗಳು ಯಾವುದೇ ಫಲಿತಾಂಶಕ್ಕೆ ಕಾರಣವಾಗಲಿಲ್ಲ.

ಆದ್ದರಿಂದ, ಇದು ಹಠಾತ್ತಾಗಿ ಕೈಗೊಂಡ ನಿರ್ಧಾರವಲ್ಲ. ಸ್ವಲ್ಪ ಸಮಯ ಯೋಚಿಸಿ, ಕಾರ್ಯಪ್ರವೃತ್ತವಾಗಿ ಆ ಬಳಿಕ ತೆಗೆದುಕೊಂಡ ನಿರ್ಧಾರವಾಗಿದೆ. ಸೆಪ್ಟೆಂಬರ್ ಕಳೆದರೂ ಪ್ರವೇಶಾತಿ ಸಾಧ್ಯವಾಗದೇ ಹೋದರೆ ಬಿಕ್ಕಟ್ಟು ಉಂಟಾಗಲಿದೆ ಎಂದು ನಾವು ಅರಿತೆವು. ಇಡೀ ಶೈಕ್ಷಣಿಕ ವರ್ಷವೇ ಅಪಾಯದಲ್ಲಿದೆ. ನಮ್ಮದು ಟ್ರೈಮಿಸ್ಟರ್ ಇರುವ ಏಕೈಕ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ. ಒಂದೋ ನಾವು ಈ ವರ್ಷವಿಡೀ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವಂತಿರಲಿಲ್ಲ. ಇಲ್ಲವೇ ಕೆಲ ಉಪಯುಕ್ತ ಮತ್ತು ಅರ್ಥಪೂರ್ಣ ನಿರ್ಧಾರ ಕೈಗೊಂಡು ಪ್ರತ್ಯೇಕ ಪರೀಕ್ಷೆ ನಡೆಸುವುದು ಮಾತ್ರ ನಮ್ಮೆದುರಿನ ಆಯ್ಕೆಯಾಗಿತ್ತು. ನಾವು ಎರಡನೆಯದನ್ನು ಆಯ್ಕೆ ಮಾಡಿಕೊಂಡಿದ್ದೇವೆ.

NLSIU

ಈ ನಿರ್ಧಾರ ಕುರಿತಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಕಳವಳ ವ್ಯಕ್ತಪಡಿಸಿದ್ದು ಇದರಿಂದ ಕೆಲ ಪರಿಣಾಮಗಳು ಉಂಟಾಗಿವೆ. ಇದನ್ನು ಲೆಕ್ಕಿಸದೆ ಪ್ರತ್ಯೇಕ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ನೀವು ಅಂಟಿಕೊಳ್ಳಬೇಕೆ?

ನಾನು ಯಾವುದೇ ಕಾರಣಕ್ಕೂ ಇದನ್ನು ವ್ಯಾಜ್ಯವಾಗಿ ನೋಡುವುದಿಲ್ಲ. ಈ ಕುರಿತು ಧ್ವನಿ ಎತ್ತಿದವರಲ್ಲಿ ನಾವು ಮೊದಲಿಗರು. ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಕೂಡ ಕಠಿಣ ಪರಿಸ್ಥಿತಿಯಲ್ಲಿ ಇವೆ. ಈ ರೀತಿ (ಪ್ರತ್ಯೇಕ ಪರೀಕ್ಷೆ ನಡೆಯಬೇಕೆಂದು) ಭಾವಿಸುವ ಏಕೈಕ ವಿಶ್ವವಿದ್ಯಾಲಯ ನಮ್ಮದಲ್ಲ. ನಾವು ಒಕ್ಕೂಟದ ಜೊತೆ ಅತ್ಯಂತ ದೃಢವಾದ ಮತ್ತು ರಚನಾತ್ಮಕ ರೀತಿಯಲ್ಲಿ ತೊಡಗಿಕೊಳ್ಳುತ್ತೇವೆ. ಈ ಬೆಳವಣಿಗೆಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಸುಲಭವಾಗಿ ಪರಿಹರಿಸಬಹುದು ಎಂದು ನಾವು ಭಾವಿಸುತ್ತೇವೆ.

ಪ್ರತ್ಯೇಕ ಪರೀಕ್ಷೆ ನಡೆಸುವ ಹಿಂದಿನ ತಾರ್ಕಿಕ ಉದ್ದೇಶ ಏನು? ಇಂತಹ ಹಠಾತ್ ನಿರ್ಧಾರ ಏಕೆ ಕೈಗೊಳ್ಳಲಾಗಿದೆ?

ಈ ಪ್ರಕ್ರಿಯೆ ಆಗಸ್ಟ್ ತಿಂಗಳಿಡೀ ನಡೆದಿದೆ. ಆಗಸ್ಟ್ 22ರ ನಂತರ ಕೂಡ ಪರೀಕ್ಷೆ ಮುಂದೂಡಲಾಗುತ್ತದೆ ಎಂಬ ಬಗ್ಗೆ ನಾವು ಆರಂಭದಲ್ಲಿ ಕಳವಳ ವ್ಯಕ್ತಪಡಿಸಿದ್ದೇವೆ. ಒಕ್ಕೂಟ, ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಹಾಗೂ ಅಧ್ಯಾಪಕರ ನಡುವೆ ಈ ವಿಚಾರ ಮತ್ತೆ ಮತ್ತೆ ಪುಟಿದೇಳುತ್ತಿದೆ. ಒಂದೆಡೆ, ಆದಷ್ಟು ಬೇಗ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬೋಧಕ ವರ್ಗ ಮತ್ತು ಕಾರ್ಯಕಾರಿ ಸರ್ವಾನುಮತದ ನಿರ್ಧಾರ ಕೈಗೊಂಡಿತ್ತು. ವಿಶ್ವವಿದ್ಯಾಲಯದಲ್ಲಿ ಅನೇಕ ಕೆಲಸ ಕಾರ್ಯಗಳು ನಡೆಯಬೇಕಿದೆ. ಸಿಎಲ್ಎಟಿ ಮೂಲಕ ನಡೆಯುವ ಎಲ್‌ಎಲ್‌ಬಿ ಮತ್ತು ಎಲ್‌ಎಲ್ಎಂ ಕೋರ್ಸುಗಳ ಪ್ರವೇಶಾತಿ ಹೊರತುಪಡಿಸಿ ಎಲ್ಲಾ ಕಾರ್ಯಕ್ರಮಗಳನ್ನು ನಾವು ಪೂರ್ಣಗೊಳಿಸಿದ್ದೇವೆ.

ಮತ್ತೊಂದೆಡೆ, ನಮ್ಮಲ್ಲಿ ಒಕ್ಕೂಟ ಪ್ರಕ್ರಿಯೆ ಕೂಡ ಇದ್ದು ಅದು ಸ್ವಲ್ಪಮಟ್ಟಿಗೆ ಕ್ಲಿಷ್ಟಕರವಾಗಿದೆ. ಎರಡೂ ರೀತಿಯಲ್ಲಿಯೂ ಚರ್ಚೆಗಳು ಯಾವುದೇ ಫಲಿತಾಂಶಕ್ಕೆ ಕಾರಣವಾಗಲಿಲ್ಲ.

ಆದ್ದರಿಂದ, ಇದು ಹಠಾತ್ತಾಗಿ ಕೈಗೊಂಡ ನಿರ್ಧಾರವಲ್ಲ. ಸ್ವಲ್ಪ ಸಮಯ ಯೋಚಿಸಿ, ಕಾರ್ಯಪ್ರವೃತ್ತವಾಗಿ ಆ ಬಳಿಕ ತೆಗೆದುಕೊಂಡ ನಿರ್ಧಾರವಾಗಿದೆ. ಸೆಪ್ಟೆಂಬರ್ ಕಳೆದರೂ ಪ್ರವೇಶಾತಿ ಸಾಧ್ಯವಾಗದೇ ಹೋದರೆ ಬಿಕ್ಕಟ್ಟು ಉಂಟಾಗಲಿದೆ ಎಂದು ನಾವು ಅರಿತೆವು. ಇಡೀ ಶೈಕ್ಷಣಿಕ ವರ್ಷವೇ ಅಪಾಯದಲ್ಲಿದೆ. ನಮ್ಮದು ಟ್ರೈಮಿಸ್ಟರ್ ಇರುವ ಏಕೈಕ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ. ಒಂದೋ ನಾವು ಈ ವರ್ಷವಿಡೀ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವಂತಿರಲಿಲ್ಲ. ಇಲ್ಲವೇ ಕೆಲ ಉಪಯುಕ್ತ ಮತ್ತು ಅರ್ಥಪೂರ್ಣ ನಿರ್ಧಾರ ಕೈಗೊಂಡು ಪ್ರತ್ಯೇಕ ಪರೀಕ್ಷೆ ನಡೆಸುವುದು ಮಾತ್ರ ನಮ್ಮೆದುರಿನ ಆಯ್ಕೆಯಾಗಿತ್ತು. ನಾವು ಎರಡನೆಯದನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಈ ನಿರ್ಧಾರ ಕುರಿತಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಕಳವಳ ವ್ಯಕ್ತಪಡಿಸಿದ್ದು ಇದರಿಂದ ಕೆಲ ಪರಿಣಾಮಗಳು ಉಂಟಾಗಿವೆ. ಇದನ್ನು ಲೆಕ್ಕಿಸದೆ ಪ್ರತ್ಯೇಕ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ನೀವು ಅಂಟಿಕೊಳ್ಳಬೇಕೆ?

ನಾನು ಯಾವುದೇ ಕಾರಣಕ್ಕೂ ಇದನ್ನು ವ್ಯಾಜ್ಯವಾಗಿ ನೋಡುವುದಿಲ್ಲ. ಈ ಕುರಿತು ಧ್ವನಿ ಎತ್ತಿದವರಲ್ಲಿ ನಾವು ಮೊದಲಿಗರು. ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಕೂಡ ಕಠಿಣ ಪರಿಸ್ಥಿತಿಯಲ್ಲಿ ಇವೆ. ಈ ರೀತಿ (ಪ್ರತ್ಯೇಕ ಪರೀಕ್ಷೆ ನಡೆಯಬೇಕೆಂದು) ಭಾವಿಸುವ ಏಕೈಕ ವಿಶ್ವವಿದ್ಯಾಲಯ ನಮ್ಮದಲ್ಲ. ನಾವು ಒಕ್ಕೂಟದ ಜೊತೆ ಅತ್ಯಂತ ದೃಢವಾದ ಮತ್ತು ರಚನಾತ್ಮಕ ರೀತಿಯಲ್ಲಿ ತೊಡಗಿಕೊಳ್ಳುತ್ತೇವೆ. ಈ ಬೆಳವಣಿಗೆಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಸುಲಭವಾಗಿ ಪರಿಹರಿಸಬಹುದು ಎಂದು ನಾವು ಭಾವಿಸುತ್ತೇವೆ.

ಒಕ್ಕೂಟದೊಂದಿಗೆ ಚರ್ಚೆಗಳು ನಡೆಯುತ್ತಿವೆ. ಆ ಪ್ರಕ್ರಿಯೆ ಆಶಾದಾಯಕವಾಗಿ ಇರಲಿದ್ದು ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ.

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೆಚ್ಚುವರಿ ಪರೀಕ್ಷೆ ಬರೆಯಬೇಕಾದ ಸ್ಥಿತಿ ಒದಗಿದ್ದು ವಿದ್ಯಾರ್ಥಿಗಳಿಗೆ ಅನನುಕೂಲಕರವಾಗಿದೆ ಎಂದು ಟೀಕೆಗಳು ಕೇಳಿಬಂದಿವೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ?

ಯಾವುದೇ ಪ್ರಕ್ರಿಯೆಯಿಂದ ತಮ್ಮನ್ನು ಹೊರಗಿಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಭಾವಿಸಿದ್ದರೆ, ಅದು ಸತ್ಯವಲ್ಲ. ಸಿಎಲ್‌ಎಟಿಗೆ ನೋಂದಾಯಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳು ಸಿಎಲ್‌ಎಟಿಯ ನೋಂದಾವಣೆಯಲ್ಲಿ ಮುಂದುವರೆಯಲಿದ್ದಾರೆ. ನಾವು ಅತ್ಯಲ್ಪ ಶುಲ್ಕ ವಿಧಿಸುತ್ತಿದ್ದೇವೆ; ಯಾವುದೇ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ಈ ಬಗೆಯ ಶುಲ್ಕ ವಿಧಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ನಾವು ವೆಚ್ಚವನ್ನು ಹೊರುತ್ತಿದ್ದೇವೆ ಎಂಬುದು ಶುಲ್ಕದಿಂದಲೇ ಸ್ಪಷ್ಟವಾಗುತ್ತದೆ.

ಪ್ರತ್ಯೇಕ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಅದುವೇ ಹೆಬ್ಬಾಗಿಲಾಗಲಿದೆ. ಹಾಗೆ ಪ್ರವೇಶಾತಿ ಪಡೆಯದ ವಿದ್ಯಾರ್ಥಿಗಳಿಗೆ ಇನ್ನೂ ಸಿಎಲ್‌ಎಟಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿದೆ. ನಾವು ಒಕ್ಕೂಟದಲ್ಲಿಯೇ ಇರುತ್ತೇವೆ ಮತ್ತು ಪ್ರಕ್ರಿಯೆಗೆ ಸಂಪೂರ್ಣ ಬದ್ಧರಾಗಿದ್ದೇವೆ. ಸಿಎಲ್ಎಟಿ ಪರೀಕ್ಷೆಯನ್ನು ಪ್ರಸ್ತುತ ಸೆಪ್ಟೆಂಬರ್ 28 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಇದನ್ನು ಹಲವು ಬಾರಿ ಮುಂದೂಡಲಾಗಿತ್ತು.

ಯಾರೂ ಸಿಎಲ್‌ಎಟಿ ಬರೆಯುವ ಅವಕಾಶ ಕಳೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಾವು ಭಾವಿಸುತ್ತೇವೆ. ಅತ್ಯಂತ ವಿದ್ಯಾರ್ಥಿಸ್ನೇಹಿ ಮಾರ್ಗದಲ್ಲಿ ನಾವು ಅದನ್ನು ಮಾಡಬೇಕು.

ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರವೇಶ ಪರೀಕ್ಷೆಗಳನ್ನು ನಡೆಸಿವೆ. ಅವರು ಈಗಾಗಲೇ ಶುಲ್ಕವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಸಿಎಲ್‌ಎಟಿ 2020 ಪ್ರಕ್ರಿಯೆ ವಿಳಂಬದಿಂದಾಗಿ ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಅಡ್ಡಿಯಾಗಿದೆ. ನಾವು ಒಕ್ಕೂಟದ ಮುಂದೆ ಹಲವು ಆಯ್ಕೆಗಳನ್ನು ಇಟ್ಟಿದ್ದೆವು. ಆದರೆ ದುರದೃಷ್ಟವಶಾತ್, ಅವುಗಳಲ್ಲಿ ಯಾವುದನ್ನೂ ಸ್ವೀಕರಿಸಲಿಲ್ಲ. ಒಂದು ವೇಳೆ ಸ್ವೀಕರಿಸಿದ್ದರೆ, ಅದು ಸುಗಮ ಪ್ರಕ್ರಿಯೆಯಾಗಿರುತ್ತಿತ್ತು ಮತ್ತು ನಾವು ಈಗ ಪ್ರವೇಶಾತಿಯನ್ನು ಪೂರ್ಣಗೊಳಿಸಿರುತ್ತಿದ್ದೆವು.

ನಮಗೆ ಯಾರೊಂದಿಗೂ ಅಸಮಾಧಾನ ಇಲ್ಲ. ಅಂತಿಮವಾಗಿ, ಇದು ನಾವೆಲ್ಲರೂ ಒಟ್ಟಾಗಿ ಉಪಯೋಗ ಪಡೆಯುವಂತಹ ವ್ಯವಸ್ಥೆಯಾಗಿದೆ. ಆದರೆ ನಾವೀಗ ಮುಂದುವರಿಯಲೇಬೇಕಿದ್ದು ಕಳೆದ ಎರಡು-ಮೂರು ತಿಂಗಳುಗಳಿಂದ ಸಿಲುಕಿಕೊಂಡಿದ್ದ ರೀತಿಯಲ್ಲೇ ಇರಲು ಸಾಧ್ಯವಿಲ್ಲ.