ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಸೆಪ್ಟೆಂಬರ್ 16ರ ವರೆಗೆ 55 ಲಕ್ಷ ಪ್ರಕರಣಗಳು ಬಾಕಿ ಇವೆ ಎಂದು ಸಂಸತ್ತಿಗೆ ಕೇಂದ್ರ ಸರ್ಕಾರ ವಿವರಿಸಿದೆ. ಅಲಹಾಬಾದ್ ಹೈಕೋರ್ಟ್ ಅಗ್ರಸ್ಥಾನದಲ್ಲಿದ್ದು, ಒಟ್ಟು 7,46,677 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
ಅಲಹಾಬಾದ್ ಹೈಕೋರ್ಟ್ ಬಳಿಕ ಪಂಜಾಬ್ ಮತ್ತು ಹರಿಯಾಣ (6,07,069 ಪ್ರಕರಣ), ಮದ್ರಾಸ್ (5,70,282 ಪ್ರಕರಣ), ರಾಜಸ್ಥಾನ (5,07,749 ಪ್ರಕರಣ) ಮತ್ತು ಮಧ್ಯಪ್ರದೇಶ (3,75,630 ಪ್ರಕರಣ) ಹೈಕೋರ್ಟ್‌ಗಳು ನಂತರದ ಸ್ಥಾನದಲ್ಲಿವೆ.
ದೇಶದ ಎಲ್ಲಾ 25 ಹೈಕೋರ್ಟ್‌ಗಳಲ್ಲಿ ಒಟ್ಟಾರೆ 51,52,921 ಪ್ರಕರಣಗಳು ಬಾಕಿ ಇವೆ. ಈ ಪೈಕಿ 36,77,089 ಸಿವಿಲ್ ಮತ್ತು 12,75,832 ಕ್ರಿಮಿನಲ್ ಪ್ರಕರಣಗಳಾಗಿವೆ.
ದೇಶದ ಎಲ್ಲಾ ಜಿಲ್ಲಾ ಮತ್ತು ಸಮಾನ ನ್ಯಾಯಾಲಯಗಳಲ್ಲಿ 3,44,73,068 ಪ್ರಕರಣಗಳು ಬಾಕಿ ಇವೆ. ಈ ಪೈಕಿ 94,49,268 ಸಿವಿಲ್ ಪ್ರಕರಣಗಳಾಗಿದ್ದು, 2,50,53,800 ಕ್ರಿಮಿನಲ್ ಪ್ರಕರಣಗಳಾಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.
ಕರ್ನಾಟಕದ ಹೈಕೋರ್ಟ್‌ನಲ್ಲಿ 1,97,690 ಪ್ರಕರಣಗಳು ಬಾಕಿ
ಕರ್ನಾಟಕ ಹೈಕೋರ್ಟ್‌ನಲ್ಲಿ 1,65,645 ಸಿವಿಲ್ ಮತ್ತು 32,045 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟಾರೆ 1,97,690 ಪ್ರಕರಣಗಳು ಬಾಕಿ ಇವೆ. ಜಿಲ್ಲಾ ಮತ್ತು ಸಮಾನ ನ್ಯಾಯಾಲಯಗಳಲ್ಲಿ 8,13,511 ಸಿವಿಲ್ ಮತ್ತು 9,23,496 ಕ್ರಿಮಿನಲ್ ಪ್ರಕರಣಗಳೂ ಸೇರಿದಂತೆ ಒಟ್ಟು 17,37,007 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.