Book Release of Ramanujan’s Patent Law 
ಸುದ್ದಿಗಳು

ಸಾರಾಸಗಟಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಿರಸ್ಕರಿಸಬೇಕಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆವಿ ವಿಶ್ವನಾಥನ್

ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್ನಲ್ಲಿ ಆಯೋಜಿಸಲಾಗಿದ್ದ ವಕೀಲ ಆದರ್ಶ್ ಅವರು ಬರೆದಿರುವ ಕಾಮೆಂಟರಿ ಆನ್ ರಾಮಾನುಜನ್ಸ್ ಪೇಟೆಂಟ್ ಲಾ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

Bar & Bench

ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌- ಎಐ) ಸಾರಾಸಗಟಾಗಿ ತಿರಸ್ಕರಿಸುವ ಅಗತ್ಯವಿಲ್ಲ. ಆದರೆ ಅದನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿರ್ದಿಷ್ಟ ಪ್ರಮಾಣದ ಚಿಂತನೆಗೆ ಅದು ಕರೆ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಈಚೆಗೆ ತಿಳಿಸಿದ್ದಾರೆ.

ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ವಕೀಲ ಆದರ್ಶ್ ಅವರು ಬರೆದಿರುವ ಕಾಮೆಂಟರಿ ಆನ್ ರಾಮಾನುಜನ್ಸ್ ಪೇಟೆಂಟ್ ಲಾ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆಯ ಕುರಿತು ಗ್ರಂಥದಲ್ಲಿ ಆಕರ್ಷಕ ಚರ್ಚೆ ಇರುವುದು ಮತ್ತು ಪೇಟೆಂಟ್ ಕಾನೂನಿನೊಂದಿಗೆ ಅದು ನಡೆಸುವ ಸಂವಾದದ ಕುರಿತು ಮೆಚ್ಚುಗೆ ನ್ಯಾ. ವಿಶ್ವನಾಥನ್‌ ಮೆಚ್ಚುಗೆ ಸೂಚಿಸಿದರು.

“ಎಐಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ನಾನು ಭಾವಿಸುವುದಿಲ್ಲ. ಆ ಕುರಿತು ಅಂತಿಮ ಕರೆಯನ್ನು ತೆಗೆದುಕೊಳ್ಳುವ ಮೊದಲು ಎಐ ಒಂದು ನಿರ್ದಿಷ್ಟ ಪ್ರಮಾಣದ ಚಿಂತನೆಗೆ ಕರೆ ನೀಡುತ್ತದೆ, ” ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿಗಳಾದ ಮನಮೋಹನ್ “ಪೇಟೆಂಟ್ ಕಾನೂನಿನಲ್ಲಿ  ಭವಿಷ್ಯವಿದೆ. ಇದು ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ವಕೀಲರಿಗೆ ಮೊದಲ ಆದ್ಯತೆ ನೀಡುತ್ತದೆ” ಎಂದರು.

 ಭಾರತೀಯ ಪೇಟೆಂಟ್ ಕಚೇರಿಯಲ್ಲಿ ಪೇಟೆಂಟ್ ಅರ್ಜಿಗಳ ಸಲ್ಲಿಕೆ ಹೆಚ್ಚಳವಾಗಿರುವ ಕುರಿತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯನ್ನು ಪ್ರಸ್ತಾಪಿಸಿದ ಅವರು ಇದೊಂದು ಸ್ಪೂರ್ತಿದಾಯಕ ಬೆಳವಣಿಗೆ ಎಂದರು.

ದೆಹಲಿ ಹೈಕೋರ್ಟ್‌ನ  ವಕೀಲರು ಮತ್ತು ನ್ಯಾಯಾಧೀಶರು ಈ ಕ್ಷೇತ್ರದಲ್ಲಿ ದಾವೆ ನಡೆಸಲು  ಸಿದ್ಧರಾಗಿದ್ದಾರೆ. ನಮ್ಮ ವಕೀಲ ವರ್ಗ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಹೊಂದಿಕೆಯಾಗಲು ಅಣಿಗೊಂಡಿದೆ ಎಂದು ಅವರು ಶ್ಲಾಘಿಸಿದರು.

ಬೌದ್ಧಿಕ ಆಸ್ತಿ (ಐಪಿ) ವಿಭಾಗದ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಜ್ಯೋತಿ ಸಿಂಗ್ ಮತ್ತು ಅಮಿತ್ ಬನ್ಸಾಲ್ ಅವರು ಇತ್ತೀಚೆಗೆ ಐಪಿಯಲ್ಲಿ 50 ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿ  ಉಲ್ಲೇಖಿಸಲಾಗಿದೆ ಎಂದು ಅವರು ಹೆಮ್ಮೆಪಟ್ಟರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್, ಹಿರಿಯ ವಕೀಲರಾದ ಸಿ.ಎಸ್.ವೈದ್ಯನಾಥನ್ ಮತ್ತು ಚಂದರ್ ಎಂ.ಲಾಲ್ ಭಾಗಿಯಾಗಿದ್ದರು.