Supreme Court
Supreme Court 
ಸುದ್ದಿಗಳು

ತಮ್ಮ ನಿವಾಸದಿಂದಲೇ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು; ಭೌತಿಕ ವಿಚಾರಣೆ ಅಮಾನತು

Bar & Bench

ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳು ತಮ್ಮ ಅಧಿಕೃತ ನಿವಾಸದಿಂದಲೇ ಇಂದು ಕಲಾಪ ನಡೆಸಿದ್ದಾರೆ ಸುಪ್ರೀಂ ಕೋರ್ಟ್‌ ಕಟ್ಟಡದ ಕೊಠಡಿಗಳಲ್ಲಿ ಗಾಜಿನ ಪರದೆಯ ಹಿಂದಿನ ಆಸನದಲ್ಲಿ ಕುಳಿತು ನ್ಯಾಯಮೂರ್ತಿಗಳು ಇಂದು ವಿಚಾರಣೆ ನಡೆಸುತ್ತಿಲ್ಲ. ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ) ಆನ್‌ಲೈನ್ ವಿಚಾರಣೆಯ ಕುರಿತಾದ ತನ್ನ ವ್ಯವಸ್ಥೆಯ ಕೂಲಂಕಷ ಪರೀಕ್ಷೆಯನ್ನು ನಡೆಸಲು ಮುಂದಾಗಿರುವುದು ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಒಂಭತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ನ್ಯಾಯಮೂರ್ತಿಗಳು ತಮ್ಮ ನಿವಾಸದಿಂದ ಕಲಾಪ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಲಾಪ ನಡೆಸಲಿರುವ ನ್ಯಾಯಮೂರ್ತಿಗಳಿಗೆ ಸೂಕ್ತ ತಾಂತ್ರಿಕ ವ್ಯವಸ್ಥೆ ಮಾಡಲು ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿರುವ ಬಗ್ಗೆ ವಿವಿಧ ಮೂಲಗಳು 'ಬಾರ್‌ ಅಂಡ್‌ ಬೆಂಚ್'‌ಗೆ ಖಚಿತಪಡಿಸಿವೆ.

ಸೋಮವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ನ್ಯಾಯಾಲಯದ ಪ್ರಕ್ರಿಯೆಗಳು ಬೆಳಿಗ್ಗೆ 11.30ಕ್ಕೆ ಆರಂಭಗೊಳ್ಳಲಿವೆ ಎಂದು ಸುಪ್ರೀಂ ಕೋರ್ಟ್‌ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಬೆಳಿಗ್ಗೆ 11.00ಕ್ಕೆ ಆರಂಭವಾಗಬೇಕಿದ್ದ ಪೀಠದ ಕಲಾಪಗಳು ಮಧ್ಯಾಹ್ನ 12ಕ್ಕೆ ಆರಂಭವಾಗಲಿವೆ ಎಂದು ತಿಳಿಸಲಾಗಿತ್ತು.

ಭೌತಿಕವಾಗಿ ಪ್ರಕರಣಗಳ ವಿಚಾರಣೆಯನ್ನು ಅಮಾನತುಗೊಳಿಸಲಾಗಿದ್ದು, ವರ್ಚುವಲ್‌ ವಿಚಾರಣೆ ಮುಂದುವರಿಯಲಿದೆ ಎಂದು ಮತ್ತೊಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನ್ಯಾಯಿಕೇತರ ರಿಜಿಸ್ಟ್ರಾರ್‌ ಅವರಿಗೆ ಈ ಜವಾಬ್ದಾರಿ ನೀಡಲಾಗಿದ್ದು, ಭೌತಿಕವಾಗಿ ಪ್ರಕರಣ ವಿಚಾರಣೆ ಸದ್ಯದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ಕಳೆದ ಒಂದು ವಾರದಲ್ಲಿ ಸುಪ್ರೀಂ ಕೋರ್ಟ್‌ನ ಫೈಲಿಂಗ್‌ ವಿಭಾಗದಲ್ಲಿ ಆರು ಮಂದಿ ಕೋವಿಡ್‌ ಸೋಂಕಿಗೆ ಈಡಾಗಿದ್ದನ್ನೂ ಇಲ್ಲಿ ಗಮನಿಸಬಹುದು.