Matrimonial Dispute 
ಸುದ್ದಿಗಳು

ವೈವಾಹಿಕ ವ್ಯಾಜ್ಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಂಪೆನಿ ಬ್ಯಾಂಕ್ ಖಾತೆ ನಿರ್ವಹಿಸಲು ಅಲಾಹಾಬಾದ್ ಹೈಕೋರ್ಟ್ ಅವಕಾಶ

ತಮ್ಮ ಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದ ಕಂಪೆನಿ ನಿರ್ದೇಶಕರೊಬ್ಬರ ಪತ್ನಿ ಖಾತೆ ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗೆ ಕೇಳಿಕೊಂಡಿದ್ದರು. ಆಕೆ ಕಂಪನಿಯಲ್ಲಿ ಶೇಕಡಾ 0.75ರಷ್ಟು ಪಾಲು ಹೊಂದಿದ್ದರು.

Bar & Bench

ರಿಯಲ್‌ ಎಸ್ಟೇಟ್‌ ಕಂಪೆನಿಯ ನಿರ್ದೇಶಕರೊಬ್ಬರ ಪತ್ನಿಯ ಕೋರಿಕೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಂಪೆನಿಯ ಖಾತೆ ನಿರ್ವಹಿಸಲು ಅದಕ್ಕೆ ಅವಕಾಶ ನೀಡಬೇಕು ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ. [ಪ್ರೊವ್ಯೂ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪ್ರೊವ್ಯೂ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್‌ಗೆ ಸೇರಿದ ಬ್ಯಾಂಕ್ ಖಾತೆಯಿಂದ ಮೊತ್ತ ಹಿಂಪಡೆಯಲು ನಿರಾಕರಿಸುವ ಮತ್ತು ಅಂತಹ ವಿನಂತಿ ಸ್ವೀಕರಿಸುವ ಯಾವುದೇ ಅಧಿಕಾರ ಬ್ಯಾಂಕ್‌ಗೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಪೀಠ ತಿಳಿಸಿತು.

ಅರ್ಜಿದಾರರ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಯಾವುೇ ಸಕ್ಷಮ ನ್ಯಾಯಾಲಯ ಆದೇಶಿಸಿಲ್ಲ. ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಕ್ರಮ ಕೈಗೊಂಡಿಲ್ಲ ಅಥವಾ ಆದೇಶ ಹೊರಡಿಸಿಲ್ಲ. ನಿರ್ದೇಶಕರ ವೈವಾಹಿಕ ವಿವಾದಕ್ಕೆ ಸಂಬಂಧಿಸಿದಂತೆ ಅವರ ಖಾಸಗಿ ಹಕ್ಕುಗಳನ್ನು ನಿರ್ಣಯಿಸಲು ಬ್ಯಾಂಕ್‌ಗೆ ಅಧಿಕಾರ ನೀಡುವ ಯಾವುದೇ ನಿಬಂಧನೆ ಕಾನೂನಿನಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಖಾತೆ ಸ್ಥಗಿತಗೊಳಿಸಿದ್ದ ಬ್ಯಾಂಕ್ ನಿರ್ಧಾರವನ್ನು ಪ್ರೊವ್ಯೂ ಕನ್ಸ್ಟ್ರಕ್ಷನ್ಸ್ ಪ್ರಶ್ನಿಸಿತ್ತು, ಖಾತೆ ಸ್ಥಗಿತದಿಂದ ಕಂಪೆನಿಯ ಅಗತ್ಯ ಕಾರ್ಯಗಳು ಕುಂಠಿತವಾಗಿವೆ ಎಂದು ಅಧಿಕೃತ ಸಹಿದಾರ ಮತ್ತು ನಿರ್ದೇಶಕ ರಾಜೀವ್ ಕುಮಾರ್ ಅರೋರಾ ಅವರ ಮೂಲಕ ಸಲ್ಲಿಸಿದ ಅರ್ಜಿ ಮೂಲಕ ಕಂಪೆನಿ ವಾದಿಸಿತ್ತು.

ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಹೂಡಿರುವ ತಮ್ಮ ಪತ್ನಿ ನಂತರ ಬ್ಯಾಂಕ್ನ ಗಾಜಿಯಾಬಾದ್ ಶಾಖೆಯಲ್ಲಿ ನಿರ್ವಹಿಸಲಾದ ಖಾತೆಯನ್ನು ಸ್ಥಗಿತಗೊಳಿಸುವಂತೆ ಕೇಳಿಕೊಂಡಿದ್ದರು. ಅರೋರಾ ಕಂಪನಿಯಲ್ಲಿ ಶೇ. 41.15ರಷ್ಟು ಪಾಲನ್ನು ಹೊಂದಿದ್ದರೆ, ಅವರ ಪತ್ನಿಯ ಪಾಲು ಶೇ. 0.75ರಷ್ಟು ಇತ್ತು.

ವಾದ ಆಲಿಸಿದ ನ್ಯಾಯಾಲಯ ಕಾನೂನಿನಲ್ಲಿ ಅನುಮತಿಸಲಾದ ತುರ್ತು ಸಂದರ್ಭಗಳಲ್ಲಿ ಮಾತ್ರ ಬ್ಯಾಂಕ್ ಮೊತ್ತ ಹಿಂಪಡೆಯಲು ಅವಕಾಶ ನಿರಾಕರಿಸಬಹುದು ಎಂದಿತು.

ಅರೋರಾ ಅವರ ಪತ್ನಿ ತಮ್ಮ ದೂರುಗಳನ್ನು ಸಕ್ಷಮ ನ್ಯಾಯಾಲಯ ಅಥವಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಸಲ್ಲಿಸಬಹುದು ಎಂದು ಕೂಡ ಅದು ಇದೇ ವೇಳೆ ಸಲಹೆ ನೀಡಿತು.

ಅಂತೆಯೇಕಂಪೆನಿಸಲ್ಲಿಸಿದ್ದಅರ್ಜಿಪುರಸ್ಕರಿಸಿದನ್ಯಾಯಾಲಯಬ್ಯಾಂಕ್ನಿರ್ಧಾರರದ್ದುಗೊಳಿಸಿತಲ್ಲದೆಕಂಪೆನಿತನ್ನಖಾತೆನಿರ್ವಹಿಸಲುಅನುಮತಿಸುವಂತೆಬ್ಯಾಂಕ್‌ಗೆನಿರ್ದೇಶನನೀಡಿತು.