ASG Aishwarya Bhati  
ಸುದ್ದಿಗಳು

ಕಾಮನ್‌ವೆಲ್ತ್‌ ಸೇನಾ ನ್ಯಾಯ ಸಂಸ್ಥೆ ಸದಸ್ಯರಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ನೇಮಕ

Bar & Bench

ಪ್ರಜಾಪ್ರಭುತ್ವ, ಉತ್ತಮ ಆಡಳಿತ, ಶಾಂತಿ ಹಾಗೂ ಕಾನೂನು ಆಳ್ವಿಕೆ ಉತ್ತೇಜಿಸುವ ಅಂತಾರಾಷ್ಟ್ರೀಯ ಸಂಸ್ಥೆಯಾದ ಕಾಮನ್‌ವೆಲ್ತ್‌ನ ಜಾಗತಿಕ ಸಮಾಲೋಚನಾ ಗುಂಪಿನ ಸದಸ್ಯರಾಗಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರನ್ನು ನೇಮಕ ಮಾಡಲಾಗಿದೆ.

ಎಎಸ್‌ಜಿ ಭಾಟಿ ಅವರು ಜಾಗತಿಕ ಸೇನಾ ನ್ಯಾಯ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಎರಡನೇ ಭಾರತೀಯ ವ್ಯಕ್ತಿ.

ಮೂಲತಃ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲ (ಮೇಜರ್) ನವದೀಪ್ ಸಿಂಗ್ ಅವರನ್ನು ಈ ವರ್ಷದ ಆರಂಭದಲ್ಲಿ ಕಾಮನ್‌ವೆಲ್ತ್ ಸೆಕ್ರೆಟರಿಯೇಟ್‌ ರಚಿಸಿದ್ದ ಐವರು ಸದಸ್ಯರ ಸೇನಾ ನ್ಯಾಯ ಸಲಹಾ ಸಮಿತಿಗೆ ನೇಮಿಸಲಾಗಿತ್ತು.

ಭಾಟಿ ಅವರು ಹಿರಿಯ ವಕೀಲರಾಗಿದ್ದು, ಮೂಲತಃ ಅವರು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಾರೆ. ಮಹಿಳಾ ಸಶಸ್ತ್ರ ಪಡೆ ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡುವ ಮಹತ್ವದ ತೀರ್ಪಿಗೆ ಕಾರಣವಾದ ಪ್ರಕರಣದಲ್ಲಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.