Bharati Singh, Haarsh Limbachiyaa
Bharati Singh, Haarsh Limbachiyaa 
ಸುದ್ದಿಗಳು

ಮಾದಕವಸ್ತು ಪ್ರಕರಣ: ನ್ಯಾಯಾಂಗ ಬಂಧನದಲ್ಲಿರುವ ಹಾಸ್ಯನಟಿ ಭಾರತಿ ಸಿಂಗ್‌, ಪತಿ ಹರ್ಷ್‌ ಜಾಮೀನು ಅರ್ಜಿ ನಾಳೆ ವಿಚಾರಣೆ

Bar & Bench

ಶನಿವಾರ ಬಂಧಿಸಲಾಗಿದ್ದ ಹಾಸ್ಯನಟಿ ಭಾರತಿ ಸಿಂಗ್‌ ಮತ್ತವರ ಪತಿ ಹರ್ಷ್‌ ಲಿಂಬಾಚಿಯಾ ಅವರನ್ನು ಡಿ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈನ ಎಸ್ಪ್ಲನೇಡ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಇದೇ ವೇಳೆ ದಂಪತಿಯ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ.

ಮಾದಕ ವಸ್ತು ಇರಿಸಿಕೊಂಡಿದ್ದ ಆರೋಪದ ಮೇರೆಗೆ ಇಬ್ಬರನ್ನೂ ಶನಿವಾರ ಎನ್‌ಸಿಬಿ ದಾಳಿ ನಡೆಸಿ ಬಂಧಿಸಿತ್ತು. ದಂಪತಿ ಸೇವಿಸುತ್ತಿರುವ ಮಾದಕ ವಸ್ತುವಿನ ಪ್ರಮಾಣದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ತನಿಖೆ ಆರಂಭಿಕ ಹಂತದಲ್ಲಿರುವುದರಿಂದ ರ ಡಿಸೆಂಬರ್ 4 ರವರೆಗೆ 13 ದಿನಗಳ ಕಾಲ ಸಿಂಗ್ ಮತ್ತು ಅವರ ಪತಿಯನ್ನು ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತು.

ಆದರೆ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ ದಂಪತಿ ಸೇವಿಸಿದ್ದರು ಎನ್ನಲಾದ ಮಾದಕ ವಸ್ತು ಸಣ್ಣ ಪ್ರಮಾಣದ್ದು. ಈ ಬಗೆಯ ಅಪರಾಧಗಳಿಗೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ದೊರೆತಿರುವ ಸಾಕ್ಷ್ಯಗಳ ಪ್ರಕಾರ ಅವರು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರೇ ವಿನಾ ಅದರ ಮಾರಾಟದಲ್ಲಿ ತೊಡಗಿರಲಿಲ್ಲ ಎಂದು ಹೇಳಿದೆ.

ಲಿಂಬಾಚಿಯಾ ಅವರ ಪ್ರೊಡಕ್ಷನ್‌ ಹೌಸ್‌ ಮೇಲೆ ದಾಳಿ ಮಾಡಿದ್ದ ಎನ್‌ಸಿಬಿ ಕೆಲವು ಗ್ರಾಂಗಳಷ್ಟು ಮಾದಕವಸ್ತುಗಳನ್ನು ಮತ್ತು ಅಕ್ರಮವಾಗಿ ಇರಿಸಲಾಗಿದ್ದ ಹಣವನ್ನು ವಶಪಡಿಸಿಕೊಂಡಿತ್ತು. ದಂಪತಿ ಪರವಾಗಿ ವಾದ ಮಂಡಿಸಿದ ವಕೀಲ ಅಯಾಜ್‌ ಖಾನ್‌ ಇವರ ಪರವಾಗಿ ಜಾಮೀನು ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇದೇ ನ್ಯಾಯಾಲಯದಲ್ಲಿ ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.