Jyoti Jagtap
Jyoti Jagtap 
ಸುದ್ದಿಗಳು

ಭೀಮಾ ಕೋರೆಗಾಂವ್ ಪ್ರಕರಣ: ಜ್ಯೋತಿ ಜಗತಾಪ್ ಜಾಮೀನು ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

Bar & Bench

2018ರ ಭೀಮಾ ಕೋರೆಗಾಂವ್ ಪ್ರಕರಣದ ಕಿರಿಯ ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಜಗತಾಪ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಕಬೀರ್ ಕಲಾ ಮಂಚ್ (ಕೆಕೆಎಂ) ಹೆಸರಿನ ನಿಷೇಧಿತ ಕಲಾ ಪ್ರದರ್ಶನ ಸಂಘಟನೆಯ ಸದಸ್ಯರಾಗಿರುವ ಜ್ಯೋತಿ ಅವರು ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಈ ವರ್ಷದ ಫೆಬ್ರವರಿ 14ರಂದು ಹೈಕೋರ್ಟ್‌ ಮೊರೆ ಹೋಗಿದ್ದರು.

ಎನ್‌ಐಎ ವಾದ ಮೇಲ್ನೋಟಕ್ಕೆ ನೈಜವಾಗಿದೆ ಎಂದ ನ್ಯಾಯಮೂರ್ತಿಗಳಾದ ಎ ಎಸ್‌ ಗಡ್ಕರಿ ಮತ್ತು ಮಿಲಿಂದ್‌ ಜಾಧವ್‌ ಅವರಿದ್ದ ಪೀಠ ಜ್ಯೋತಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.   

ಜ್ಯೋತಿ ಅವರು ನಿಷೇಧಿತ ಸಂಘಟನೆಯಾದ ಕೆಕೆಎಂ ಸದಸ್ಯರಾಗಿದ್ದಾರೆ ಎಂದು ಯುಎಪಿಎ ಕಾಯಿದೆಯಡಿ ಆರೋಪ ಮಾಡಲಾಗಿತ್ತು. 2002ರಲ್ಲಿ ನಡೆದ ಗುಜರಾತ್ ಗಲಭೆಯ ನಂತರ ರೂಪುಗೊಂಡಿದ್ದ ಈ ಸಾಂಸ್ಕೃತಿಕ ಗುಂಪು ಸಂಗೀತ ಮತ್ತು ಕವಿತೆಗಳ ಮೂಲಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿತ್ತು ಎನ್ನಲಾಗಿದೆ.

ಜ್ಯೋತಿ ಅವರು ನಕ್ಸಲ್ ನಂಟು ಹೊಂದಿದ್ದ (ಕಳೆದ ವರ್ಷ ಎನ್ಕೌಂಟರ್‌ನಲ್ಲಿ ಹತ್ಯೆಗೀಡಾದ) ಮಿಲಿಂದ್ ತೇಲ್ತುಂಬ್ಡೆ ಅವರನ್ನು ಭೇಟಿಯಾಗಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು. ಸರ್ಕಾರದ ವಿರುದ್ಧ ದ್ವೇಷ ಸೃಷ್ಟಿಸಲು ಆಕೆ ಇತರೆ ಆರೋಪಿಗಳೊಂದಿಗೆ ಸೇರಿ ಬೃಹತ್ ಸಾರ್ವಜನಿಕ ಗುಂಪನ್ನು ಎತ್ತಿಕಟ್ಟಲು ಯತ್ನಿಸಿದ್ದರು. ಆಕೆ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರಾಗಿದ್ದು ಮಿಲಿಂದ್ ಸೂಚನೆಯಂತೆ ನಗರ ಪ್ರದೇಶಗಳಲ್ಲಿ ಮಾವೋವಾದಿ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದರು ಎಂದು ಎನ್ಐಎ ಆರೋಪಿಸಿದೆ.