Adnya Naik
Adnya Naik 
ಸುದ್ದಿಗಳು

ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ: ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣದ ಮರು ತನಿಖೆಗಾಗಿ ಬಾಂಬೆ ಹೈಕೋರ್ಟ್‌ಗೆ ಮನವಿ

Bar & Bench

ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಾಬ್‌ ಗೋಸ್ವಾಮಿ ಆರೋಪಿಯಾಗಿರುವ, ತಮ್ಮ ತಂದೆ ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಆತ್ಮಹತ್ಯೆ ಪ್ರಕರಣದ ಮರುತನಿಖೆ ನಡೆಸಬೇಕೆಂದು ಕೋರಿ ಅವರ ಪುತ್ರಿ ಆದ್ನ್ಯಾ ನಾಯಕ್‌ ಬಾಂಬೆ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ಅನ್ವಯ್‌ ಅವರ ಸಾವಿಗೆ ಸಂಬಂಧಿಸಿದಂತೆ ಕಾನೂನುಬಾಹಿರ ಬಂಧನ ಮತ್ತು ಸೆರೆವಾಸ ಪ್ರಶ್ನಿಸಿ ಅರ್ನಾಬ್‌ ಸಲ್ಲಿಸಿದ್ದ ಅರ್ಜಿಯ ಜೊತೆಗೆ ತಮ್ಮ ಅರ್ಜಿಯ ವಿಚಾರಣೆ ನಡೆಸಬೇಕೆಂದು ಆದ್ನ್ಯಾ ಅವರು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠಕ್ಕೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ತನಿಖೆಯನ್ನು ಮೊಟಕುಗೊಳಿಸಿರುವ ಪೊಲೀಸ್‌ ಅಧಿಕಾರಿಗಳ ಬದಲಿಗೆ ಮುಂಬೈ ಕ್ರೈಂ ಬ್ರಾಂಚ್ ಅಥವಾ ಇನ್ನಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ವರ್ಗಾಯಿಸಬೇಕೆಂದು ಕೋರಿ ಆದ್ನ್ಯಾ ಮನವಿ ಸಲ್ಲಿಸಿದ್ದಾರೆ.

"ಪೊಲೀಸರು ಈ ಅಪರಾಧವನ್ನು ಸರಿಯಾಗಿ ತನಿಖೆ ಮಾಡಿಲ್ಲ . ಜೊತೆಗೆ ಆರೋಪಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸುಳ್ಳು, ನಕಲಿ, ಕಟ್ಟುಕಥೆಯಿಂದ ಕೂಡಿದ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ" ಎಂದು ಆದ್ನ್ಯಾ ತಿಳಿಸಿದ್ದಾರೆ. ಅಲ್ಲದೆ ತನಿಖೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಕೂಡ ಕೋರಿದ್ದಾರೆ.

ಅನ್ವಯ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಅರ್ನಾಬ್‌ ಮತ್ತು ಇಬ್ಬರು ಕಾರಣ ಎಂದು ಆರೋಪಿಸಿ, ಅದ್ನ್ಯಾ ಅವರ ತಾಯಿ ಅಕ್ಷತಾ ನಾಯಕ್ ಎಫ್ಐಆರ್ ದಾಖಲಿಸಿದ ನಂತರ 2018ರ ಪ್ರಕರಣ ಮುನ್ನೆಲೆಗೆ ಬಂದಿದೆ. ನಾಯಕ್‌ ಮಾಲೀಕತ್ವದ ಒಳಾಂಗಣ ವಿನ್ಯಾಸ ಕಂಪೆನಿ ಕಾನ್ಕಾರ್ಡ್ ಡಿಸೈನ್ಸ್ ಪ್ರೈ. ಲಿಮಿಟೆಡ್‌ಗೆ (ಸಿಡಿಪಿಎಲ್) ಪಾವತಿ ಮಾಡಬೇಕಿದ್ದ ಹಣವನ್ನು ಅರ್ನಾಬ್‌ ಬಾಕಿ ಉಳಿಸಿಕೊಂಡ ಕಾರಣ ನಷ್ಟ ಉಂಟಾಯಿತು, ಇದರಿಂದ ಅನ್ವಯ್‌ ಮತ್ತವರ ತಾಯಿ ಆತ್ಮಹತ್ಯೆಯ ಹಾದಿ ಹಿಡಿದರು ಎಂದು ತಿಳಿದುಬಂದಿದೆ.

ಅದ್ನ್ಯಾ ನಾಯಕ್ ಪರ ಹಾಜರಾದ ವಕೀಲ ಸುಬೋಧ್ ದೇಸಾಯಿ ಶನಿವಾರ ಸಲ್ಲಿಸಿದ್ದಾರೆ. ಆದ್ನ್ಯಾ ಮತ್ತು ಅವರ ತಾಯಿ ತನಿಖೆ ಹೇಗೆ ಸಾಗಿದೆ ಎಂಬ ಕುರಿತು ರಾಯಗಢ ಪೊಲೀಸರನ್ನು 2020ರ ಮಾರ್ಚ್‌ವರೆಗೆ ವಿಚಾರಿಸುತ್ತಲೇ ಇದ್ದರು. ಆದರೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬುದನ್ನುಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ಪೋಸ್ಟ್‌ಗಳ ಮೂಲಕ ಅರಿತರು.

ಮೇ ತಿಂಗಳಲ್ಲಷ್ಟೇ ಪೊಲೀಸರು ಎ- ರಿಪೋರ್ಟ್‌ ಮತ್ತಿತರ ದಾಖಲೆಗಳನ್ನು ಆದ್ನ್ಯಾ ಅವರ ತಾಯಿಗೆ ಹಸ್ತಾಂತರಿಸಿದ್ದಾರೆ ಎಂದು ವಕೀಲರಾದ ದೇಸಾಯಿ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ ಪ್ರಕರಣವನ್ನು ಮುಚ್ಚುವಂತೆ ಕೋರಿ ಎ ರಿಪೋರ್ಟ್‌ ಸಲ್ಲಿಸಿದಾಗ ದೂರುದಾರರಾದ ಆದ್ನ್ಯಾ ಅವರ ತಾಯಿಯನ್ನು ಕರೆಸಿ ಸಿಆರ್‌ಪಿಸಿ ಅಡಿ ಕೈಗೊಳ್ಳಬೇಕಾದ ಕಡ್ಡಾಯ ಕಾರ್ಯವಿಧಾನಕ್ಕೆ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರು ಅನುಮತಿ ನೀಡಲಿಲ್ಲ. ಜೊತೆಗೆ ತನಿಖೆ ಪಕ್ಷಪಾತದಿಂದ ಕೂಡಿದ್ದು ಆರೋಪಿಗಳಿಗೆ ಹಾದಿ ಸುಗಮ ಮಾಡಿಕೊಡುವ ನಿಟ್ಟಿನಲ್ಲಿ ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅದ್ನ್ಯಾ ನಾಯಕ್ ಪರ ಹಾಜರಾದ ವಕೀಲ ಸುಬೋಧ್ ದೇಸಾಯಿ ಶನಿವಾರ ಸಲ್ಲಿಸಿದ್ದಾರೆ. ಆದ್ನ್ಯಾ ಮತ್ತು ಅವರ ತಾಯಿ ತನಿಖೆ ಹೇಗೆ ಸಾಗಿದೆ ಎಂಬ ಕುರಿತು ರಾಯಗಢ ಪೊಲೀಸರನ್ನು 2020ರ ಮಾರ್ಚ್‌ವರೆಗೆ ವಿಚಾರಿಸುತ್ತಲೇ ಇದ್ದರು. ಆದರೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬುದನ್ನು ತಾವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ಪೋಸ್ಟ್‌ಗಳ ಮೂಲಕ ಅರಿತಿರುವುದಾಗಿ ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಷ್ಟೇ ಪೊಲೀಸರು ಎ- ರಿಪೋರ್ಟ್‌ ಮತ್ತಿತರ ದಾಖಲೆಗಳನ್ನು ಆದ್ನ್ಯಾ ಅವರ ತಾಯಿಗೆ ಹಸ್ತಾಂತರಿಸಿದ್ದಾರೆ ಎಂದು ವಕೀಲರಾದ ದೇಸಾಯಿ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ ಪ್ರಕರಣವನ್ನು ಮುಚ್ಚುವಂತೆ ಕೋರಿ ಎ- ರಿಪೋರ್ಟ್‌ ಸಲ್ಲಿಸಿದಾಗ ದೂರುದಾರರಾದ ಆದ್ನ್ಯಾ ಅವರ ತಾಯಿಯನ್ನು ಕರೆಸಿ ಸಿಆರ್‌ಪಿಸಿ ಅಡಿ ಕೈಗೊಳ್ಳಬೇಕಾದ ಕಡ್ಡಾಯ ಕಾರ್ಯವಿಧಾನಕ್ಕೆ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರು ಅನುಮತಿ ನೀಡಲಿಲ್ಲ. ಜೊತೆಗೆ ತನಿಖೆ ಪಕ್ಷಪಾತದಿಂದ ಕೂಡಿದ್ದು ಆರೋಪಿಗಳಿಗೆ ಹಾದಿ ಸುಗಮ ಮಾಡಿಕೊಡುವ ನಿಟ್ಟಿನಲ್ಲಿ ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿಯನ್ನು ಇಲ್ಲಿ ಓದಿ:

Adnya_Naik_v__St__of_Mah_.pdf
Preview