ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಮತ್ತು ವಿಪ್ರೋ ಎಂಟರ್‌ಪ್ರೈಸಸ್ ಪ್ರೈ. ಲಿಮಿಟೆಡ್ ತಯಾರಿಸುವ ಲಕ್ಸ್, ಡವ್ ಹಾಗೂ ಪಿಯರ್ಸ್ ಸೋಪ್ ಬ್ರಾಂಡ್‌ಗಳನ್ನು ಅಪಹಾಸ್ಯ ಮಾಡಿದ ಸೀಬಾಮೆಡ್ ಸೋಪ್ ಬ್ರಾಂಡ್ ತಯರಕ ಕಂಪೆನಿಯಾದ ಯುಎಸ್‌ವಿ ಪ್ರೈ ಲಿಮಿಟೆಡ್‌ನ ಜಾಹೀರಾತುಗಳನ್ನು ಮುದ್ರಣ ಅಥವಾ ಇ- ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ಬಾಂಬೆ ಹೈಕೋರ್ಟ್ ಗುರುವಾರ ಶಾಶ್ವತ ನಿರ್ಬಂಧ ವಿಧಿಸಿದೆ.
ಸವಾಲಿಗೆ ಒಳಪಟ್ಟ ಜಾಹಿರಾತಿನ ಎಲ್ಲಾ ಪ್ರತಿಗಳನ್ನು ನಾಶಪಡಿಸುವಂತೆ ನ್ಯಾ. ಎ ಕೆ ಮೆನನ್ ನಿರ್ದೇಶಿಸಿದರಾದರೂ ಮೇಲ್ಮನವಿ ಸಲ್ಲಿಸಬೇಕಿದೆ ಎಂದು ಸೆಬಾಮೆಡ್ ಪರ ವಕೀಲರು ಕೋರಿದ ಹಿನ್ನೆಲೆಯಲ್ಲಿ ನಾಲ್ಕು ವಾರಗಳವರೆಗೆ ಈ ಆದೇಶವನ್ನು ತಡೆಹಿಡಿಯಲಾಯಿತು.
ಎಚ್‌ಯುಎಲ್ ಮತ್ತು ವಿಪ್ರೊ ಪರ ವಕೀಲರು ಆದೇಶಕ್ಕೆ ತಡೆ ನೀಡುವುದನ್ನು ವಿರೋಧಿಸಿದರು. ಆದರೆ ಮೇಲ್ಮನವಿ ವೇದಿಕೆ ಎದುರು ಆದೇಶ ಪ್ರಶ್ನಿಸಲು ಯುಎಸ್‌ವಿಗೆ ಅವಕಾಶ ನೀಡಬೇಕೆಂದು ತಿಳಿಸಿದ ನ್ಯಾ. ಮೆನನ್ ಆದೇಶಕ್ಕೆ ತಡೆ ನೀಡಿದರು.
ಪಿಎಚ್ ಗುಣಮಟ್ಟದ ಕಾರಣಕ್ಕೆ ಲಕ್ಸ್, ಡವ್ ಹಾಗೂ ಪಿಯರ್ಸ್ ಸೋಪುಗಳು ಎಚ್‌ಯುಎಲ್‌ಗೆ ಸೇರಿದ ರಿನ್ ಡಿಟರ್ಜೆಂಟ್‌ಗೆ ಸಮ ಎಂದು ಯುಎಸ್‌ವಿ ತನ್ನ ಜಾಹೀರಾತಿನಲ್ಲಿ ಕುಹಕವಾಡಿತ್ತು.