Chitra Ramkrishna, ED and rouse avenue court 
ಸುದ್ದಿಗಳು

ಫೋನ್ ಕದ್ದಾಲಿಕೆ ಪ್ರಕರಣ: ಎನ್ಎಸ್ಇ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣಗೆ ಜಾಮೀನು ನೀಡಲು ದೆಹಲಿ ನ್ಯಾಯಾಲಯ ನಕಾರ

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

Bar & Bench

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರ ಜಾಮೀನು ಅರ್ಜಿಯನ್ನು ಸಿಬಿಐ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ [ಚಿತ್ರಾ ರಾಮಕೃಷ್ಣ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಈ ಹಿಂದೆ ಚಿತ್ರಾ ಮತ್ತು ತನಿಖಾ ಸಂಸ್ಥೆಯ ವಾದಗಳನ್ನು ಆಗಸ್ಟ್ 25 ರಂದು ಆಲಿಸಿದ್ದ ಸಿಬಿಐ ವಿಶೇಷ ನ್ಯಾಯಾಧೀಶರಾದ ಸುನೇನಾ ಶರ್ಮಾ ಅವರು ಚಿತ್ರಾ ಅವರು ಇಂದು ಅರ್ಜಿಯನ್ನು ವಜಾಗೊಳಿಸಿದರು. ವಿವರವಾದ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಕರಣದಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಫೋನ್‌ಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

ಎನ್‌ಎಸ್‌ಇಯ ಮಾಜಿ ಉದ್ಯೋಗಿ ಆನಂದ್‌ ಸುಬ್ರಮಣಿಯನ್‌ ಅವರ ಹುದ್ದೆ ಮತ್ತು ವೇತನವನ್ನು ಚಿತ್ರಾ ಆಗಾಗ್ಗೆ ಪರಿಷ್ಕರಿಸಿದ್ದಾರೆ ಎಂದು ಆರೋಪಿಸಿ ಸಿಬಿಐ ಮತ್ತು ಇ ಡಿ ಈಗಾಗಲೇ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.

ʼಸಿದ್ಧ ಪುರುಷʼ ಎಂದು ಚಿತ್ರಾ ಬಿಂಬಿಸಿದ್ದ ಎನ್‌ಎಸ್‌ಇಯ ಮತ್ತೊಬ್ಬ ಅಧಿಕಾರಿ ಆನಂದ್‌ ಸುಬ್ರಮಣಿಯನ್‌ ಅವರಿಗೆ ಅಸಮಂಜಸ ರೀತಿಯಲ್ಲಿ ವೇತನ ನಿಗದಿ ಮತ್ತು ಆಗಾಗ್ಗೆ ವೇತನ ಪರಿಷ್ಕರಣೆಯಂತಹ ದುಷ್ಕೃತ್ಯದಲ್ಲಿ ಆಕೆ ತೊಡಗಿದ್ದಾರೆ ಎಂದು ಸೆಬಿ ತನ್ನ ಆದೇಶದಲ್ಲಿ ತಿಳಿಸಿತ್ತು. ಆ ಮೂಲಕ ಹಗರಣ ಬೆಳಕಿಗೆ ಬಂದಿತ್ತು.