ಎಲ್ಲ ಕೈದಿಗಳೂ ಒಂದೇ; ಆಕೆ ವಿಐಪಿಯಲ್ಲ: ಚಿತ್ರಾ ರಾಮಕೃಷ್ಣಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನಿರಾಕರಿಸಿದ ದೆಹಲಿ ನ್ಯಾಯಾಲಯ

ತನಿಖೆಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ. ಎನ್ಎಸ್ಇ ಮಾಜಿ ಮುಖ್ಯಸ್ಥೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ.
Chitra Ramkrishna and Rouse Avenue Courts

Chitra Ramkrishna and Rouse Avenue Courts

A1

ಎನ್‌ಎಸ್‌ಇ ಕೊ-ಲೊಕೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸೋಮವಾರ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ [ಸಿಬಿಐ ಮತ್ತು ಸಂಜಯ್ ಗುಪ್ತಾ ಮತ್ತಿತರರ ನಡುವಣ ಪ್ರಕರಣ].

ಮನೆಯೂಟ,ಪ್ರಾರ್ಥನಾ ಪುಸ್ತಕ, ಮಾಸ್ಕ್‌ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಕೋರಿ ಚಿತ್ರಾ ಪರ ವಕೀಲರು ಮಾಡಿದ ಮನವಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್ ಅಗರ್ವಾಲ್ ತಿರಸ್ಕರಿಸಿದರು. ಎಲ್ಲ ಕೈದಿಗಳೂ ಒಂದೇ; ಆಕೆ ವಿಐಪಿ ಅಲ್ಲ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Also Read
ಕೋ- ಲೊಕೇಷನ್ ಹಗರಣ: ಎನ್ಎಸ್ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ 7 ದಿನಗಳ ಕಾಲ ಸಿಬಿಐ ವಶಕ್ಕೆ

"ವಿಐಪಿ ಕೈದಿಗಳು ಎಲ್ಲವನ್ನೂ ಬಯಸಿದರೆ ಪ್ರತಿ ನಿಯಮವನ್ನೂ ಬದಲಾಯಿಸಬೇಕಾಗುತ್ತದೆ. ಎಲ್ಲ ಕೈದಿಗಳೂ ಒಂದೇ ಸಮಾನ; ಆಕೆ ವಿಐಪಿ ಅಲ್ಲ" ಎಂದು ನ್ಯಾಯಾಲಯ ಹೇಳಿದೆ.

Also Read
‘ಎನ್ಎಸ್ಇ ಇತಿಹಾಸದ ಕರಾಳ ಅವಧಿ’: ಚಿತ್ರಾ ರಾಮಕೃಷ್ಣ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿತು. ಬಳಿಕ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು., ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದಲ್ಲಿ ಚಿತ್ರಾ ಅವರನ್ನು ಸಿಬಿಐ ಬಂಧಿಸಿದ್ದು ಮಾರ್ಚ್ 7 ರಂದು ಏಳು ದಿನಗಳ ಕಾಲ ಅವರನ್ನು ಸಿಬಿಐ ಕಸ್ಟಡಿಗೆ ನೀಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com