<div class="paragraphs"><p>Bulli Bai bail verdict</p></div>

Bulli Bai bail verdict

 
ಸುದ್ದಿಗಳು

ಬುಲ್ಲಿ ಬಾಯ್‌ ಪ್ರಕರಣ: ಮುಂಬೈ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದೇಕೆ?

Bar & Bench

ಬುಲ್ಲಿ ಬಾಯ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರು ಅಪ್ಲಿಕೇಶನ್‌ ಅನ್ನು ಸೃಷ್ಟಿಸಿಲ್ಲ ಎಂದ ಮಾತ್ರಕ್ಕೆ ಅವರನ್ನು ಮುಗ್ಧರು ಎನ್ನಲಾಗದು ಎಂದು ಹೇಳಿರುವ ಮುಂಬೈ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಬಾಂದ್ರಾದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋಮಲ್‌ಸಿಂಗ್‌ ಅವರು “ಜಾಮೀನುರಹಿತ ಅಪರಾಧದ ಹಿನ್ನೆಲೆಯಲ್ಲಿ ಆರೋಪಿಗಳಿಂದ ಸಾಕ್ಷಿ ಸಂಗ್ರಹಿಸಲು ಬಂಧಿಸಲಾಗಿದ್ದು, ಅವರ ಬಂಧನವು ಕಾನೂನುಬಾಹಿರವಲ್ಲ. ಸ್ತ್ರೀಕುಲಕ್ಕೆ ಅವಮಾನ ಮಾಡುವ ಗಂಭೀರ ಕೃತ್ಯವನ್ನು ಅವರು ಎಸಗಿದ್ದಾರೆ. ವಿಸ್ತೃತ ನೆಲೆಯಲ್ಲಿ ಸಮಾಜದ ಹಿತಾಸಕ್ತಿಗೆ ಧಕ್ಕೆಯಾಗಿದ್ದು, ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಬಹುದು” ಎಂದಿದ್ದಾರೆ.

ಬಂಧಿತ ಆರೋಪಿಗಳಾದ ಬೆಂಗಳೂರಿನ ವಿದ್ಯಾರ್ಥಿ ವಿಶಾಲ್‌ ಝಾ, ಉತ್ತರಾಖಂಡದ ನಿವಾಸಿಗಳಾದ ಶ್ವೇತಾ ಸಿಂಗ್‌ ಮತ್ತು ಮಯಾಂಕ್‌ ರಾವತ್‌ ಅವರಿಗೆ ಗುರುವಾರ ಜಾಮೀನು ನಿರಾಕರಿಸಲಾಗಿದೆ. ಎಲ್ಲಾ ಆರೋಪಿಗಳಿಗೂ ಅನ್ವಯವಾಗುವ ವಿಸ್ತೃತವಾದ ಆದೇಶದ ಪ್ರತಿ ಬಿಡುಗಡೆಯಾಗಿದ್ದು, ಬಾರ್‌ ಅಂಡ್‌ ಬೆಂಚ್‌ಗೆ ಅದು ಲಭ್ಯವಾಗಿದೆ.

ತನಿಖೆಯು ಆರಂಭಿಕ ಹಂತದಲ್ಲಿದ್ದು, ವಶಪಡಿಸಿಕೊಳ್ಳಲಾದ ಹಾರ್ಡ್‌ವೇರ್‌ ಮತ್ತು ದತ್ತಾಂಶವನ್ನು ತಜ್ಞರ ಸಹಾಯದಿಂದ ಪರಿಶೀಲಿಸಬೇಕಿದೆ. ಕೆಲವು ದಿನಗಳ ಹಿಂದೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.