e-justice delivery systems and data privacy  
ಸುದ್ದಿಗಳು

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಾವಳಿ 2025: ಕರಡು ನಿಯಮಗಳಿಗಿಂತ ಹೇಗೆ ಭಿನ್ನ?

ನಿಯಮಾವಳಿಯ ವಿವಿಧ ಸೆಕ್ಷನ್ಗಳು ಯಾವಾಗ ಜಾರಿಗೆ ಬರಲಿವೆ ಎಂಬುದರ ಕುರಿತು ಸ್ಪಷ್ಟೀಕರಣ ನೀಡಿರುವುದು ಕರಡು ನಿಯಮಗಳಲ್ಲಿನ ಗಮನಾರ್ಹ ಬದಲಾವಣೆಯಾಗಿದೆ.

Bar & Bench

ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆಗೆ ಸಂಬಂಧಿಸಿದಂತೆ  ಜನವರಿ 3, 2025ರಲ್ಲಿ ಕರಡು ನಿಯಮಾವಳಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಹತ್ತು ತಿಂಗಳ ಬಳಿಕ ನವೆಂಬರ್ 13, 2025 ರಂದು ಕಾಯಿದೆ ಕುರಿತು ಅಧಿಸೂಚನೆ ಪ್ರಕಟಿಸಿದೆ.

ನಿಯಮಾವಳಿಯ ವಿವಿಧ ಸೆಕ್ಷನ್‌ಗಳು ಯಾವಾಗ ಜಾರಿಗೆ ಬರಲಿವೆ ಎಂಬುದರ ಕುರಿತು ಸ್ಪಷ್ಟೀಕರಣ ನೀಡಿರುವುದು ಕರಡು ನಿಯಮಗಳಲ್ಲಿನ ಗಮನಾರ್ಹ ಬದಲಾವಣೆಯಾಗಿದೆ. ನಿಯಮಗಳನ್ನು ಮೂರು ಹಂತಗಳಲ್ಲಿ ಜಾರಿಗೆ ತರಲಾಗುತ್ತಿದೆ.  ವ್ಯಾಖ್ಯಾನಗಳು ಮತ್ತು ದತ್ತಾಂಶ ಸಂರಕ್ಷಣಾ ಮಂಡಳಿ (ಡಿಪಿಬಿ) ಸಂಬಂಧಿತ ನಿಯಮಗಳು ಅಧಿಸೂಚನೆ ಹೊರಡಿಸಿರುವಂದಿನಿಂದಲೇ (ನ.13, 2025) ಜಾರಿಗೆ ಬಂದಿದ್ದು ಸಮ್ಮತಿ ವ್ಯವಸ್ಥಾಪಕರ ನಿಯಮಗಳು ಒಂದು ವರ್ಷದ ನಂತರ (ನವೆಂಬರ್‌ 2026) ಅಸ್ತಿತ್ವಕ್ಕೆ ಬರಲಿವೆ. ನೋಟಿಸ್‌, ದತ್ತಾಂಶ ಅಳಿಸುವಿಕೆ, ಸುರಕ್ಷತೆ ದೂರು ಪರಿಹಾರ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಮುಖ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ನಿಯಮಗಳು 18 ತಿಂಗಳ ನಂತರ ಅನುಷ್ಠಾನಕ್ಕೆ ಬರಲಿವೆ.

ನೋಟಿಸ್‌ ಮತ್ತು ಸಮ್ಮತಿ, ದತ್ತಾಂಶ ಅಳಿಸುವ ಹಕ್ಕು, ದತ್ತಾಂಶ ಸುರಕ್ಷತಾ ಬಾಧ್ಯತೆಗಳು, ದೇಶದ ಹೊರಗೆ ದತ್ತಾಂಶ ವರ್ಗಾವಣೆಯ ನಿಯಮ, ಪ್ರಮುಖ ದತ್ತಾಂಶ ಫಿಡೂಶಿಯರಿಗಳಿಗೆ (ಫಿಡ್ಯೂಷಿಯರಿ - ಮತ್ತೊಬ್ಬರ ಮಾಹಿತಿಯನ್ನು ನಂಬಿಕೆಯಿಂದ ಇರಿಸಿಕೊಂಡಿರುವ ಜವಾಬ್ದಾರಿಯುತ ಸಂಸ್ಥೆ) ಸಂಬಂಧಿಸಿದ ನಿಯಮಗಳು, ಸಮ್ಮತಿ ವ್ಯವಸ್ಥಾಪಕರಿಗೆ ಸಂಬಂಧಿಸಿದಂತೆ ಇರುವ ಮಾನದಂಡಗಳು ಸೇರಿದಂತೆ ಕರಡು ನಿಯಮಗಳಲ್ಲಿದ್ದ ಬಹುತೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಆದರೆ ಪ್ರತಿ ಪ್ರಕ್ರಿಯೆಯಲ್ಲಿ ಸಂಗ್ರಹವಾಗುವ ಎಲ್ಲಾ ವೈಯಕ್ತಿಕ ದತ್ತಾಂಶ, ಟ್ರಾಫಿಕ್ ದತ್ತಾಂಶ, ಲಾಗ್‌ಗಳು, ಕನಿಷ್ಠ ಒಂದು ವರ್ಷ ಕಡ್ಡಾಯವಾಗಿ ದತ್ತಾಂಶ ಕಾಪಿಟ್ಟುಕೊಳ್ಳುವುದು ಎಂಬಂತಹ ಮುಖ್ಯ ಬದಲಾವಣೆಗಳನ್ನು ತರಲಾಗಿದ್ದು ಖಾತೆ ಅಳಿಸಿ ಹಾಕಿದರೂ ಈ ಬಾಧ್ಯತೆ ಅನ್ವಯವಾಗುವಂತೆ ನಿಯಮ ರೂಪಿಸಲಾಗಿದೆ.

ಮಕ್ಕಳ ದತ್ತಾಂಶ ಮತ್ತು ವಿಕಲಚೇತನರ ದತ್ತಾಂಶ ಸಂಬಂಧಿತ ನಿಯಮಗಳನ್ನು ಪ್ರತೇಕಿಸಲಾಗಿದ್ದು ಮಕ್ಕಳಿಗೆ ಸಂಬಂಧಿತ ನಿಯಮ ʼರೂಲ್‌ 10ʼ ಹೆಸರಿನಲ್ಲಿ ಜಾರಿಗೊಂಡಿದ್ದರೆ ವಿಕಲಚೇತನರಿಗೆ ಸಂಬಂಧಿತ ನಿಯಮ ರೂಲ್‌ 11ರ ಹೆಸರಿನಲ್ಲಿ ಅನುಷ್ಠಾನಕ್ಕೆ ಬರುತ್ತಿವೆ.

ರಾಷ್ಟ್ರೀಯ ಭದ್ರತೆ ಸಂಬಂಧಿಸಿದ ಸರ್ಕಾರದ ಖಾಸಗಿ ಮಾಹಿತಿ ಬಹಿರಂಗಪಡಿಸದ ನಿಯಮವನ್ನು ಸ್ವತಂತ್ರವಾಗಿ ರೂಲ್‌ 23(2) ಹೆಸರಿನಲ್ಲಿ ಮತ್ತೆ ಬಳಸಲಾಗುತ್ತಿದೆ.

[ನಿಯಮಾವಳಿಯ ಪ್ರತಿ]

DPDP_Rules_.pdf
Preview