Doctors, Madras HC  
ಸುದ್ದಿಗಳು

ಹೊಮಿಯೋಪತಿ ವೈದ್ಯನ ಅಲೋಪತಿ ಚಿಕಿತ್ಸೆ ಪ್ರಶ್ನಿಸಿ ದೂರು: ಆದರೂ ಪ್ರಕರಣ ರದ್ದುಗೊಳಿಸಿದ್ದೇಕೆ ಮದ್ರಾಸ್ ಹೈಕೋರ್ಟ್?

ಬೋರ್ಡ್ ಆಫ್ ಇಂಡಿಯನ್ ಮೆಡಿಸಿನ್‌ನಲ್ಲಿ ನೋಂದಾಯಿತರಾದ ಆಯುರ್ವೇದ, ಸಿದ್ಧ ಮತ್ತು ಯುನಾನಿ ಪದ್ದತಿಗಳಲ್ಲಿ ಸಾಂಸ್ಥಿಕ ಅರ್ಹ ವೈದ್ಯರು ಅಲೋಪತಿ ಪ್ರಾಕ್ಟೀಸ್ ಮಾಡಲು ಕೂಡ ಅವಕಾಶ ಕಲ್ಪಿಸಿ ತಮಿಳುನಾಡು ಸರ್ಕಾರ ಸುತ್ತೋಲೆ ಹೊರಡಿಸಿತ್ತು.

Bar & Bench

ತಮಿಳುನಾಡು ಬೋರ್ಡ್ ಆಫ್ ಇಂಡಿಯನ್ ಮೆಡಿಸಿನ್‌ನಲ್ಲಿ ನೋಂದಾಯಿಸಲಾದ ಆಯುರ್ವೇದ, ಸಿದ್ಧ ಮತ್ತು ಯುನಾನಿ ವೈದ್ಯರಿಗೆ ಅಲೋಪತಿ ಅಭ್ಯಾಸ ಮಾಡಲು ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ದೇಶನವನ್ನು ಆಧರಿಸಿ ಮದ್ರಾಸ್‌ ಹೈಕೋರ್ಟ್‌ ಅಲೋಪತಿ ಪ್ರಾಕ್ಟೀಸ್‌ ಮಾಡುತ್ತಿದ್ದ ವೈದ್ಯರೊಬ್ಬರ ವಿರುದ್ಧ ಹೂಡಿದ್ದ ಕ್ರಿಮಿನಲ್‌ ಮೊಕದ್ದಮೆಯನ್ನು ಇತ್ತೀಚೆಗೆ ರದ್ದುಗೊಳಿಸಿದೆ [ಡಾ. ಆರ್ ಸೆಂಥಿಲ್‌ಕುಮಾರ್ ಮತ್ತು ಸರ್ಕಾರದ ನಡುವಣ ಪ್ರಕರಣ].

ವಿವಿಧ ವೈದ್ಯಕೀಯ ವಿಜ್ಞಾನಗಳನ್ನು ಪ್ರಾಕ್ಟೀಸ್‌ ಮಾಡುತ್ತಿರುವವರು ತಮ್ಮ ವೈದ್ಯಕೀಯ ಪದ್ಧತಿಯ ಜೊತೆಗೆ ಅಲೋಪತಿಯನ್ನು ಬಳಸಿ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಸುತ್ತೋಲೆ ಆಧರಿಸಿ ನ್ಯಾಯಮೂರ್ತಿ ಆರ್‌ಎಂಟಿ ಟೀಕಾ ರಾಮನ್ ಅವರು ಪ್ರಕರಣ ರದ್ದುಗೊಳಿಸಿದರು.

ಅಲೋಪತಿ ವೈದ್ಯಕೀಯ ಪದ್ಧತಿಯನ್ನು ಪ್ರತ್ಯೇಕವಾಗಿ ಪ್ರಾಕ್ಟೀಸ್‌ ಮಾಡಲು ಅವಕಾಶ ಇಲ್ಲದಿದ್ದರೂ ಚೆನ್ನೈನ ತಮಿಳುನಾಡು ಬೋರ್ಡ್ ಆಫ್ ಇಂಡಿಯನ್ ಮೆಡಿಸಿನ್‌ನಲ್ಲಿ ನೋಂದಾಯಿತರಾದ ಆಯುರ್ವೇದ, ಸಿದ್ಧ ಮತ್ತು ಯುನಾನಿ ಪದ್ದತಿಗಳಲ್ಲಿ ಸಾಂಸ್ಥಿಕವಾಗಿ ಅರ್ಹತೆ ಹೊಂದಿರುವ ವೈದ್ಯರು ಕೋರ್ಸ್‌ನಲ್ಲಿ ಪಡೆದಿದ್ದ ತರಬೇತಿ ಮತ್ತು ಬೋಧನೆ ಆಧಾರದ ಮೇಲೆ ಆಯಾ ವ್ಯವಸ್ಥೆಯಲ್ಲಿ ಅಲೋಪತಿಯೊಂದಿಗೆ ಪ್ರಾಕ್ಟೀಸ್‌ ಮಾಡಬಹುದು ಎಂದು ಸುತ್ತೋಲೆ ಹೇಳಿತ್ತು.

“ಸುತ್ತೋಲೆಯ ಹಿನ್ನೆಲೆಯಲ್ಲಿ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿಯಲ್ಲಿ ನೋಂದಾಯಿತ ವೈದ್ಯರಲ್ಲಿ ಯಾರೊಬ್ಬರ ವಿರುದ್ಧವೂ ಕ್ರಮ ಜರುಗಿಸದೇ ಇರುವುದು ಅನಿವಾರ್ಯವಾಗುತ್ತದೆ. ಅವರು ಶಸ್ತ್ರಚಿಕತ್ಸೆ ಸ್ತ್ರೀರೋಗ ಶಾಸ್ತ್ರ, ಪ್ರಸೂತಿ, ಅರಿವಳಿಕೆ, ಇಎನ್‌ಟಿ, ನೇತ್ರಶಾಸ್ತ್ರ ಇತ್ಯಾದಿ ಒಳಗೊಂಡಂತೆ ಆಧುನಿಕ ವೈಜ್ಞಾನಿಕ ಔಷಧಗಳೊಂದಿಗೆ ಸಂಬಂಧಪಟ್ಟ ಪದ್ದತಿಯನ್ನು (ಆಯುರ್ವೇದ, ಸಿದ್ಧ ಮತ್ತು ಯುನಾನಿ) ಪ್ರಾಕಟೀಸ್‌ ಮಾಡಲು ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ. ಐಪಿಸಿ ಮತ್ತು ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಕಾಯಿದೆಯಡಿ ಅರ್ಜಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Dr_R_Senthilkumar_v_State.pdf
Preview