Chief Justices Court
Chief Justices Court 
ಸುದ್ದಿಗಳು

ಜೀವಮಾನವಿಡೀ ಮನೆಗೆಲಸ ಸೇರಿ ವಿವಿಧ ನೆರವು ಪಡೆಯಲು ವಿಶ್ರಾಂತ ಸಿಜೆಐಗಳಿಗೆ ಅವಕಾಶ: ನಿವೃತ್ತಿ ಬಳಿಕ 5 ವರ್ಷ ಭದ್ರತೆ

Bar & Bench

ನಿವೃತ್ತರಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ತಮ್ಮ ಜೀವಮಾನವಿಡೀ ಮನೆಗೆಲಸದ ಸಹಾಯಕ, ಚಾಲಕ ಹಾಗೂ ಕಾರ್ಯದರ್ಶಿ ಸಹಾಯಕರನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ ನಿವೃತ್ತ ಸಿಜೆಐಗಳು ನಿವೃತ್ತಿಯ ದಿನದಿಂದ 5 ವರ್ಷಗಳ ಕಾಲ ತಮ್ಮ ನಿವಾಸದಲ್ಲಿ ಪ್ರತಿಕ್ಷಣವೂ ಭದ್ರತಾ ಸಿಬ್ಬಂದಿ ಸೌಲಭ್ಯ ಪಡೆಯಬಹುದಾಗಿದೆ.

ಈ ಬದಲಾವಣೆಗಳನ್ನು ತರಲೆಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿಯಮಾವಳಿ 159ಕ್ಕೆ ತಿದ್ದುಪಡಿ ಮಾಡಿದೆ.

ತಿದ್ದುಪಡಿ ಮಾಡಲಾದ ನಿಯಮಗಳ ಪ್ರಕಾರ, ನಿವೃತ್ತ ಸಿಜೆಐ ತಮ್ಮ ನಿವೃತ್ತಿಯ ದಿನದಿಂದ ಆರು ತಿಂಗಳವರೆಗೆ ದೆಹಲಿಯಲ್ಲಿ (ನಿಯೋಜಿತ ಅಧಿಕೃತ ನಿವಾಸವನ್ನು ಹೊರತುಪಡಿಸಿ) ಬಾಡಿಗೆ ರಹಿತವಾದ ಟೈಪ್-VIl ವಸತಿ ಪಡೆಯಲು ಅರ್ಹರು.

ಸುಪ್ರೀಂ ಕೋರ್ಟ್‌ನ ಉಳಿದ ನ್ಯಾಯಮೂರ್ತಿಗಳಿಗೆ ಅವರು ನಿವೃತ್ತರಾದ 1 ವರ್ಷದ ಅವಧಿಗೆ ಇದೇ ರೀತಿಯ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡಲೆಂದು ಇತ್ತೀಚೆಗೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ ನಿಯಮಾವಳಿಗೆ ತಿದ್ದುಪಡಿ ಮಾಡಿತ್ತು.