ಸುಪ್ರೀಂ ಕೋರ್ಟ್‌ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು ಯು ಲಲಿತ್; ವಕೀಲ ವರ್ಗದಿಂದ ನೇರ ಪದೋನ್ನತಿ ಪಡೆದ ಎರಡನೇ ಸಿಜೆಐ

ನ್ಯಾ. ಎಸ್‌ ಎಂ ಸಿಕ್ರಿ ಅವರು ವಕೀಲ ಸಮುದಾಯದಿಂದ ನೇರವಾಗಿ ಪದೋನ್ನತಿ ಪಡೆದ ಮೊದಲ ಸಿಜೆಐ. ಅವರು 1971ರಿಂದ ಏಪ್ರಿಲ್ 1973ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು ಯು ಲಲಿತ್; ವಕೀಲ ವರ್ಗದಿಂದ ನೇರ ಪದೋನ್ನತಿ ಪಡೆದ ಎರಡನೇ ಸಿಜೆಐ
Published on

ನ್ಯಾಯಮೂರ್ತಿ ಯು ಯು ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನ್ಯಾಯಮೂರ್ತಿ ಲಲಿತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

Also Read
ಸಿಜೆಐ ಎನ್‌ ವಿ ರಮಣ ಅವರಿಗೆ ಬೀಳ್ಕೊಡುಗೆ: ಗದ್ಗದಿತರಾದ ಹಿರಿಯ ವಕೀಲ ದುಷ್ಯಂತ್‌ ದವೆ
Justice Sarv Mittra Sikri
Justice Sarv Mittra Sikri

ನ್ಯಾ. ಯು ಯು ಲಲಿತ್ ಅವರು ವಕೀಲ ವರ್ಗದಿಂದ ನೇರವಾಗಿ ಪದೋನ್ನತಿ ಪಡೆದ ಎರಡನೇ ಸಿಜೆಐ ಆಗಿದ್ದಾರೆ. ವಕೀಲ ಸಮುದಾಯದಿಂದ ನೇರವಾಗಿ ಪದೋನ್ನತಿ ಪಡೆದ ನ್ಯಾಯಮೂರ್ತಿಗಳಲ್ಲಿ ಮೊದಲ ಸಿಜೆಐ ಆಗಿ ಕಾರ್ಯ ನಿರ್ವಹಿಸಿದವರು ಎಸ್‌ ಎಂ ಸಿಕ್ರಿ. ಅವರು 1971ರಿಂದ ಏಪ್ರಿಲ್ 1973ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು,

Also Read
ಪ್ರಕರಣಗಳ ಪಟ್ಟಿ ಮಾಡುವ ವ್ಯವಸ್ಥೆಯಲ್ಲಿನ ಲೋಪಗಳನ್ನು ನಿಭಾಯಿಸಲು ಸಾಧ್ಯವಾಗದ ಬಗ್ಗೆ ಸಿಜೆಐ ಎನ್‌ ವಿ ರಮಣ ವಿಷಾದ

ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 9, 1957ರಲ್ಲಿ ಜನಿಸಿದರು. ನ್ಯಾ. ಯು ಯು ಲಲಿತ್‌ ಅವರು ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ಈಗಿನ ಹಿರಿಯ ವಕೀಲ ಯು ಆರ್ ಲಲಿತ್ ಅವರ ಪುತ್ರ . ಜೂನ್ 1983ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ನ್ಯಾ ಯು ಯು ಲಲಿತ್‌ ಡಿಸೆಂಬರ್ 1985ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದರು. 1986ರಲ್ಲಿ ರಾಷ್ಟ್ರ ರಾಜಧಾನಿಗೆ ತೆರಳಿ ಅಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅವರು ಏಪ್ರಿಲ್ 2004ರಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಗಳಾಗಿ ನೇಮಕಗೊಂಡರು.

Also Read
ಜನರನ್ನು ನ್ಯಾಯಾಲಯದ ಹತ್ತಿರಕ್ಕೆ ತರುವುದು ನನ್ನ ವಾರಾಂತ್ಯದ ಉಪನ್ಯಾಸಗಳ ಉದ್ದೇಶವಾಗಿತ್ತು: ಸಿಜೆಐ ಎನ್‌ ವಿ ರಮಣ

ಮುಂದೆ ಅವರು ಆಗಸ್ಟ್ 13, 2014ರಂದು ವಕೀಲ ವರ್ಗದಿಂದ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಇದೇ ವರ್ಷ ನವೆಂಬರ್ 8 ರಂದು ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.

Kannada Bar & Bench
kannada.barandbench.com