Karnataka High Court  
ಸುದ್ದಿಗಳು

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವಕೀಲ ನಾಗೇಂದ್ರ ಆರ್‌ ನಾಯಕ್‌ ಹೆಸರು ಮೂರನೇ ಬಾರಿ ಪುನರುಚ್ಚರಿಸಿದ ಕೊಲಿಜಿಯಂ

ನ್ಯಾಯಮೂರ್ತಿ ಹುದ್ದೆಗೆ ಅವರ ಹೆಸರನ್ನು ಮೊದಲು 2019ರಲ್ಲಿ ಶಿಫಾರಸು ಮಾಡಲಾಗಿತ್ತು. ಬಳಿಕ ಮಾರ್ಚ್ 2021 ಮತ್ತು ಸೆಪ್ಟೆಂಬರ್ 2021ರಲ್ಲಿ ಅವರ ಹೆಸರನ್ನು ಎರಡು ಬಾರಿ ಪುನರುಚ್ಚರಿಸಲಾಗಿತ್ತು.

Bar & Bench

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ವಕೀಲ ನಾಗೇಂದ್ರ ರಾಮಚಂದ್ರ ನಾಯಕ್‌ ಅವರ ನೇಮಕಾತಿ ಪುನುರಚ್ಚರಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ನಿರ್ಧರಿಸಿದೆ.

ಆ ಮೂಲಕ ನಾಯಕ್ ಅವರ ಹೆಸರನ್ನು ಕೊಲಿಜಿಯಂ ಮೂರನೇ ಬಾರಿಗೆ ಪುನರುಚ್ಚರಿಸುತ್ತಿದೆ. ಅವರ ಹೆಸರನ್ನು ಮೊದಲು 2019ರಲ್ಲಿ ಶಿಫಾರಸು ಮಾಡಲಾಗಿತ್ತು. ಬಳಿಕ ಮಾರ್ಚ್ 2021 ಮತ್ತು ಸೆಪ್ಟೆಂಬರ್ 2021ರಲ್ಲಿ ಅವರ ಹೆಸರನ್ನು ಎರಡು ಬಾರಿ ಪುನರುಚ್ಚರಿಸಲಾಗಿತ್ತು.

"ಸುಪ್ರೀಂ ಕೋರ್ಟ್ ಕೊಲಿಜಿಯಂ 10 ಜನವರಿ 2023 ರಂದು ನಡೆದ ಸಭೆಯಲ್ಲಿ, ಮರುಪರಿಶೀಲಿಸಿ, ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿರುವ ಶ್ರೀ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ನ್ಯಾಯಮೂರ್ತಿಯನ್ನಾಗಿ ಮಾಡುವ ಹಿಂದಿನ ಶಿಫಾರಸ್ಸನ್ನು ಪುನರುಚ್ಚರಿಸಲು ನಿರ್ಧರಿಸಿದೆ" ಎಂದು ಮಂಗಳವಾರ ಬಿಡುಗಡೆ ಮಾಡಿದ ಕೊಲಿಜಿಯಂ ಹೇಳಿಕೆ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ಪ್ರಸ್ತುತ 49 ನ್ಯಾಯಮೂರ್ತಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಮಂಜೂರಾದ 62 ನ್ಯಾಯಮೂರ್ತಿ ಹುದ್ದೆಗಳಲ್ಲಿ 13 ಖಾಲಿ ಇವೆ.

[ಕೊಲಿಜಿಯಂ ಪ್ರಕಟಣೆಯನ್ನು ಇಲ್ಲಿ ಓದಿ]

Statement.pdf
Preview