Cheque Bouncing 
ಸುದ್ದಿಗಳು

[ಎನ್‌ ಐ ಕಾಯಿದೆ] ಆರೋಪಿಯ ಅನುಕೂಲಕ್ಕೆ ತಕ್ಕಂತೆ ದೂರು ವರ್ಗಾಯಿಸಲಾಗದು: ಸುಪ್ರೀಂ ಕೋರ್ಟ್

ಅರ್ಜಿದಾರರು ಮಹಿಳೆ ಮತ್ತು ಹಿರಿಯ ನಾಗರಿಕರಾಗಿರುವುದರಿಂದ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಯಾವಾಗ ಬೇಕಾದರೂ ವಿನಾಯಿತಿ ಪಡೆಯಬಹುದು ಎಂದು ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠ ತಿಳಿಸಿತು.

Bar & Bench

ನೆಗೋಷಿಯಬಲ್‌ ಇನ್‌ಸ್ಟ್ರುಮೆಂಟ್‌ ಕಾಯಿದೆಯ ಸೆಕ್ಷನ್ 138ರಡಿ (ವರ್ಗಾವಣೀಯ ಲಿಖಿತಗಳ ಅಧಿನಿಯಮ) ಆರೋಪಿಯ ಅನುಕೂಲಕ್ಕೆ ತಕ್ಕಂತೆ ದೂರು ವರ್ಗಾಯಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಎಸ್ ನಳಿನಿ ಜಯಂತಿ ಮತ್ತು ಎಂ. ರಾಮಸುಬ್ಬಾ ರೆಡ್ಡಿ ನಡುವಣ ಪ್ರಕರಣ].

ಅರ್ಜಿದಾರರು ಮಹಿಳೆ ಮತ್ತು ಹಿರಿಯ ನಾಗರಿಕರಾಗಿರುವುದರಿಂದ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಯಾವಾಗ ಬೇಕಾದರೂ ವಿನಾಯಿತಿ ಪಡೆಯಬಹುದು ಎಂದು ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಅಭಯ್‌ ಎಸ್‌ ಓಕಾ ಅವರಿದ್ದ ಪೀಠ ತಿಳಿಸಿತು.

ಕಾಯಿದೆಯ ಸೆಕ್ಷನ್ 138ರ ಅಡಿ ತನ್ನ ವಿರುದ್ಧ ದಾಖಲಾಗಿರುವ ದೂರನ್ನು ವರ್ಗಾಯಿಸುವಂತೆ ಕೋರಿ ಎಸ್‌ ನಳಿನಿ ಜಯಂತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿನಾಯಿತಿ ನೀಡುವಂತೆ ಅರ್ಜಿದಾರರು ಅರ್ಜಿ ಸಲ್ಲಿಸಿದರೆ, ವಿಚಾರಣಾ ನ್ಯಾಯಾಧೀಶರು ಅದನ್ನು ಅನುಕೂಲಕರವಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ವಿಚಾರಣೆಗೆ ಹಾಜರಾಗುವುದು ಸಂಪೂರ್ಣ ಕಡ್ಡಾಯವಾಗಿದ್ದಾಗ ಮಾತ್ರ ವಿಚಾರಣಾ ನ್ಯಾಯಾಧೀಶರು ಆಕೆಯನ್ನು ಖುದ್ದು ಹಾಜರಾಗಲು ತಿಳಿಸಬೇಕು ಎಂದ ನ್ಯಾಯಾಲಯ ಮನವಿಯನ್ನು ವಜಾಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

S_Nalini_Jayanthi_v__M_Ramasubba_Reddy.pdf
Preview