Kuchipudi , facebook
Kuchipudi , facebook  
ಸುದ್ದಿಗಳು

ಕೂಚಿಪೂಡಿ ಶೈಲಿಗೆ ಕೃತಿಸ್ವಾಮ್ಯ? ಆಕ್ಷೇಪಾರ್ಹ ವಿಚಾರ ತೆಗೆದುಹಾಕುವಂತೆ ಫೇಸ್‌ಬುಕ್‌ಗೆ ಸೂಚಿಸಿದ ಕೇರಳ ನ್ಯಾಯಾಲಯ

Bar & Bench

ಕೂಚಿಪೂಡಿ ಕಲಾವಿದ ದಿವಂಗತ ವೆಂಪಟಿ ರವಿಶಂಕರ್‌ ಅವರ ಶೈಲಿಯ ಮೂಲ ಧ್ವನಿಮುದ್ರಣ ಬಳಸುವುದಕ್ಕೆ ಸಂಬಂಧಿಸಿದಂತೆ ಅವರ ಪತ್ನಿಗೆ ಕೇರಳದ ನ್ಯಾಯಾಲಯವೊಂದು ಶುಕ್ರವಾರ ಮಧ್ಯಂತರ ಪರಿಹಾರ ಒದಗಿಸಿದೆ.

ಆ ಮೂಲಕ ರವಿಶಂಕರ್‌ ಕೃತಿಗಳ ಹಕ್ಕುಸ್ವಾಮ್ಯ ಉಲ್ಲಂಘಿಸಿದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್‌ಗೆ ತಿರುವನಂತಪುರ ಜಿಲ್ಲಾ ನ್ಯಾಯಾಲಯ ನಿರ್ದೇಶಿಸಿದೆ.

ಕೂಚಿಪೂಡಿಯ ಅನೇಕ ನೃತ್ಯ- ನಾಟಕಗಳಲ್ಲಿ ರವಿಶಂಕರ್‌ ಅವರು ತಮ್ಮದೇ ಆದ ಧ್ವನಿಮುದ್ರಣ, ನೃತ್ಯ ಚಲನೆ ಹಾಗೂ ನಾಟಕೀಯತೆಯನ್ನು ಅಭಿವೃದ್ಧಿಗೊಳಿಸಿಕೊಂಡಿದ್ದರು. ಶ್ರೀ ವೆಂಪಟಿ ರವಿಶಂಕರ್ ಶಾಲೆ ಮೂಲಕ ತಾವು ವೆಂಪಟಿ ಅವರ ಪರಂಪರೆ ಮುಂದುವರೆಸುತ್ತಿರುವುದಾಗಿ ಅವರ ಪತ್ನಿ ಸ್ವೀಟಿ ಪ್ರಿಯಾಂಕಾ ವೆಂಪಟಿ ರವಿಶಂಕರ್‌ ಅವರು ಅರ್ಜಿ ಸಲ್ಲಿಸಿದ್ದರು.

ಮುಖ್ಯವಾಗಿ ರವಿಶಂಕರ್‌ ಸಂಯೋಜಿಸಿದ ನಾಲ್ಕು ಧ್ವನಿ ರೆಕಾರ್ಡಿಂಗ್‌ ಕೃತಿಗಳಾದ ಸ್ವಾತಿ ತಿರುನಾಳ್‌ ನೃತ್ಯಂ, ವೆಂಪಟಿ ರವಿಶಂಕರ್‌ ನೃತ್ಯಂ, ವೆಂಪಟಿ ರವಿಶಂಕರ್‌ ನೃತ್ಯಂ- 2 ಹಾಗೂ ವೆಂಪಟಿ ರವಿಶಂಕರ್‌ ನೃತ್ಯಂ-3ಗೆ ಸಂಬಂಧಿಸಿದಂತೆ ತಮಗೆ ಹಕ್ಕಸ್ವಾಮ್ಯ ದೊರೆತಿದೆ. ಅಲ್ಲದೆ ತಮ್ಮ ಪರವಾಗಿ ಹೆಚ್ಚಿನ ಅರ್ಜಿಗಳಿಗೆ ಅನುಮೋದನೆ ದೊರೆಯಲಿದೆ ಎಂಬುದು ಅವರ ವಾದವಾಗಿತ್ತು.

ಕೂಚಿಪೂಡಿ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಅನೇಕ ಅಪಪರಿಚಿತ ವ್ಯಕ್ತಿಗಳು ತಮ್ಮ ಅಧಿಕಾರಪತ್ರ ಅಥವಾ ಅನುಮತಿ ಇಲ್ಲದೆ ಮೂಲ ಧ್ವನಿಮುದ್ರಣಗಳನ್ನು ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿದ್ದಾರೆ. ಇದರಿಂದ ರವಿಶಂಕರ್‌ ಅವರ ಶೈಲಿಯ ಅಧಿಕೃತ ಸ್ವರೂಪವನ್ನು ವಿರೂಪಗೊಳಿಸಿದಂತಾಗುತ್ತಿದೆ. ಇದು ಕೃತಿಸ್ವಾಮ್ಯ ಕಾಯಿದೆ-1957ರ ಸೆಕ್ಷನ್ 14 (ಇ) ಮತ್ತು ಸೆಕ್ಷನ್‌ 57 ರ ಉಲ್ಲಂಘನೆಯಾಗಿದೆ ಫಿರ್ಯಾದಿಯ ನೋಟಿಸ್‌ಗೆ ಗೌರವ ನೀಡಿ ಯೂಟ್ಯೂಬ್‌ ಈಗಾಗಲೇ ಆಕ್ಷೇಪಾರ್ಹ ಲಿಂಕ್‌ಗಳನ್ನು ತೆಗೆದಹಾಕಿದೆ. ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಂ ಇನ್ನೂ ಅದನ್ನು ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಕುತೂಹಲಕರ ಸಂಗತಿ ಎಂದರೆ ವೈಯಕ್ತಿಕ ಗುಣಲಕ್ಷಣಗಳ ಪಟ್ಟಿ ಒಬ್ಬ ಪ್ರಸಿದ್ಧ ವ್ಯಕ್ತಿಯ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕೊಡುಗೆ ನೀಡುತ್ತದೆ ಎಂದಿದ್ದ ಅರ್ಜಿ ಅವರ ಹೆಸರು, ಅಡ್ಡಹೆಸರು, ವೇದಿಕೆನಾಮ, ಚಿತ್ರ, ಹೋಲಿಕೆ, ವ್ಯಕ್ತಿತ್ವ, ಅಸ್ಮಿತೆ, ಕ್ರಿಯೆ, ಅನನ್ಯತೆ ನಡಿಗೆ, ಹವ್ಯಾಸಗಳು, ಶೈಲಿ, ಇತಿಹಾಸ, ಅಂಕಿಅಂಶಗಳು, ವೃತ್ತಿಪರ ವೃತ್ತಿಜೀವನಕ್ಕೆ ಸಂಬಂಧಿಸಿದ ಸಂಗತಿಗಳು, ಸಹಿ, ಅಥವಾ ಗುರುತಿಸಬಹುದಾದ ಯಾವುದೇ ವೈಯಕ್ತಿಕ ಆಸ್ತಿಯನ್ನು ರಕ್ಷಿಸುವ ಅಗತ್ಯವಿದೆ ಎಂದು ಕೋರಿತ್ತು.

ಈ ಹಿನ್ನೆಲೆಯಲ್ಲಿ ರವಿಶಂಕರ್‌ ಅವರ ಕೃತಿಸ್ವಾಮ್ಯ ಉಲ್ಲಂಘನೆಯಾಗದಂತೆ ಶಾಶ್ವತ ತಡೆಯಾಜ್ಞೆಯನ್ನು ನೀಡಬೇಕು ಲಿಖಿತ ಪೂರ್ವಾನುಮತಿ ಇಲ್ಲದೆ ʼವೆಂಪಟಿ ರವಿಶಂಕರ್‌ʼ ಎಂಬ ಹೆಸರನ್ನು ಬಳಸುವುದಕ್ಕೂ ತಡೆ ನೀಡಬೇಕೆಂದು ಮನವಿ ಮಾಡಲಾಗಿತ್ತು.

ವಕೀಲ ರಘುಲ್ ಸುಧೀಶ್ ಅವರು ಉಳಿದ ವಕೀಲರಾದ ಸಿ ಆರ್ ಸುಧೀಶ್, ಜೆ ಲಕ್ಷ್ಮಿ, ಕೆಜೆ ಗ್ಲಾಕ್ಸನ್ ಮತ್ತು ಅಮಲ್ ಜೀಸ್ ಅಲೆಕ್ಸ್ ಅವರೊಂದಿಗೆ ಫಿರ್ಯಾದಿ ಪರ ವಾದ ಮಂಡಿಸಿದರು. ಫೇಸ್‌ಬುಕ್‌ ಪರವಾಗಿ ಪಳನಿಯಾ ಪಿಳ್ಳೈ ವಾದಿಸಿದ್ದರು.