Qutub Minar complex
Qutub Minar complex  
ಸುದ್ದಿಗಳು

ಕುತುಬ್ ಮಿನಾರ್ ಜಮೀನು ಒಡೆತನ: ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

Bar & Bench

ಕುತುಬ್ ಮಿನಾರ್ ಇರುವ ಪ್ರದೇಶದ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ಗಂಗಾ ಮತ್ತು ಯಮುನಾ ನದಿಗಳ ನಡುವಿನ ಆಗ್ರಾದಿಂದ ಗುರುಗ್ರಾಮದವರೆಗಿನ ಎಲ್ಲಾ ಭೂಮಿಯ ಮಾಲೀಕತ್ವ ತಮ್ಮದೆಂದು ವಾದಿಸಿದ್ದ ರಾಜವಂಶಸ್ಥ ಕುಂವರ್ ಮಹೇಂದ್ರ ಧ್ವಜ್ ಪ್ರಸಾದ್ ಸಿಂಗ್ ಅವರು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ವಕೀಲ ಎಂ ಎಲ್ ಶರ್ಮಾ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು.

ಅದರಿಂದ ನಾನು ಈ ಆಸ್ತಿಯ ಕಾನೂನುಬದ್ಧ ಮಾಲೀಕನಾಗಿದ್ದೇನೆ. 1947 ರಲ್ಲಿ ನನಗೆ 3 ವರ್ಷ. ನಾನು ಅಪ್ರಾಪ್ತ ಮಗು. 1947 ರಲ್ಲಿ ಸರ್ಕಾರ ರಚನೆಯಾದ ನಂತರ ಅದು ನನ್ನ ಹಕ್ಕನ್ನು ಪರಿಗಣಿಸದೆ ಪ್ರದೇಶವನ್ನು ಅತಿಕ್ರಮಿಸಿತು ಎಂದು ಅವರು ವಾದಿಸಿದ್ದಾರೆ.

ಆದರೆ ತನ್ನ ಮುಂದಿರುವ ದಾವೆ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ್ದಲ್ಲ ಎಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

ವಿಚಾರಣೆ ಮುಂದೂಡಿಕೆ

ಇದೇ ವೇಳೆ ಕುತುಬ್‌ ಮಿನಾರ್‌ನಲ್ಲಿ ಪೂಜೆ ಮಾಡಲು ಮತ್ತೆ ಅವಕಾಶ ನೀಡುವಂತೆ ಕೋರಿದ್ದ ದಾವೆಯ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 19ಕ್ಕೆ ಮುಂದೂಡಿದೆ.

ಕುತುಬ್ ಸಂಕೀರ್ಣದೊಳಗೆ ದೇವತೆಗಳನ್ನು ಮತ್ತೆ ಪ್ರತಿಷ್ಠಾಪಿಸಬೇಕು ಮತ್ತು ದೇವತೆಗಳ ಪೂಜೆ ಮತ್ತು ದರ್ಶನ ಮಾಡುವ ಹಕ್ಕಿಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ವಿಷ್ಣು ಮತ್ತು ರಿಷಭ್ ದೇವ್ ದೈವಗಳ ಪರವಾಗಿ ವಕೀಲರಾದ ಹರಿಶಂಕರ್ ಜೈನ್ ಮತ್ತು ರಂಜನಾ ಅಗ್ನಿಹೋತ್ರಿ ಅವರು ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯಲ್ಲಿ ಮಧ್ಯಪ್ರವೇಶ ಕೋರಿ ಸಿಂಗ್‌ ಅರ್ಜಿ ಸಲ್ಲಿಸಿದ್ದರು.