Satyendar Jain 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕ ಸತ್ಯೇಂದರ್‌ ಜೈನ್‌ಗೆ ಜಾಮೀನು ಮಂಜೂರು ಮಾಡಿದ ದೆಹಲಿ ನ್ಯಾಯಾಲಯ

ಜಾರಿ ನಿರ್ದೇಶನಾಲಯವು ಜೈನ್‌ ಅವರನ್ನು ಮೇ 2022ರಂದು ಬಂಧಿಸಿದ್ದು, ಅವರು ಈ ನಡುವೆ ಕೆಲ ತಿಂಗಳು ಅವರು ವೈದ್ಯಕೀಯ ಜಾಮೀನಿನ ಮೇಲೆ ಹೊರಗಿದ್ದರು.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್‌ ಆದ್ಮಿ ಪಕ್ಷದ ಹಿರಿಯ ಮುಖಂಡ ಸತ್ಯೇಂದರ್‌ ಜೈನ್‌ಗೆ ದೆಹಲಿ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾರಿ ನಿರ್ದೇಶನಾಲಯವು ಜೈನ್‌ ಅವರನ್ನು ಮೇ 2022ರಂದು ಬಂಧಿಸಿತ್ತು. ಈ ನಡುವೆ ಜೈನ್‌ ಅವರು 2023ರ ಮೇ ಹಾಗೂ 2024ರ ಮಾರ್ಚ್‌ ನಡುವೆ ವೈದ್ಯಕೀಯ ಜಾಮೀನಿನ ಮೇಲೆ ಹೊರಗಿದ್ದರು.

ವಿಚಾರಣೆ ತಡವಾಗುತ್ತಿರುವುದನ್ನು ಹಾಗೂ 18 ತಿಂಗಳಿಂದ ಜೈನ್‌ ಜೈಲಿನಲ್ಲಿರುವ ಅಂಶವನ್ನು ಪರಿಗಣಿಸಿದ ರೋಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ವಿಶಾಲ್‌ ಗೊಗ್ನೆ ಜಾಮೀನು ಮಂಜೂರು ಮಾಡಿ ಆದೇಶಿಸಿದರು.

2022ರ ನವೆಂಬರ್‌ 17ರಂದು ವಿಚಾರಣಾಧೀನ ನ್ಯಾಯಾಲಯ ಮತ್ತು 2023ರ ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್‌ ಜೈನ್‌ ಜಾಮೀನು ಅರ್ಜಿ ತಿರಸ್ಕರಿಸಿದ್ದವು. 2023ರ ಮೇ 30ರಂದು ಸುಪ್ರೀಂ ಕೋರ್ಟ್‌ ಜೈನ್‌ಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತ್ತು.

ಜೈನ್‌ ಅವರು 2015 ಮತ್ತು 2017ರ ನಡುವೆ ಬೇನಾಮಿಯಾಗಿ ಚರ ಆಸ್ತಿ ಖರೀದಿಸಿದ್ದು, ಅದಕ್ಕೆ ಸೂಕ್ತ ದಾಖಲೆ ಒದಗಿಸಿಲ್ಲ ಎಂದು ಸಿಬಿಐ ಭ್ರಷ್ಟಾಚಾರ ನಿಷೇಧ ಕಾಯಿದೆ ಮತ್ತು ಕ್ರಿಮಿನಲ್‌ ದುರ್ನಡತೆ ಆರೋಪದ ಅಡಿ ಸಿಬಿಐ ಪ್ರಕರಣ ದಾಖಲಿಸಿತ್ತು. ಆನಂತರ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.