A1
ಸುದ್ದಿಗಳು

ಇವಿಎಂ ಅಲಭ್ಯ: ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ಡಿಎಚ್‌ಸಿಬಿಎ

ಇವಿಎಂಗಳನ್ನು ಒದಗಿಸಲು ದೆಹಲಿ ವಿಶ್ವವಿದ್ಯಾಲಯ ₹ 1.1 ಕೋಟಿ ಪಾವತಿಸಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಡಿಎಚ್‌ಸಿಬಿಎ ಚುನಾವಣೆ ಮುಂದೂಡಲಾಗಿದೆ.

Bar & Bench

ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಲಭ್ಯ ಇಲ್ಲದಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ವಕೀಲರ ಸಂಘ (ಡಿಎಚ್‌ಸಿಬಿಎ) ದೆಹಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದೆ. [ಡಿಎಚ್‌ಸಿಬಿಎ ಮತ್ತು ದೆಹಲಿ ವಿಶ್ವವಿದ್ಯಾಲಯ ಇನ್ನಿತರರ ನಡುವಣ ಪ್ರಕರಣ].

ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠದೆದುರು ಭಾನುವಾರ ಪಟ್ಟಿ ಮಾಡಲಾಯಿತು. ಕೆಲ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಪ್ರಕರಣದ ಬಗ್ಗೆ ಚರ್ಚೆ ನಡೆಸುವಂತೆ ಎರಡೂ ಕಡೆಯ ವಕೀಲರಿಗೆ ತಿಳಿಸಿದರು. ಮಧ್ಯಾಹ್ನ ಪ್ರಕರಣದ ವಿಚಾರಣೆ ಆರಂಭವಾಗಿದೆ.

ಇವಿಎಂ ಒದಗಿಸಬೇಕಿದ್ದ ದೆಹಲಿ ವಿಶ್ವವಿದ್ಯಾಲಯ (ಡಿಯು) ₹ 1.1 ಕೋಟಿ ಪಾವತಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಡಿಎಚ್‌ಸಿಬಿಎ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಚುನಾವಣಾ ವಂಚನೆ ಆರೋಪದ ಹಿನ್ನೆಲೆಯಲ್ಲಿ 2019ರ ಚುನಾವಣೆಗೆ ಒದಗಿಸಿದ್ದ ಯಂತ್ರಗಳನ್ನು ಪಟಿಯಾಲ ಹೌಸ್ ನ್ಯಾಯಾಲಯದ ಆದೇಶದಂತೆ ಸಂರಕ್ಷಿಸಿಡಲಾಗಿದೆ ಎಂದು ವಾದಿಸಿ ವಿವಿ ಹಣಕ್ಕೆ ಬೇಡಿಕೆ ಇಟ್ಟಿದೆ. ಆದರೆ ಇವಿಎಂಗಳನ್ನು ಸಂರಕ್ಷಿಸುವಂತೆ ನ್ಯಾಯಾಲಯ ಆದೇಶಿಸಿದ್ದು ವಿವಿ ಮನಸೋಇಚ್ಛೆಯ ಹಕ್ಕು ಚಲಾಯಿಸಿ ಚುನಾವಣಾ ಪ್ರಕ್ರಿಯೆ ಅಡ್ಡಿಪಡಿಸಲು ಅನುಮತಿ ನೀಡಬಾರದು ಎಂದು ಡಿಎಚ್‌ಸಿಬಿಎ ನ್ಯಾಯಾಲಯವನ್ನು ಕೋರಿದೆ.

ಇದೇ ವೇಳೆ ಡಿಎಚ್‌ಸಿಬಿಎ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಆರಂಭವಾಗಲಿದ್ದು, ಸೆಪ್ಟೆಂಬರ್ 28ರಂದು ಮತದಾನ ನಿಗದಿಪಡಿಸಲಾಗಿದೆ.