A1
A1
ಸುದ್ದಿಗಳು

ಹಾಕಿ ಇಂಡಿಯಾ ನಿರ್ವಹಣೆಗೆ ಆಡಳಿತಾಧಿಕಾರಿಗಳ ತ್ರಿಸದಸ್ಯ ಸಮಿತಿ ನೇಮಿಸಿದ ದೆಹಲಿ ಹೈಕೋರ್ಟ್

Bar & Bench

ಕಾನೂನುಬದ್ಧವಾಗಿ ನಿರ್ವಹಣಾ ಸಮಿತಿ ಚುನಾಯಿತವಾಗುವವರೆಗೆ ಹಾಕಿ ಇಂಡಿಯಾದ ವ್ಯವಹಾರಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ದೆಹಲಿ ಹೈಕೋರ್ಟ್‌ ತ್ರಿಸದಸ್ಯ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ನೇಮಿಸಿದೆ.

ಸಮಿತಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅನಿಲ್ ಆರ್ ದವೆ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಡಾ ಎಸ್ ವೈ ಖುರೇಷಿ, ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಜಾಫರ್ ಇಕ್ಬಾಲ್ ಅವರನ್ನು ಒಳಗೊಂಡಿರುತ್ತದೆ.

ಕ್ರೀಡಾ ಸಂಹಿತೆ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಅನುಗುಣವಾಗಿ ಸಂವಿಧಾನದ ಪ್ರಕಾರ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡುವವರೆಗೆ ಈ ಸಮಿತಿ ವಿಷಯಗಳನ್ನು ನಿರ್ವಹಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ನಜ್ಮಿ ವಜಿರಿ ಮತ್ತು ಸ್ವರಣಾ ಕಾಂತ ಶರ್ಮಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಜೊತೆಗೆ ಹಾಕಿ ಇಂಡಿಯಾದಲ್ಲಿ 'ಆಜೀವ ಅಧ್ಯಕ್ಷ', 'ಆಜೀವ ಸದಸ್ಯ' ಹಾಗೂ 'ವ್ಯವಸ್ಥಾಪನಾ ಸಮಿತಿಯ ಸಿಇಒ' ಹುದ್ದೆಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಹೊಸ ಸಂವಿಧಾನವನ್ನು ಸಿಒಎ 20 ವಾರಗಳಲ್ಲಿ ಅಂಗೀಕರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Hockey_India_judgment.pdf
Preview