ಕಾನೂನು ಪುಸ್ತಕಗಳು 
ಸುದ್ದಿಗಳು

ಲೆಕ್ಸಿಸ್‌ನೆಕ್ಸಿಸ್‌ ಹೆಸರಿನಲ್ಲಿ ನಕಲಿ ಪಠ್ಯಪುಸ್ತಕ ಮಾರಾಟಕ್ಕೆ ದೆಹಲಿ ಹೈಕೋರ್ಟ್ ತಡೆ

ಮೂರು ಕೃತಿಗಳ ನಕಲಿ ಪ್ರತಿಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಲೆಕ್ಸಿಸ್ ನೆಕ್ಸಿಸ್ ದೂರಿತ್ತು.

Bar & Bench

ಪಠ್ಯಪುಸ್ತಕ ಪ್ರಕಾಶನ ಸಂಸ್ಥೆ ಲೆಕ್ಸಿಸ್ ನೆಕ್ಸಿಸ್‌ ಕೃತಿಗಳಾದ ʼದ ಇಂಡಿಯನ್‌ ಕಾಂಟ್ರಾಕ್ಟ್‌ ಅಂಡ್‌ ಸ್ಪೆಸಿಫಿಕ್‌ ರಿಲೀಫ್‌ ಆಕ್ಟ್ಸ್‌ʼ, ʼಇಂಟರ್‌ಪ್ರಿಟೇಷನ್‌ ಆಫ್‌ ಸ್ಟಾಚುಯೇಟ್ಸ್‌ʼ ಹಾಗೂ ʼದ ಕೋಡ್‌ ಆಫ್‌ ಸಿವಿಲ್‌ ಪ್ರೊಸೀಜರ್‌ʼ ಕೃತಿಗಳ ನಕಲಿ ಪ್ರತಿಗಳನ್ನು ಮಾರಾಟ ಮಾಡದಂತೆ ದೆಹಲಿ ಹೈಕೋರ್ಟ್‌ ಈಚೆಗೆ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಿದೆ.

ಪಾರ್ಥ್‌ ಲಾ ಹೌಸ್‌ ಹಾಗೂ ಅನಾಮಧೇಯ ವ್ಯಕ್ತಿಗಳು ಕಡಿಮೆ ಗುಣಮಟ್ಟದ ಹಾಗೂ ಸುಲಭವಾಗಿ ಒರೆಸಿದರೆ ಅಳಿದುಹೋಗುವ ಹೋಲೋಗ್ರಾಂ ಹೊಂದಿರುವ ನಕಲಿ ಪಾಠ್ಯಪುಸ್ತಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಫೆಬ್ರವರಿ 17ರಂದು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರು ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಮೇಲ್ನೋಟಕ್ಕೆ ಹಕ್ಕುಸ್ವಾಮ್ಯ ಮತ್ತು ವಾಣಿಜ್ಯ ಚಿಹ್ನೆ ಉಲ್ಲಂಘನೆ ನಡೆದಿದೆ. ಸಮಂಜಸತೆಯ ಸಮತೋಲನ ಲೆಕ್ಸಿಸ್‌ ನೆಕ್ಸಿಸ್ ಪರವಾಗಿದೆ ಎಂದ ನ್ಯಾಯಾಲಯ ಏಕಪಕ್ಷೀಯ ಪ್ರತಿಬಂಧಕಾಜ್ಞೆ ಹೊರಡಿಸಿತು.

ಪೊಲಾಕ್ ಮತ್ತು ಮುಲ್ಲಾ ಅವರು ಬರೆದಿರುವ ʼದ ಇಂಡಿಯನ್‌ ಕಾಂಟ್ರಾಕ್ಟ್‌ ಅಂಡ್‌ ಸ್ಪೆಸಿಫಿಕ್‌ ರಿಲೀಫ್‌ ಆಕ್ಟ್ಸ್‌ʼ  (17ನೇ ಆವೃತ್ತಿ), ಎನ್.ಎಸ್. ಬಿಂದ್ರಾ  ಅವರ ಕೃತಿ ʼಇಂಟರ್‌ಪ್ರಿಟೇಷನ್‌ ಆಫ್‌ ಸ್ಟಾಚುಯೇಟ್ಸ್‌ʼ (13 ನೇ ಆವೃತ್ತಿ)  ಹಾಗೂ ಮುಲ್ಲಾ ಅವರ ʼದ ಕೋಡ್‌ ಆಫ್‌ ಸಿವಿಲ್‌ ಪ್ರೊಸೀಜರ್‌ʼ (20ನೇ ಆವೃತ್ತಿ)ಗೆ ಸಂಬಂಧಿಸಿದಂತೆ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ.

ನಕಲಿ ಪುಸ್ತಕಗಳು ಮೂಲ ಪ್ರತಿಗಳಂತೆಯೇ ಕಾಣುವಂತೆ ಮುದ್ರಿಸಲಾಗಿತ್ತು. ಜೊತೆಗೆ ಲೆಕ್ಸಿಸ್‌ನೆಕ್ಸಿಸ್‌ನ ನೋಂದಾಯಿತ ವಾಣಿಜ್ಯ ಚಿಹ್ನೆಗಳು ಹಾಗೂ ನಕಲಿಸಿದ ಪಠ್ಯ ಬಳಸಲಾಗಿತ್ತು. ಆದರೆ ಮುದ್ರಣದ ಗುಣಮಟ್ಟ ಕಳಪೆಯಾದುದಾಗಿತ್ತು ಎಂದು ಲೆಕ್ಸಿಸ್‌ನೆಕ್ಸಿಸ್‌ ದೂರಿತ್ತು.

ಅವುಗಳಲ್ಲಿ ಇರುವ ಹೋಲೋಗ್ರಾಂಗಳನ್ನು ಒರೆಸಿದರೆ ಅಳಿದುಹೋಗುತ್ತಿತ್ತು ಮತ್ತು QR ಕೋಡ್‌ಗಳು ಪ್ರಮಾಣೀಕರಣ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಿರಲಿಲ್ಲ. ಅಸಲಿ ಪುಸ್ತಕಗಳಲ್ಲಿ ಐಎಸ್‌ಬಿಎನ್‌ ಸ್ಕ್ಯಾನ್ ಮೂಲಕ ಪ್ರಕಾಶಕರ ವೇದಿಕೆಯಲ್ಲಿ ಪರಿಶೀಲನೆ ಸಾಧ್ಯವಿದೆ ಎಂದು ತಿಳಿಸಲಾಯಿತು. ಲೆಕ್ಸಿಸ್‌ನೆಕ್ಸಿಸ್ ಪರವಾಗಿ ಹಿರಿಯ ವಕೀಲ ಜೆ. ಸಾಯಿ ದೀಪಕ್ ಸೇರಿದಂತೆ ವಿವಿಧ ವಕೀಲರು ವಾದ ಮಂಡಿಸಿದರು.

[ಆದೇಶದ ಪ್ರತಿ]

LexisNexis_v_Parth_Law_House___Anr.pdf
Preview