Students exam 
ಸುದ್ದಿಗಳು

ಸಿಜಿಎಲ್ಇ 2024 ಫಲಿತಾಂಶಕ್ಕೆ ತಕರಾರು: ಎಸ್ಎಸ್‌ಸಿಗೆ ದೆಹಲಿ ಹೈಕೋರ್ಟ್ ನೋಟಿಸ್

ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ 92 ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Bar & Bench

ಕಳೆದ ವರ್ಷದ ಅಂದರೆ 2024ನೇ ಸಾಲಿನ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಯ (ಸಿಜಿಎಲ್‌ಇ), ಅಂತಿಮ ಫಲಿತಾಂಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸಿಬ್ಬಂದಿ ನೇಮಕಾತಿ ಆಯೋಗಕ್ಕೆ (ಎಸ್‌ಎಸ್‌ಸಿ) ದೆಹಲಿ ಹೈಕೋರ್ಟ್‌ ನೋಟಿಸ್‌ ನೀಡಿದೆ. [ದೇವ್ಯಾಂಶು ಸೂರ್ಯವಂಶಿ ಮತ್ತಿತರರು ಹಾಗೂ ಸಿಬ್ಬಂದಿ ನೇಮಕಾತಿ ಆಯೋಗ ಇನ್ನಿತರರ ನಡುವಣ ಪ್ರಕರಣ].

ಸಿಜಿಎಲ್‌ಇ ಎಂಬುದು ಭಾರತ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಗ್ರೂಪ್ ಬಿ ಮತ್ತು ಸಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಎಸ್‌ಎಸ್‌ಸಿ ನಡೆಸುವ ಪರೀಕ್ಷೆ.

ಎಸ್ಎಸ್‌ಸಿ ದೋಷಪೂರಿತ ಮತ್ತು ಅಪಾರದರ್ಶಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಕೈಗೊಂಡಿದೆ. ಎಲ್ಲಾ ಅಭ್ಯರ್ಥಿಗಳಿಗೆ ಬೋನಸ್ ಅಂಕಗಳನ್ನು ವಿವೇಚನೆಯಿಲ್ಲದೆ ನೀಡಲಾಗಿದೆ ಎಂದು ದೂರಿ ಅಂತಿಮ ಮೆರಿಟ್ ಪಟ್ಟಿಯಲ್ಲಿ ಹೆಸರು ಇಲ್ಲದ 92 ಅಭ್ಯರ್ಥಿಗಳು, ಹೈಕೋರ್ಟ್‌ಗೆ ಎಂದು ಅರ್ಜಿ ಸಲ್ಲಿಸಿದ್ದಾರೆ.

ಜೂನ್ 25ರಂದು ಎಸ್ಎಸ್‌ಸಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿಗಳಾದ ಮನೋಜ್ ಜೈನ್ ಮತ್ತು ರೇಣು ಭಟ್ನಾಗರ್ ಅವರಿದ್ದ ರಜಾಕಾಲೀನ ಪೀಠ ಇಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.