Delhi Signboard
Delhi Signboard 
ಸುದ್ದಿಗಳು

ದೆಹಲಿ ಪಾಲಿಕೆ ಸ್ಥಾಯಿ ಸಮಿತಿ ಮರುಚುನಾವಣೆ: ಮೇಯರ್ ಶೆಲ್ಲಿ ಒಬೆರಾಯ್ ಆದೇಶಕ್ಕೆ ಹೈಕೋರ್ಟ್ ತಡೆ

Bar & Bench

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸ್ಥಾಯಿ ಸಮಿತಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ಮೇಯರ್ ಶೆಲ್ಲಿ ಒಬೆರಾಯ್ ಅವರು ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಶನಿವಾರ ತಡೆ ನೀಡಿದೆ.

ಬಿಜೆಪಿ ಚುನಾಯಿತ ಸ್ಥಾಯಿ ಸಮಿತಿ ಸದಸ್ಯರಾದ ಕಾವಲ್ಜೀತ್ ಸೆಹ್ರಾವತ್ ಮತ್ತು ಶಿಖಾ ರಾಯ್ ಅವರು ಸಲ್ಲಿಸಿದ ಅರ್ಜಿಯನ್ನು ಮಧ್ಯಾಹ್ನ 3 ಗಂಟೆಗೆ ವಿಶೇಷ ಕಲಾಪದ ಮೂಲಕ ನ್ಯಾಯಮೂರ್ತಿ ಗೌರಂಗ್ ಕಾಂತ್ ಆಲಿಸಿದರು.

ಸೋಮವಾರ ಚುನಾವಣೆ ನಡೆಸುವಂತೆ ಎಎಪಿ ನಾಯಕಿಯಾದ ಮೇಯರ್‌ ಶೆಲ್ಲಿ ಅವರು ಶುಕ್ರವಾರ ಆದೇಶ ಹೊರಡಿಸಿದ್ದರು.  

ಬಿಜೆಪಿ ಮತ್ತು ಎಎಪಿ ತಲಾ ಮೂರು ಸ್ಥಾನಗಳನ್ನು ಗೆದ್ದು ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದರಿಂದ ಮೇಯರ್‌ ಅವರ ಆದೇಶ ಸರಿ ಇಲ್ಲ ಎಂದು ಸೆಹ್ರಾವತ್ ಮತ್ತು ರಾಯ್ ತಮ್ಮ ಮನವಿಯಲ್ಲಿ ತಿಳಿಸಿದ್ದರು. ಆದೇಶಕ್ಕೆ ತಡೆ ನೀಡಿದ ನ್ಯಾಯಾಲಯ ಪ್ರಕರಣವನ್ನು ಮಾರ್ಚ್‌ 22 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

 ಒಂದು ಮತವನ್ನು ಅಸಿಂಧು ಎಂದು ಘೋಷಿಸಿದ್ದ ಮೇಯರ್‌ ಮರುಚುನಾವಣೆಗೆ ಆದೇಶಿಸಿದ ಬಲಿಕ ಪಾಲಿಕೆ ಸಭೆ ಕೆಲ ಉದ್ವಿಗ್ನ ದೃಶ್ಯಗಳಿಗೆ ಸಾಕ್ಷಿಯಾಗಿತ್ತು. ಎಎಪಿ ಮತ್ತು ಬಿಜೆಪಿ ಸದಸ್ಯರು ಕೈ ಕೈ ಮೀಲಾಯಿಸಿದ್ದರಿಂದ ಹಲವರು ಗಾಯಗೊಂಡಿದ್ದರು.