P Chidambaram 
ಸುದ್ದಿಗಳು

ಏರ್‌ಸೆಲ್‌-ಮ್ಯಾಕ್ಸಿಸ್ ಪ್ರಕರಣ: ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ವಿರುದ್ಧದ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ

ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ವಿರುದ್ಧ ಇ ಡಿ ಸಲ್ಲಿಸಿದ್ದ ದೂರನ್ನು ವಿಚಾರಣೆಗೆ ಪರಿಗಣಿಸುವುದಾಗಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಚಿದಂಬರಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Bar & Bench

ಏರ್‌ಸೆಲ್-ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಿ ಚಿದಂಬರಂ ವಿರುದ್ಧದ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ  ನೀಡಿದೆ

ಚಿದಂಬರಂ ಅವರ ವಿರುದ್ಧದ ವಿಚಾರಣೆಗೆ ತಾನು ಪ್ರಕರಣ ಆಲಿಸಲಿರುವ ಮುಂದಿನ ದಿನಾಂಕದವರೆಗೆ ತಡೆ ನೀಡುವುದಾಗಿ  ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಆದೇಶಿಸಿದರು. ಈ ಸಂಬಂಧ ವಿವರವಾದ ಆದೇಶ ನೀಡುವುದಾಗಿ ತಿಳಿಸಿದ ಅವರು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ನೀಡಿದರು.

ಚಿದಂಬರಂ ಅವರು ತಮ್ಮ ಮತ್ತು ಅವರ ಪುತ್ರ ಕಾರ್ತಿ ವಿರುದ್ಧ ಇ ಡಿ ಸಲ್ಲಿಸಿದ ದೂರಿನ ವಿಚಾರಣೆಯನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ವಿರುದ್ಧ ಇ ಡಿ ಸಲ್ಲಿಸಿದ್ದ ದೂರನ್ನು ವಿಚಾರಣೆಗೆ ಪರಿಗಣಿಸುವುದಾಗಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಚಿದಂಬರಂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಚಿದಂಬರಂ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್ ಹರಿಹರನ್ , ಪ್ರಾಸಿಕ್ಯೂಷನ್ ಮಂಜೂರಾತಿ ಇಲ್ಲದೆ ವಿಚಾರಣೆಗೆ ಪರಿಗಣಿಸಲು  ಸಾಧ್ಯವಿಲ್ಲ ಎಂದು ವಾದಿಸಿದರು. ವಕೀಲರಾದ ಅರ್ಷದೀಪ್ ಸಿಂಗ್ ಮತ್ತು ಅಕ್ಷತ್ ಗುಪ್ತಾ ಹರಿಹರನ್ ಅವರಿಗೆ ಸಹಾಯ ಮಾಡಿದರು. ಇ ಡಿ ಪರವಾಗಿ ವಕೀಲ ಜೊಹೆಬ್ ಹೊಸೈನ್ ವಾದ ಮಂಡಿಸಿದರು.

ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದಕ್ಕೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್‌ಐಪಿಬಿ) ನೀಡಿದ ಅನುಮೋದನೆಯಲ್ಲಿ ಅಕ್ರಮ ಕಂಡುಬಂದಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

₹ 3,500 ಕೋಟಿ ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದ ನಡೆದ ಸಮಯದಲ್ಲಿ ಚಿದಂಬರಂ ಮತ್ತು ಅವರ ಮಗ ಕಾರ್ತಿ ಅವರು ಒಪ್ಪಂದಕ್ಕೆ ಎಫ್‌ಐಪಿಬಿ ಸಮ್ಮತಿ ಪಡೆಯಲು ಕಿಕ್‌ಬ್ಯಾಕ್‌ ಪಡೆದಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು. ಸಿಬಿಐ ಮತ್ತು ಇ ಡಿ ಎರಡೂ ಜುಲೈ 2018 ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿದ್ದವು.