Supreme Court and Prayagraj demolitions
Supreme Court and Prayagraj demolitions  
ಸುದ್ದಿಗಳು

ಕಾನೂನುಬದ್ಧವಾಗಿಯೇ ಆಫ್ರೀನ್ ಫಾತಿಮಾ ಮನೆ ಕೂಡ ನೆಲಸಮ: ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರ

Bar & Bench

ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ರಾಜ್ಯದ ಅಧಿಕಾರಿಗಳು ಮನೆ ಮತ್ತಿತರ ಕಟ್ಟಡಗಳನ್ನು ತೆರವುಗೊಳಿಸಿದ್ದನ್ನು ಉತ್ತರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.

ಪ್ರವಾದಿ ಮುಹಮ್ಮದ್‌ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮನೆಗಳನ್ನು ಇತ್ತೀಚೆಗೆ ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಜಮೀಯತ್- ಉಲಾಮಾ- ಎ- ಹಿಂದ್ ಸಲ್ಲಿಸಿದ್ದ ಮನವಿಗೆ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದೆ.

ಪ್ರಯಾಗ್‌ರಾಜ್‌ನಲ್ಲಿ ನಡೆದ ಕಟ್ಟಡ ತೆರವು ಕಾರ್ಯಾಚರಣೆ ನಗರವನ್ನು ಅಕ್ರಮ ಮತ್ತು ಅನಧಿಕೃತ ಕಟ್ಟಡಗಳಿಂದ ಮುಕ್ತಗೊಳಿಸುವ ಯತ್ನದ ಭಾಗವಾಗಿ ಸ್ವಾಯತ್ತ ಸಂಸ್ಥೆಯಾದ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡ ಕ್ರಮವಾಗಿದೆ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.

ಅಫಿಡವಿಟ್‌ನ ಪ್ರಮುಖಾಂಶಗಳು

  • ಪ್ರಯಾಗ್‌ರಾಜ್‌ ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳಿಗೆ ವಿರುದ್ಧವಾಗಿದ್ದ ಅಫ್ರೀನ್ ಫಾತಿಮಾ ಅವರ ತಂದೆ ಜಾವೇದ್ ಮೊಹಮ್ಮದ್ ಅವರ ಮನೆ ತೆರವುಗೊಳಿಸುವ ಪ್ರಕ್ರಿಯೆಯನ್ನು ಗಲಭೆ ನಡೆಯುವುದಕ್ಕೆ ಬಹಳಷ್ಟು ಮೊದಲೇ ಪ್ರಾರಂಭಿಸಲಾಗಿತ್ತು.

  • ಈ ತೆರವು ಪ್ರಕ್ರಿಯೆಯನ್ನೇ ಬೇಕೆಂದು ಆಯ್ದು ಜಮೀಯತ್‌ ಉಲಾಮಾ ಎ ಹಿಂದ್‌ ಅಸಹ್ಯಕರ ಬಣ್ಣ ಬಳಿಯಲು ಯತ್ನಿಸಿದೆ.

  • ತೆರವು ಪ್ರಕ್ರಿಯೆಯಿಂದ ತೊಂದರೆಗೀಡಾದ ನಿಜವಾದ ಕಕ್ಷೀದಾರರು ನ್ಯಾಯಾಲಯದ ಮೊರೆ ಹೋಗಿಲ್ಲ.

  • ತೆಗೆದುಕೊಂಡಿರುವ ಎಲ್ಲಾ ಕ್ರಮಗಳು 1973ರ ಉತ್ತರಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯಿದೆ ಪ್ರಕಾರವಾಗಿವೆ.