NLSIU 
ಸುದ್ದಿಗಳು

ಸ್ಥಳೀಯ ಮೀಸಲಾತಿ: ಎನ್‌ಎಲ್‌ಎಸ್‌ಐಯು ಒಳಗೊಳ್ಳುವಿಕೆ ಯೋಜನೆ ತಿದ್ದುಪಡಿಗೆ ಆಗ್ರಹ

ಎನ್‌ಎಲ್‌ಎಸ್‌ಐಯು ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ನೀಡಬೇಕಾದ್ದು ವಿಶ್ವವಿದ್ಯಾಲಯದ ಕರ್ತವ್ಯ ಮತ್ತು ಆ ಸ್ಥಳೀಯ ಮೀಸಲಾತಿ ವಿಭಾಗದಲ್ಲಿ ಅಖಿಲ ಭಾರತ ರ‍್ಯಾಂಕಿಂಗ್ ಸೇರಿಸಬಾರದು ಎಂದು ಕೋರಲಾಗಿದೆ.

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡುವ ಸಂಬಂಧ ಎನ್‌ಎಲ್‌ಎಸ್‌ಐಯು ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆ 2021-25ಕ್ಕೆ ತಿದ್ದುಪಡಿ ಮಾಡುವಂತೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಆಗ್ರಹಿಸಿದ್ದಾರೆ.

ಈ ಕುರಿತಂತೆ ಅವರು ಎನ್‌ಎಲ್‌ಎಸ್‌ಯು ಕುಲಪತಿ ಪ್ರೊ. ಸುಧೀರ್ ಕೃಷ್ಣಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಎನ್‌ಎಲ್‌ಎಸ್‌ಐಯು ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ನೀಡಬೇಕಾದ್ದು ವಿಶ್ವವಿದ್ಯಾಲಯದ ಕರ್ತವ್ಯ ಮತ್ತು ಆ ಸ್ಥಳೀಯ ಮೀಸಲಾತಿ ವಿಭಾಗದಲ್ಲಿ ಅಖಿಲ ಭಾರತ ರ‍್ಯಾಂಕಿಂಗ್ ಸೇರಿಸಬಾರದು. ಅದಕ್ಕೆ ಅನುವಾಗುವಂತೆ ಎನ್‌ಎಲ್‌ಎಸ್‌ಐಯು ಒಳಗೊಳ್ಳುವಿಕೆ ಮತ್ತು ವಿಸ್ತರಣೆ ಯೋಜನೆ 2021-25ಕ್ಕೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇಲ್ಲವಾದರೆ ಸರ್ಕಾರಕ್ಕೆ ಕಾನೂನು ಶಾಲೆಗೆ ನೀಡುವ ಅನುದಾನವನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರವನ್ನು ಕೋರಲಾಗುವುದು ಮತ್ತು ಕರ್ನಾಟಕ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.